ರಾಮನಗರ (ಮೇ.26): ಕೊರೋನಾ ಸೋಂಕಿತರ ಅನುಕೂಲಕ್ಕಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಡುಗಡೆಯಾಗಿ ನೀಡಿದ್ದು, ಎರಡು ಆಂಬುಲೆನ್ಸ್‌ಗಳನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಂಗಳವಾರ ಹಸ್ತಾಂತರಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ ಅವರಿಗೆ ಕೀಗಳನ್ನು ಹಸ್ತಾಂತರಿಸುವ ಮೂಲಕ ಅಂಬುಲೆನ್ಸ್‌ಗಳನ್ನು ಕೊಡುಗೆಯಾಗಿ ನೀಡಿದರು.
ನಿಖಿಲ್ ಕುಮಾರಸ್ವಾಮಿಗೆ ಜೀವನ ಅಂದ್ರೆ ಏನು ಅಂತ ಅರ್ಥ ಆಗಿದ್ಯಂತೆ!
ಕಲೆದ ವಾರ ಮಾಜಿ ಸಿಎಂ ಕುಮಾರಸ್ವಾಮಿ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ, ಮಾಗಡಿ ಶಾಸಕ ಎ. ಮಂಜು ಹಾಗೂ ಜಿಲ್ಲೆಯ ನಾಲ್ವರು ತಹಸೀಲ್ದಾರ್‌ಗಳ ವರ್ಚುವಲ್ ಸಭೆ ನಡೆಸಿದ್ದರು. ತಹಸೀಲ್ದಾರ್‌ಗಳು ಹಾಗು ಶಾಸಕರೂ ತಮ್ಮ ಕ್ಷೇತ್ರಗಳ ಸ್ಥಿತಿಗತಿಗಳ ಬಗ್ಗೆ ವಿವರಿಸಿದ್ದರು.
ಇಂದು ರಾಮನಗರ ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ, ಕೋವಿಡ್ ರೋಗಿಗಳಿಗಾಗಿ ಆರೋಗ್ಯ ಇಲಾಖೆಗೆ 2 ಆಂಬುಲೆನ್ಸ್ ಹಸ್ತಾಂತರಿಸಿದೆ. pic.twitter.com/ZNkO3SVMtq
— Nikhil Kumar (@Nikhil_Kumar_k)ರಾಮನಗರ ತಹಸೀಲ್ದಾರ್ ತಮ್ಮಲ್ಲಿ ಆಂಬುಲೆನ್ಸ್‌ಗಳ ಕೊರತೆ ಇರುವುದಾಗಿ ಗಮನಕ್ಕೆ ತಂದಿದ್ದು, ಶೀಘ್ರ ಸಮಸ್ಯೆ ಪರಿಹರಿಸುವುದಾಗು ಭರವಸೆ ನೀಡಿದ್ದ ಎಚ್‌ಡಿಕೆ ಇದೀಗ ಆಂಬುಲೆನ್ಸ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಮೂಲಕ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗಲೆಂದು ಿಲ್ಲಾ ಆರೋಗ್ಯ ಇಲಾಖೆಗೆ ಕೊಡುಗೆಯಾಗಿ ನೀಡಿದರು.