Mysuru : ಶೇ. 100 ರಷ್ಟು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಪ್ರಗತಿ ಸಾಧಿಸಲು ಕ್ರಮ

By Kannadaprabha News  |  First Published Oct 8, 2023, 8:49 AM IST

ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಚರ್ಚಿಸಿ, ಶೇ. 100ರಷ್ಟು ಪ್ರಗತಿ ಸಾಧಿಸಲು ಕ್ರಮವಹಿಸುವಂತೆ ಜಿಪಂ ಸಿಇಒ ಕೆ.ಎಂ. ಗಾಯತ್ರಿ ಸೂಚಿಸಿದರು.


 ಮೈಸೂರು :  ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಚರ್ಚಿಸಿ, ಶೇ. 100ರಷ್ಟು ಪ್ರಗತಿ ಸಾಧಿಸಲು ಕ್ರಮವಹಿಸುವಂತೆ ಜಿಪಂ ಸಿಇಒ ಕೆ.ಎಂ. ಗಾಯತ್ರಿ ಸೂಚಿಸಿದರು.

ಜಿಪಂ ಭಾಂಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿ.ಪಿ.ಎಚ್.ಸಿ- ಯು.ಎಚ್.ಸಿ ಕಾರ್ಯಕ್ರಮ ಸಮುದಾಯ ಮಟ್ಟದಲ್ಲಿ ನೀಡುವ ಆರೋಗ್ಯ ಸೇವೆಗಳಾದ ತಾಯಿ ಮತ್ತು ಮಕ್ಕಳ ಆರೋಗ್ಯ, ಮಾನಸಿಕ ಆರೋಗ್ಯ ಸೇವೆಗಳು ಹಾಗೂ ಇತರ ಸಂವಹನ ಕ್ರಿಯಾಶೀಲತೆ, ಅಸಾಂಕ್ರಮಿಕ ರೋಗಗಳಿಗೆ (ಎಚ್ಟಿ, ಡಿಎಂ, ಕ್ಯಾನ್ಸರ್) ಸೇರಿದಂತೆ ಸಮುದಾಯದ ಮಟ್ಟದಲ್ಲಿ ಉಚಿತವಾಗಿ ಆರೋಗ್ಯ ಸೇವೆ ಒದಗಿಸುವುದು. ಉಚಿತವಾಗಿ ಡಯಾಗ್ನೋಸ್ಟಿಕ್ಸ್, ಔಷಧಗಳು ಮತ್ತು ಅಗತ್ಯವಿರುವ ಸೇವೆಯನ್ನು ಸಮುದಾಯಕ್ಕೆ ಒದಗಿಸಲು ಮತ್ತು ತ್ವರಿತವಾಗಿ ಅನುಸರಿಸಲು ಶೀಘ್ರವಾಗಿ ರೆಫರಲ್ ವ್ಯವಸ್ಥೆ ಬಲಪಡಿಸಲು ಅನುಕೂಲವಾಗುತ್ತದೆ ಹಾಗೂ ಸಾರ್ವಜನಿಕರು ಸರ್ಕಾರದಿಂದ ದೊರೆಯುವ ಉಚಿತ ಆರೋಗ್ಯ ಸೇವೆಗಳ ಸದೋಪಯೋಗ ಪಡೆಯಬೇಕು ಎಂದು ಅವರು ತಿಳಿಸಿದರು.

Latest Videos

undefined

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಅನುಷ್ಠಾನಗೊಳ್ಳುತ್ತಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಿ.ಪಿ.ಎಚ್.ಸಿ- ಯು.ಎಚ್.ಸಿ ಕಾರ್ಯಕ್ರಮದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಟ್ಯಾಬ್ಲೆಟ್ ಮೊಬೆಲ್ ವಿತರಿಸಲಾಯಿತು.

ಡಿಎಚ್ಒ ಡಾ.ಪಿ.ಸಿ. ಕುಮಾರಸ್ವಾಮಿ ಮೊದಲಾದವರು ಇದ್ದರು.

click me!