Mysuru : ಗಡಿ ಪ್ರದೇಶದ 371 ಸಂಸ್ಥೆಗಳಿಗೆ 4 ಕೋಟಿ ಅನುದಾನ

By Kannadaprabha News  |  First Published Dec 14, 2022, 5:51 AM IST

ರಾಜ್ಯದ ಗಡಿ ಭಾಗದಲ್ಲಿರುವ ಸುಮಾರು 371 ಸಂಸ್ಥೆಗಳಿಗೆ . 4 ಕೋಟಿ ಅನುದಾನ ನೀಡಲಾಗಿದೆ ಎಂದು ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್‌ ಹೇಳಿದರು.


  ಮೈಸೂರು (ಡಿ.14): ರಾಜ್ಯದ ಗಡಿ ಭಾಗದಲ್ಲಿರುವ ಸುಮಾರು 371 ಸಂಸ್ಥೆಗಳಿಗೆ . 4 ಕೋಟಿ ಅನುದಾನ ನೀಡಲಾಗಿದೆ ಎಂದು ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್‌ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಲ್ಲಿ (budget) ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸ್ವತಂತ್ರ ಭಾರತದ(India)  ಅಮೃತ ಮಹೋತ್ಸವ ಅಂಗವಾಗಿ ಗಡಿ ಪ್ರದೇಶದಲ್ಲಿನ 371 ಸಂಸ್ಥೆಗಳಿಗೆ . 4 ಕೋಟಿ ಅನುದಾನ ನೀಡಲಾಗಿದೆ ಎಂದರು.

Latest Videos

undefined

ಜಿಲ್ಲೆಯ ಸರಗೂರು, ಎಚ್‌.ಡಿ. ಕೋಟೆ ತಾಲೂಕಿನ 4 ಗ್ರಾಪಂಗೆ ಒಟ್ಟಾರೆ . 1.3 ಕೋಟಿ ಅನುದಾನ ನೀಡಲಾಗಿದೆ. ಈ ಪೈಕಿ 80 ಲಕ್ಷ ಅನುದಾನ ಬಳಕೆಯಾಗಿದೆ. ಹರಸಿ ಬರುವವರಿಗೆ ಕೆಲಸ ನೀಡಲಾಗುತ್ತಿದೆ. ಗಡಿ ಪ್ರದೇಶದ ಅಭಿವೃದ್ಧಿ ಕುರಿತಾದ ವರದಿ ಬಂದ ಬಳಿಕ ಹೆಚ್ಚಿನ ಅನುದಾನ ನೀಡುತ್ತೇವೆ ಎಂದು ಅವರು ಹೇಳಿದರು.

ಗಡಿ ಪ್ರದೇಶದಲ್ಲಿ ಜಿಲ್ಲಾ ಪಂಚಾಯಿತಿ ಮೂಲಕ ನರೇಗ ವತಿಯಿಂದ ಕೆಲವು ಕಟ್ಟಡ ನಿರ್ಮಿಸಲಾಗಿದೆ. 8 ವಿಶ್ವವಿದ್ಯಾನಿಲಯಗಳ ಮೂಲಕ ಗಡಿ ಗ್ರಾಮಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಯ ಕುರಿತು ವೈಜ್ಞಾನಿಕ ಅಧ್ಯಯನ ಮಾಡಲಾಗುತ್ತಿದೆ. ಗಡಿ ಭಾಗದಲ್ಲಿನ ಆಚಾರ, ವಿಚಾರ ಮತ್ತು ಸಂಸ್ಕೃತಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಗಡಿ ಭಾಗದ ಹಳ್ಳಿಗಳಲ್ಲಿ ಕೇವಲ ರಸ್ತೆ, ಚರಂಡಿ ನಿರ್ಮಾಣಕ್ಕೆ ಸೀಮಿತರಾಗಬೇಡಿ. ಬದಲಿಗೆ ಗ್ರಾಪಂನ ಬಜೆಟ್‌ನಲ್ಲಿ ಸಾಂಸ್ಕೃತಿಕ ನಿಧಿಯನ್ನು ತೆರೆದು ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡಿ. ಇದರಿಂದ ಆ ಭಾಗದ ಜನರಿಗೆ ಅನುಕೂಲವಾಗುತ್ತದೆ ಎಂದರು.

ಗಡಿಯಲ್ಲಿ ಸೌಹಾರ್ದತೆ ನಿರ್ಮಾಣ:

ಕರ್ನಾಟಕ (Karnataka)  ಮತ್ತು ಮಹಾರಾಷ್ಟ್ರ (Maharshtra) ನಡುವೆ ಗಡಿ ವಿವಾದ ಎಂಬುದಕ್ಕಿಂತ ನೆಲದ ವಿವಾದ ಇದೆ. ಅಲ್ಲಿಯೂ ಸೌಹಾರ್ದತೆ ಮೂಡಿಸಲು ಮುಂದಾಗಿದ್ದೇವೆ. ಗೋವಾ ಮತ್ತು ಕೊಂಕಣಿ ಭಾಗ ಸೇರಿದಂತೆ 3 ಕಡೆ ಕರ್ನಾಟಕ ಭವನ ನಿರ್ಮಿಸಲಾಗುತ್ತಿದೆ. ಗಡಿ ಭಾಗದ ಗ್ರಾಮಗಳಲ್ಲಿ ಶಾಲಾ ಕೊಠಡಿ ನಿರ್ಮಾಣ, ಉಪಕರಣ, ಕಾಂಪೌಂಡ್‌ ನಿರ್ಮಾಣ, ಸಾಂಸ್ಕೃತಿಕ ಭವನ ನಿರ್ಮಾಣ ಮುಂತಾದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಅವರು ಹೇಳಿದರು.

2010ರಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಮತ್ತು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪನವರ ನೇತೃತ್ವದಲ್ಲಿ ಆರಂಭವಾದ ಈ ಪ್ರಾಧಿಕಾರವು ಈಗಲೂ ಗಡಿ ಅಭಿವೃದ್ಧಿಗೆ ಶ್ರಮಿಸುತ್ತಿದೆ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರದ ಜೊತೆ ಗಡಿ ಹಂಚಿಕೊಂಡಿರುವ ಕರ್ನಾಟಕ ರಾಜ್ಯದ 19 ಜಿಲ್ಲೆಯು ಗಡಿ ಪ್ರದೇಶವನ್ನು ಹೊಂದಿದ್ದು, 63 ತಾಲೂಕಿನ 980 ಹಳ್ಳಿಗಳು ಇವೆ ಎಂದು ಅವರು ವಿವರಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ, ್ತ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಜಿಲ್ಲಾಧಿಕಾರಿಗಳು ತಿಂಗಳಲ್ಲಿ ಒಂದು ದಿನವಾದರೂ ಗಡಿ ಭಾಗದ ಗ್ರಾಮಗಳಿಗೆ ಭೇಟಿ ನೀಡಿದರೆ ಅಲ್ಲಿನ ಜನರಲ್ಲಿ ನಮ್ಮ ಅಧಿಕಾರಿಗಳು ಎಂಬ ಭಾವನೆ ಬೆಳೆಯುತ್ತದೆ.

- ಡಾ.ಎಸ್‌. ಸೋಮಶೇಖರ್‌, ಅಧ್ಯಕ್ಷರು, ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರ.

ಮೈಸೂರು ಜಿಲ್ಲೆಯಲ್ಲಿ ಗಿರಿಜನರು ಮತ್ತು ಬಡುಕಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಾಂಸ್ಕೃತಿಕವಾಗಿ ಶ್ರೀಮಂತರಿದ್ದಾರೆ. ಅವರಿಗೆ ಕೌಶಲ್ಯ ತರಬೇತಿ ನೀಡಿದರೆ ಉದ್ಯಮ ಶೀಲಕ್ಕೆ ಆದ್ಯತೆ ನೀಡಲಾಗುವುದು.

- ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ, ಮೈಸೂರು.

ರಾಜ್ಯದ ಗಡಿ ಭಾಗದಲ್ಲಿರುವ ಸುಮಾರು 371 ಸಂಸ್ಥೆಗಳಿಗೆ . 4 ಕೋಟಿ ಅನುದಾನ

click me!