ಟಿ. ನರಸೀಪುರ ತಾಲೂಕಿನಲ್ಲಿ ಇಬ್ಬರನ್ನು ಬಲಿ ಪಡೆದು ಅಟ್ಟಹಾಸ ಮೆರೆಯುತ್ತಿರುವ ಚಿರತೆಗಳು ಅತ್ಯಾಧುನಿಕ ಥರ್ಮಲ್… ದ್ರೋಣ್… ಕಣ್ಣಿಗೂ ಬೀಳುತ್ತಿಲ್ಲ
ಟಿ. ನರಸೀಪುರ (ಡಿ.14) : ಟಿ. ನರಸೀಪುರ ತಾಲೂಕಿನಲ್ಲಿ ಇಬ್ಬರನ್ನು ಬಲಿ ಪಡೆದು ಅಟ್ಟಹಾಸ ಮೆರೆಯುತ್ತಿರುವ ಚಿರತೆಗಳು ಅತ್ಯಾಧುನಿಕ ಥರ್ಮಲ್… ದ್ರೋಣ್… ಕಣ್ಣಿಗೂ ಬೀಳುತ್ತಿಲ್ಲ. ಸೇನೆಯಲ್ಲಿ ಬಳಸುವ ಥರ್ಮಲ್… ದ್ರೋಣ್ ನನ್ನು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಳಕೆ ಮಾಡಿ ಚಿರತೆಗಳನ್ನು ಪತ್ತೆ ಮಾಡಲು ಅರಣ್ಯ ಇಲಾಖೆಯ ಮಾಡಿದ ಪ್ರಯತ್ನಗಳು ಸತತ ವಿಫಲವಾಗುತ್ತಿದೆ. ಮತ್ತೊಂದೆಡೆ ಮೈಸೂರಿನ ನಂಜನಗೂಡಿನಲ್ಲಿ ಚಿರತೆ ಜೊತೆ ಹುಲಿಯ ಕಾಟ ಕೂಡ ಆರಂಭವಾಗಿದೆ.
ಟಿ. ನರಸೀಪುರದಲ್ಲಿ ನರಭಕ್ಷಕ ಚಿರತೆ ಅಟ್ಟಹಾಸ ಮೆರೆದರೆ, ನಂಜನಗೂಡಿನಲ್ಲಿ ಹುಲಿಯ ಉಪಟಳ ಅಡಿ ಇಟ್ಟಿದೆ. ಮೈಸೂರಿನ ನಂಜನಗೂಡು ತಾಲೂಕಿನ ಬಳ್ಳೂರುಹುಂಡಿ ಗ್ರಾಮದಲ್ಲಿ ರೈತ ಸ್ವಾಮಿದಾಸಯ್ಯ ಎಂಬಾತನ ಮೇಲೆ ಹುಲಿ ಎರಗಿದೆ. ತೀವ್ರ ಗಾಯಗೊಂಡ ಗಾಯಾಳುವನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
undefined
ತಿಂಗಳು ಕಳೆದರೂ ಟಿ. ನರಸೀಪುರದ ಹತ್ತಾರು ಗಳಲ್ಲಿ (Village) ಚಿರತೆ ಉಪಟಳ ಇನ್ನೂ ಕೊನೆಯಾಗಿಲ್ಲ. ತಾಲೂಕಿನ ವಡ್ಡಗಲ್ ರಂಗನಾಥ ಸ್ವಾಮಿ ಬೆಟ್ಟ ಹಾಗೂ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಚಿರತೆ ಕಾರಿಡಾರ್‌ನಲ್ಲಿ ಏಳೆಂಟು ಚಿರತೆಗಳು ಅಟ್ಟಹಾಸ ಮೆರೆಯುತ್ತಲೆ ಇದೆ. ಕೇತುಪುರ, ಬೆನಕನಹಳ್ಳಿ, ಉಕ್ಕಲಗೆರೆ, ಹಸುವಟ್ಡಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಚಿರತೆಗಳು ಇನ್ನಿಲ್ಲದ ಕಾಟ ನೀಡುತ್ತಿವೆ. ಮೇಘನಾ ಹಾಗೂ ಮಂಜುನಾಥ್ ಅವರನ್ನು ತಿಂದು ತೇಗಿರುವ ಚಿರತೆ ಹಿಡಿಯಲು ಅರಣ್ಯ (Forest Department) ಇಲಾಖೆಯು ಇದೇ ಮೊದಲ ಬಾರಿಗೆ ಥರ್ಮಲ… ದ್ರೋಣ… ಬಳಸುತ್ತಿದೆ. ಸೇನೆಯಲ್ಲಿ ಬಳಸುವ ಥರ್ಮಲ್… ದ್ರೋಣ್…ನ್ನು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅದರಲ್ಲೂ ಟಿ. ನರಸೀಪುರದಲ್ಲಿ ಚಿರತೆ ಆಪರೇಷನ್‌ಗೆ ಬಳಸಲಾಗಿದೆ. ಹಗಲು ಜೊತೆಗೆ ರಾತ್ರಿ ವೇಳೆಯಲ್ಲಿ ಕೂಡ ಯಾವುದೇ ಚಲನವಲನಗಳನ್ನು ಸೂಕ್ಷ್ಮವಾಗಿ ಪತ್ತೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನ ಥರ್ಮಲ್… ದ್ರೋಣ್…ನಲ್ಲಿದೆ. ಆದರೆ ಕಣ್ಣಿಗೂ ಚಿರತೆಗಳು ಬೀಳುತ್ತಿಲ್ಲ.
ಇಷ್ಟೊಂದು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಚಿರತೆಗಳನ್ನು ಪತ್ತೆ ಮಾಡುವ ಕಾರ್ಯಾಚರಣೆ ನಡೆಸಿದರೂ ವ್ಯಾಘ್ರಗಳನ್ನು ಕಾಣಿಸುತ್ತಿಲ್ಲ. ಐವರು ನುರಿತ ತಂತ್ರಜ್ಞರು ಹಗಲಿರುಳು ಪ್ರಯತ್ನಪಟ್ಟರೂ ಚಿರತೆ ಪತ್ತೆ ಸಾಧ್ಯವಾಗಿಲ್ಲ. ಭಾನುವಾರ ಸಾಕು ಪ್ರಾಣಿಗಳ ಮೇಲೆ ಎರಗಿ ತಿಂದು ಹಾಕಿದ್ದ ಚಿರತೆಗಳು, ಸೋಮವಾರ ನುಗ್ಗೆಹಳ್ಳಿಕೊಪ್ಪಲು ಗ್ರಾಮದಲ್ಲಿ ಮೇಕೆಗಳ ಮೇಲೆ ಅಟ್ಯಾಕ್ ಮಾಡಿ ಅವುಗಳನ್ನು ಭಕ್ಷಿಸಿದೆ.
ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಕಾಟ ಕೊಡುತ್ತಿರುವ ಚಿರತೆಯಿಂದ ಜನರು ಭಯಭೀತರಾಗಿದ್ದಾರೆ. ಈಗಾಗಲೇ ಇಬ್ಬರನ್ನು ಬಲಿ ತೆಗೆದುಕೊಂಡು ಸಾಕು ಪ್ರಾಣಿಗಳನ್ನು ಸ್ವಾಹ ಮಾಡುತ್ತಿರುವ ಚಿರತೆಗಳು ಯಾವಾಗ ತಮ್ಮ ಮೇಲೆ ಎರಗುವುದೊ ಎಂದು ಗ್ರಾಮಸ್ಥರು ಜೀವವನ್ನು ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ.
ಚಿರತೆಯಿಂದ ಆತಂಕಗೊಂಡ ಜನತೆ
ಚಿತ್ರದುರ್ಗ : ರಾಜ್ಯ ರಾಜಧಾನಿಯಲ್ಲಿ ಸದ್ದು ಮಾಡಿದ ಹಾಗೆ ಕೋಟೆನಾಡಿನಲ್ಲಿಯೂ ಚಿರತೆಯೊಂದು ಕಳೆದ ಮೂರು ದಿನಗಳಿಂದ ಜನರ ನಿದ್ದೆಗೆಡಿಸಿದೆ. ಮನೆಯಿಂದ ಜಮೀನುಗಳಿಗೆ ರೈತರು ಹೋಗುವುದಕ್ಕೂ ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದ ಬಳಿ ಕಳೆದ ಮೂರು ದಿನಗಳಿಂದ ಗ್ರಾಮದ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿದ್ದು ಗ್ರಾಮದ ಜನರು ತುಂಭಾ ಭಯಬೀತರಾಗಿದ್ದಾರೆ. ಸದ್ಯ ಎಲ್ಲಾ ರೈತರು ಜಮೀನುಗಳಲ್ಲಿ ಬೆಳೆದು ನಿಂತಿರೋ ಬೆಳೆಗಳು ಕಟಾವಿಗೆ ಬಂದಿರೋ ಸಮಯ ಇದಾಗಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ರೈತರೂ ಜಮೀನುಗಳಿಗೆ ತೆರಳಬೇಕಾಗುತ್ತದೆ. ಆದ್ರೆ ಅಲ್ಲಲ್ಲಿ ಚಿರತೆ ಪ್ರತ್ಯಕ್ಷ ಆಗ್ತಿರೋದ್ರಿಂದ ಏನಾದ್ರು ಅನಾಹುತ ಆದ್ರೆ ಏನ್ ಮಾಡೋದು ಎಂಬ ಆತಂಕದಲ್ಲಿ ಜನರಿ ಬದುಕು ಸಾಗಿಸ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಾಗ, ಬೋನ್ ಅಳವಡಿಕೆ ಮಾಡಲಾಗಿದೆ ಆದ್ರೂ ಕೂಡ ಚಿರತೆ ಸೆರೆ ಆಗಿಲ್ಲ. ಆದಷ್ಟು ಬೇಗ ಚಿರತೆ ಸೆರೆ ಹಿಡಿದು ನಮ್ಮ ಗ್ರಾಮದ ಜನರ ನೆಮ್ಮದಿ ಕಾಪಾಡಬೇಕಿದೆ ಅಂತಾರೆ ಗ್ರಾಮಸ್ಥರು.
ಇನ್ನೂ ಗ್ರಾಮದ ಸುತ್ತಮುತ್ತ ಚಿರತೆ ಪ್ರತ್ಯಕ್ಷ ಆದಾಗಿನಿಂದ ಚಿಕ್ಕ, ಪುಟ್ಟ ಮಕ್ಕಳನ್ನು ಒಬ್ಬಂಟಿಯಾಗಿ ಮನೆಯಿಂದ ಹೊರ ಕಳುಹಿಸಲಿಕ್ಕೂ ಜನರು ಆತಂಕ ಪಡ್ತಿದ್ದಾರೆ. ಈಗಾಗಲೇ ಹೇಳಿದ ಹಾಗೆ ಗ್ರಾಮೀಣ ಭಾಗದಲ್ಲಿ ರೈತರು ಜಾನುವಾರುಗಳ ಸಾಕಾಣಿಕೆ ಹೆಚ್ಚಾಗಿರೋದ್ರಿಂದ ಅವುಗಳಿಗೆ ಮೇವು ಒದಗಿಸಲು ಜಮೀನುಗಳಿಗೆ ಅನಿವಾರ್ಯವಾಗಿ ತೆರಳುವ ಪರಿಸ್ಥಿತಿ ಬರುತ್ತೆ. ಆದ್ರೆ ಕುರುಡಿಹಳ್ಳಿ, ಬಾಲೇನಹಳ್ಳಿ ಸುತ್ತಮುತ್ತ ಗ್ರಾಮದ ರೈತರ ಜಮೀನಿನ ಕಡೆ ಚಿರತೆ ಓಡಾಟ ನಡೆಸ್ತಿರೋದು ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ.
Bengaluru: ಇನ್ನೂ ಪತ್ತೆಯಾಗದ ಚಿರತೆ; ಆತಂಕದಲ್ಲಿ ಜನ
ಅದ್ರಲ್ಲಂತೂ ಜಮೀನುಗಳಿಲ್ಲಿ ನಿರ್ಮಿಸಿರುವ ಕೆಲ ಮನೆಗಳ ಜನರ ಪರಿಸ್ಥಿತಿ ಅಂತು ಹೇಳತೀರದು. ನಾನು ಕೂಡ ಜಮೀನಲ್ಲಿದ್ದಾಗ ಖುದ್ದು ಚಿರತೆ ನೋಡಿ ಭಯದಿಂದ ರೂಮ್ ಗೆ ತೆರಳಿದೆ ಬಳಿಕ ಅದು ಮಾಯವಾಯ್ತು. ಹಾಗಾಗಿ ಯಾವುದೇ ಅನಾಹುತಗಳು ಸಂಭವಿಸುವುದಕ್ಕಿಂತ ಮುಂಚೆಯೇ ಚೀತಾ ಆಪರೇಷನ್ ಸಕ್ಸಸ್ ಆಗಬೇಕಿದೆ ಅಂತಾರೆ ಪ್ರತ್ಯಕ್ಷದರ್ಶಿ.
ಚಿರತೆಗಳು ಊರಿಗೆ ನುಗ್ಗಲು ಕಲ್ಲು ಕ್ವಾರಿ, ಗಣಿ ಕಾರಣ: ಸಂಜಯ್ ಗುಬ್ಬಿ
ಇತ್ತ ರಾಜ್ಯ ರಾಜಧಾನಿಯಲ್ಲಿ ವಾರಗಟ್ಟಲೆ ಜನರ ನೆಮ್ಮದಿ ಹಾಳು ಮಾಡಿ ಚಿರತೆಯೊಂದು ಕೆಲವರ ಪ್ರಾಣ ತೆಗೆದಿತ್ತು. ಆದ್ದರಿಂದ ಭಯ ಭೀತರಾಗಿರೋ ಕುರುಡಿಹಳ್ಳಿ ಗ್ರಾಮದ ಜನರನ್ನ, ಕೂಡಲೇ ಚಿರತೆ ಕಾಟದಿಂದ ಅರಣ್ಯಾಧಿಕಾರಿಗಳು ಮುಕ್ತಿ ಕೊಡಿಸಲಿ ಎಂಬುದು ನಮ್ಮ ಆಶಯ.