ಕೆಆರ್‌ಎಸ್‌ ಜಲಾಶಯದ ಹಿನ್ನೀರಿನಲ್ಲಿ ಕಾರುಣ್ಯ ಟ್ರಸ್ಟ್‌ನ ಮೂವರು ಮುಳುಗಿ ಸಾವು!

By Sathish Kumar KHFirst Published Nov 19, 2023, 4:59 PM IST
Highlights

ಮೈಸೂರಿನ ಕಾರುಣ್ಯ ಮನೆ ಟ್ರಸ್ಟ್‌ನ ಮೂವರು ಕೆಆರ್‌ಎಸ್‌ ಜಲಾಶಯದ ಹಿನ್ನೀರಿನಲ್ಲಿ ಆಟವಾಡುವಾಗ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಭಾನುವಾರ ನಡೆದಿದೆ.

ಮಂಡ್ಯ (ನ.19): ಮೈಸೂರಿನ ಕಾರುಣ್ಯ ಮನೆ ಟ್ರಸ್ಟ್‌ನ ಮೂವರು ಕೆಆರ್‌ಎಸ್‌ ಜಲಾಶಯದ ಹಿನ್ನೀರಿನಲ್ಲಿ ಆಟವಾಡುವಾಗ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಭಾನುವಾರ ನಡೆದಿದೆ. 

ಕನ್ನಡ ನಾಡಿನ ಜೀವನದಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಜಲಾಶಯದ ಹಿನ್ನೀರಿನಲ್ಲಿ ಆಟವಾಡುವಾಗ ಮೂವರು ಮುಳುಗಿ ಸಾವನ್ನಪ್ಪಿದ ದುರ್ಘಟನೆ ಭಾನುವಾರ ನಡೆದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಬ್ಯಾಕ್‌ ವಾಟರ್‌ನಲ್ಲಿ ಆಟವಾಡುವಾಗ ಮೂವರು ಮುಳುಗಿದ್ದಾರೆ. ಭಾನುವಾರ ರಜಾದಿನವಾದ್ದರಿಂದ ಟ್ರಸ್ಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಒಂದು ದಿನದ ಪ್ರವಾಸಕ್ಕೆಂದು ಕಾವೇರಿ ಬ್ಯಾಕ್‌ ವಾಟರ್ ಬಳಿಗೆ ಬಂದಿದ್ದರು. ಆದರೆ, ನೀರಿನಲ್ಲಿ ಆಟವಾಡುವ ವೇಳೆ ಈಜು ಬಾರದಿದ್ದರೂ ಆಳದ ಪ್ರದೇಶಕ್ಕೆ ಒಬ್ಬರು ಹೋಗಿದ್ದಾರೆ. ಇವರನ್ನು ಕಾಪಾಡಲು ಮುಂದಾದ ಮತ್ತಿಬ್ಬರು ನೀರಿನಾಳಕ್ಕೆ ಹೋಗಿದ್ದು, ಮೂವರೂ ಮುಳುಗಿ ಸಾವಿಗೀಡಾಗಿದ್ದಾರೆ.

24 ಕ್ಯಾರೆಟ್‌ ಚಿನ್ನದಲ್ಲಿ ಮಿನಿ ವಿಶ್ವಕಪ್ ಕೆತ್ತಿದ ಸ್ವರ್ಣಶಿಲ್ಪಿ! ಸಮುದ್ರದಾಳದಲ್ಲಿ ಭಾರತಕ್ಕೆ ವಿಶ್‌ ಮಾಡಿದ ಅಭಿಮಾನಿ!

ಇನ್ನು ಮೃತರನ್ನು ಹರೀಶ್ (32), ಜ್ಯೋತಿ(18) ಹಾಗೂ ನಂಜುಂಡ (19) ಎಂದು ಗುರುತಿಸಲಾಗಿದೆ. ಜ್ಯೋತಿ ಮತ್ತು ನಂಜುಂಡ ಕಾರುಣ್ಯ ಮನೆ ಟ್ರಸ್ಟ್‌ನ‌ಲ್ಲಿ ಆಶ್ರಯ ಪಡೆದಿದ್ದರು. ಹರೀಶ್ ಎನ್ನುವವರು ಟ್ರಸ್ಟ್‌ನ ಸಿಬ್ಬಂದಿಯಾಗಿದ್ದರು. ಭಾನುವಾರದ ರಜೆ ಹಿನ್ನೆಲೆಯಲ್ಲಿ ತಾರುಣ್ಯ ಟ್ರಸ್ಟ್‌ನಿಂದ ಒಟ್ಟು 25 ಮಂದಿ ಪ್ರವಾಸಕ್ಕೆಂದು ಬಂದಿದ್ದರು. ದುರಾದೃಷ್ಟವಶಾತ್‌ ಕಾವೇರಿ ಹಿನ್ನೀರಿನಲ್ಲಿ ಆಟವಾಡುವಾಗ ಮೂವರು ಮುಳುಗಿದ್ದಾರೆ. ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿಯಿಂದ ಮೃತದೇಹ ಮೇಲೆತ್ತುವ ಕಾರ್ಯ ಮಾಡುತ್ತಿದ್ದಾರೆ. ಮೂವರ ಪೈಕಿ ಇಬ್ಬರು ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬನ ಮೃದದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. 

ಚಾಮರಾಜನಗರ: ಪ್ರೀತಿಗೆ ಮನಸೋತ ವಧು, ತಂದೆ ಆತ್ಮಹತ್ಯೆ

ಮೃತ ಜ್ಯೋತಿ, ನಂಜುಂಡ ಮೃತದೇಹ ಪತ್ತೆಯಾಗಿದ್ದು, ಇಬ್ಬರ ಮೃತದೇಹ ಪತ್ತೆ ಮತ್ತೊಬ್ಬನ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಇನ್ನು ಪತ್ತೆಯಾದ ಮೃತದೇಹಗಳು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹರೀಶ್ ಮೃತದೇಹಕ್ಕಾಗಿ ಅಗ್ನಿ ಶಾಮಕ ದಳದಿಂದ ಶೋಧ ಮಾಡುತ್ತಿದೆ. ಸತತ ಎರಡು ಗಂಟೆಯಿಂದ ಶೋಧ ಕಾರ್ಯಾಚರಣೆ ಮಾಡಲಾಗುತ್ತಿದೆ.  ಕೆಆರ್‌ಎಸ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

click me!