ರಾಜಕೀಯ ದಿವಾಳಿತನ ಮುಚ್ಚಿಕೊಳ್ಳಲು ಸಲ್ಲದ ಆರೋಪ

By Kannadaprabha News  |  First Published Nov 19, 2023, 9:24 AM IST

ರಾಜಕೀಯ ದಿವಾಳಿ ತನವನ್ನು ಮುಚ್ಚಿಟ್ಟುಕೊಳ್ಳಲು ಅಧಿಕಾರ ಕಾಪಾಡಿಕೊಳ್ಳಲಾಗದ ಹತಾಸೆ ಮನಸ್ಥಿತಿಯಲ್ಲಿರುವ ನಾಯಕರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಟೀಕಿಸಿದರು.


  ಮಳವಳ್ಳಿ :  ರಾಜಕೀಯ ದಿವಾಳಿ ತನವನ್ನು ಮುಚ್ಚಿಟ್ಟುಕೊಳ್ಳಲು ಅಧಿಕಾರ ಕಾಪಾಡಿಕೊಳ್ಳಲಾಗದ ಹತಾಸೆ ಮನಸ್ಥಿತಿಯಲ್ಲಿರುವ ನಾಯಕರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಟೀಕಿಸಿದರು.

ತಾಲೂಕಿನ ಶಿವನಸಮದ್ರದ ಜಲಪಾತದ ಆವರಣದಲ್ಲಿ ಪ್ರವಾಸೋದ್ಯಮ ವತಿಯಿಂದ ಹಮ್ಮಿಕೊಂಡಿರುವ 2.5 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

Latest Videos

undefined

ಅವರದೇ ಪಕ್ಷದ ಶಾಸಕರಾಗಿದ್ದ ಅವಧಿಯಲ್ಲಿ ನಡೆದಿರುವ ಭೂ ಹಗರಣಗಳ ಬಗ್ಗೆ ತನಿಖೆಗೆ ಒತ್ತಾಯಿಸಲಿ, ಮುಜರಾಯಿ ಇಲಾಖೆಗೆ ಸೇರಿದ ಆಸ್ತಿಯನ್ನು ಪುರಸಭೆಯಲ್ಲಿ ಟ್ರಸ್ಟ್ ಹೆಸರಿಗೆ ವರ್ಗಾಯಿಸಿದ್ದಾರೆ. ನಿಮ್ಮ ಮನೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ. ಆದರೆ, ಬೇರೆ ಮನೆಯಲ್ಲಿ ನೊಣ ಸತ್ತು ಬಿದ್ದಿದೆ ಎಂದು ಏಕೆ ಕಿರುಚಾಡುತ್ತೀರಿ ಎಂದು ಪ್ರಶ್ನಿಸಿದರು.

ಬರದ ನಡುವೆಯೂ ಕೂಡ ನಾಡಿನ ಜನತೆ ಹಸಿದು ಬದುಕದಂತೆ ನೆಮ್ಮದಿಯಿಂದ ಸಂಸಾರ ನಡೆಸುವಂತೆ ಕಾಂಗ್ರೆಸ್ ಸರ್ಕಾರ ಚುನಾವಣೆ ಅವಧಿಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದೆ. ಮುಖ್ಯಮಂತ್ರಿ ಕಂಡರೇ ಪ್ರಧಾನಿಗೆ ಭಯ ಹುಟ್ಟಿದೆ. ಅದಕ್ಕಿಂತ ಹೆಮ್ಮೆ ಇನ್ನೇನು ಬೇಕು. ಸಿದ್ದರಾಮಯ್ಯ ಅವರ ಬಗ್ಗೆ ಪ್ರಧಾನಿ ಮೋದಿ ಎಲ್ಲಾ ರಾಜ್ಯದಲ್ಲಿಯೂ ಮಾತನಾಡುತ್ತಾರೆ ಎಂದರೇ ಸಿದ್ದರಾಮಯ್ಯ ಅವರ ಶಕ್ತಿ ಏನೆಂದು ತಿಳಿಯುತ್ತದೆ ಎಂದರು.

ಜನ ಸೇವೆ ಮಾಡಲು ಬಂದಿದ್ದೇವೆ. ಮನೆ, ಮನೆತನ ಬದುಕು ಕಟ್ಟಿಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಜನಸೇವೆ ಆರಂಭಿಸಿದ್ದೇವೆ. ವಿಪಕ್ಷದವರು ಸರ್ಕಾರದ ತಪ್ಪುಗಳಲ್ಲಿ ಹೇಳಿದರೇ ಸ್ವಾಗತಿಸುತ್ತೇವೆಂದು ತಿಳಿಸಿದರು.

ಗಗನಚುಕ್ಕಿ ಜಲಪಾತ ಪ್ರವಾಸಿ ತಾಣವನ್ನು ಅಭಿವೃದ್ಧಿಗೊಳಿಸಲು ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸುಸಜ್ಜಿತ ಶೌಚಾಲಯ, ರಸ್ತೆ ಅಭಿವೃದ್ಧಿ, ಸ್ವಾಗತ ಕಮಾನುಗಳು, ಸುರಕ್ಷತೆ ಬೇಲಿ ನಿರ್ಮಾಣ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಮಹದೇವಮ್ಮ, ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ರಘು, ಮುಖಂಡರಾದ ಮಹದೇವು, ಮಂಜುಳ, ಶಿವಮಾದೇಗೌಡ, ಬಂಕ್‌ಮಹದೇವು. ಜಿಪಂ ಮಾಜಿ ಸದಸ್ಯ ವಿಶ್ವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಷ್, ಗ್ರಾ,ಪಂ ಮಾಜಿ ಅಧ್ಯಕ್ಷ ಸಿ.ಪಿ ರಾಜು, ಬಾಚನಹಳ್ಳಿ ರವೀಂದ್ರ, ಮಹೇಶ್ ಸೇರಿದಂತೆ ಇತರರು ಇದ್ದರು.

ಕುತೂಹಲ ಕೆರಳಿಸಿದ  ರೆಸಾರ್ಟ್ ರಾಜಕೀಯ

ಚಿಕ್ಕಮಗಳೂರು(ನ.18):  ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ  ತಮ್ಮ ಹಲವು ಶಾಸಕರುಗಳೊಂದಿಗೆ ವಾಸ್ತವ್ಯ ಹೂಡಿರುವ ಕಾರಣಕ್ಕೆ ಚಿಕ್ಕಮಗಳೂರುಬತಾಲ್ಲೂಕಿನ ಹೊಸಪೇಟೆ ಸಮೀಪ ಹನಿಡ್ಯೂ ರೆಸಾರ್ಟ್ ಈಗ ರಾಜಕೀಯವಾಗಿ ಕುತೂಹಲದ ಕೇಂದ್ರವಾಗಿದೆ.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರ ಮಗಳ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮವು ನಾಳೆ ( ಭಾನುವಾರ )  ಸಿಲ್ವರ್ ಗೇಟ್ ರೆಸಾರ್ಟ್‌ನಲ್ಲಿ ನಡೆಯಲಿರುವ ಕಾರಣಕ್ಕೆ ಕುಮಾರಸ್ವಾಮಿ ಅವರು ಆಗಮಿಸಿದ್ದಾರೆ ಆದರೆ, ಇದೇ ನೆಪದಲ್ಲಿ ತಮ್ಮ ಪಕ್ಷದ ಎಲ್ಲಾ ಶಾಸಕರ ಕರೆಸಿಕೊಂಡಿರುವುದು, ರಾಜಕೀಯ ಸಭೆ-ಸಮಾಲೋಚನೆಗಳು ನಡೆಯುತ್ತಿರುವುದು ಹಲವು ರೀತಿಯ ಚರ್ಚೆಗಳಿಗೆ ದಾರಿಮಾಟಿಕೊಟ್ಟಿದೆ.

ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಫುಲ್ ಆಕ್ಟಿವ್; ಸರ್ಕಾರದ ವಿರುದ್ಧ ಪೋಸ್ಟರ್ ಅಭಿಯಾನ!

ಶಾಸಕರುಗಳನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ? 

ರಾಜ್ಯ ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ಹೆಜ್ಜೆ ಹೆಜ್ಜೆಗೂ ಮೊನಚು ಮಾತುಗಳಿಂದ ಟೀಕಿಸುತ್ತಿರುವ ಕುಮಾರಸ್ವಾಮಿ ಅವರ ವಿರುದ್ಧ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಾದಿಯಾಗಿ ಇಡೀ ಸರ್ಕಾರವೇ ರೊಚ್ಚಿಗೆದ್ದಿದೆ. ಇದೇ ಕಾರಣಕ್ಕೆ ಜೆಡಿಎಸ್ ಶಾಸಕರುಗಳನ್ನು ಸೆಳೆದು ಶಾಸ್ತಿ ಮಾಡಬೇಕು ಎಂದು ಶಪಥಗೈದಂತಿರುವ ಸಿಎಂ, ಡಿಸಿಎಂ ಹಲವು ಶಾಸಕರಿಗೆ ಗಾಳ ಹಾಕಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದ್ದಂತೆ ಕುಮಾರಸ್ವಾಮಿ ಅವರು ಶಾಸಕರುಗಳನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಸಿದ್ದಾರೆ, ಇದೇ ಕಾರಣಕ್ಕೆ ರೆಸಾರ್ಟ್ ರಾಜಕೀಯಕ್ಕೆ ಮುಂದಾಗಿದ್ದಾರೆ ಎನ್ನುವ ಅಭಿಪ್ರಾಯಗಳು ಕೇಳಿಬಂದಿವೆ. ಇದಕ್ಕೆ ಕೆಲವರು ಡಿ.ಕೆ.ಶಿವಕುಮಾರ್-ಜಿ.ಟಿ.ದೇವೇಗೌಡ ಅವರ ಭೇಟಿ ವಿಚಾರವನ್ನು ಸಮರ್ಥನೆಯಾಗಿ ನೀಡುತ್ತಿದ್ದಾರೆ.

ಆದರೆ ಸಧ್ಯಕ್ಕೆ ರಾಜ್ಯ ರಾಜಕಾರಣದಲ್ಲಿ ಅಂತಹ ಪರಿಸ್ಥಿತಿ ತಲೆದೋರಿಲ್ಲ. ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಅನಿವಾರ್ಯ ಎನ್ನುವ ಸನ್ನಿವೇಶವೂ ಸೃಷ್ಠಿಯಾಗಿಲ್ಲ. ಇನ್ನು ಕೆಲವು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಚಿಂತನೆ ನಡೆಸಿದ್ದರೂ ಅವರನ್ನು ರೆಸಾರ್ಟ್‌ನಲ್ಲಿ ಎಷ್ಟು ದಿನ ಹಿಡಿದಿಟ್ಟುಕೊಳ್ಳಲು ಸಾಧ್ಯ? ಎಂದು ಪ್ರಶ್ನಿಸುವ ಜೆಡಿಎಸ್ ಮುಖಂಡರು, ವಿಶೇಷ ಸಂದರ್ಭಕ್ಕೆ ಒಂದೆಡೆ ಸೇರಿದ ಅವಕಾಶವನ್ನು ಬಳಸಿಕೊಂಡು ಸಧ್ಯದ ರಾಜಕೀಯ ವಿಧ್ಯಮಾನಗಳ ಬಗ್ಗೆ ತಮ್ಮ ಶಾಸಕಾಂಗ ಪಕ್ಷದ ನಾಯಕರ ಜೊತೆ ಚರ್ಚಿಸುವುದರಲ್ಲಿ ವಿಶೇಷತೆ ಏನಿಲ್ಲ ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ರಿಲಾಕ್ಸ್ ಮೂಡ್ : 

ಇಡೀ ದಿನ ರೆಸಾರ್ಟ್‌ನಲ್ಲಿ ರಿಲಾಕ್ಸ್ ಮೂಡ್‌ನಲ್ಲಿದ್ದ ಕುಮಾರಸ್ವಾಮಿ ರಾಜಕೀಯ ವಿಚಾರಗಳ ಬಗ್ಗೆ ಮಾಧ್ಯಮಗಳಿಗೆ ಇಂದು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದ್ದಲ್ಲದೆ, ನಾಳೆ ತಾವೇ ಸುದ್ದಿಗೋಷ್ಠಿ ಮಾಡುತ್ತೇವೆ ಎಂದು ಹೇಳಿದರು
ರೆಸಾರ್ಟ್ ಲಾಂಜ್‌ನಲ್ಲಿ ಓಡಾಡುತ್ತಾ, ಟಿ.ವಿ.ನೋಡುತ್ತಾ ಕಾಲ ಕಳೆದ ಅವರು, ಸಿದ್ದರಾಮಯ್ಯ, ಯತೀಂದ್ರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇತರರ ಹೇಳಿಕೆಗಳನ್ನು ಗಮನಿಸಿದರು.

click me!