ಮೈಸೂರು : ಕೃಷ್ಣಶಿಲೆ ದೊರೆತ ಸ್ಥಳದಲ್ಲಿ ವಿಶೇಷ ಪೂಜೆ

By Kannadaprabha News  |  First Published Jan 18, 2024, 10:58 AM IST

ಮೈಸೂರು ತಾಲೂಕಿನ ಗುಜ್ಜೇಗೌಡನಪುರ ಗ್ರಾಮದಲ್ಲಿ ಕೃಷ್ಣ ಶಿಲೆಯು ದೊರೆತ ಸ್ಥಳದಲ್ಲಿ ಮೈಸೂರು ಅರಮನೆಯ ರಾಜಪುರೋಹಿತರಾದ ಪ್ರಹ್ಲಾದ್ ಪೂಜಾರ್ ಅವರ ಸಮ್ಮುಖದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.


ಜಯಪುರ : ಮೈಸೂರು ತಾಲೂಕಿನ ಗುಜ್ಜೇಗೌಡನಪುರ ಗ್ರಾಮದಲ್ಲಿ ಕೃಷ್ಣ ಶಿಲೆಯು ದೊರೆತ ಸ್ಥಳದಲ್ಲಿ ಮೈಸೂರು ಅರಮನೆಯ ರಾಜಪುರೋಹಿತರಾದ ಪ್ರಹ್ಲಾದ್ ಪೂಜಾರ್ ಅವರ ಸಮ್ಮುಖದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಗಣಿ ಗುತ್ತಿಗೆದಾರ ಗುಜ್ಜೇಗೌಡನಪುರ ಶ್ರೀನಿವಾಸ್ ಅವರು ಗ್ರಾಮಸ್ಥರ ಸಮ್ಮುಖದಲ್ಲಿ ವಿಶೇಷ ಪೂಜೆ ಆಯೋಜಿಸಿದ್ದರು.

Latest Videos

undefined

ನೂರಾರು ಭಕ್ತರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ರಾಮದೇವರ ಭಾವಚಿತ್ರಕ್ಕೆ ವಿಶೇಷ ಅಲಂಕಾರ ಮಾಡಿ, ಹೋಮ ಹವನ ಮಾಡಿದರು. ತೆಂಗಿನ ಗರಿ ಚಪ್ಪರ ವನ್ನು ಹಾಕಿ, ಹೊಂಗೆಸೊಪ್ಪನ್ನು ಹೊದಿಸಿ ಶಾಸ್ತ್ರೋಕ್ತವಾಗಿ ಶ್ರೀರಾಮನಿಗೆ ಪೂಜೆ ಸಲ್ಲಿಸಲಾಯಿತು.

ನೂರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜೈ ಶ್ರೀರಾಮ್ ಎನ್ನುವ ಜಯಘೋಷಗಳು ಮೊಳಗಿದವು. ಪಾನಕ, ಮಜ್ಜಿಗೆ ಮತ್ತು ಸಿಹಿಯನ್ನು ಭಕ್ತರಿಗೆ ವಿತರಿಸಲಾಯಿತು.

ನಮ್ಮ ಜಮೀನಿನಲ್ಲಿ ಸಿಕ್ಕ ನಿರುಪಯುಕ್ತ ಬಂಡೆಕಲ್ಲಿನಿಂದ ಬಾಲರಾಮನ ಮೂರ್ತಿಯು ನಮ್ಮ ಮೈಸೂರಿನ ಅರುಣ್ ಯೋಗಿರಾಜ್ ಅವರಿಂದ ಕೆತ್ತನೆಯಾಗಿ, ಪ್ರತಿಷ್ಠಾಪನೆಯಾಗುತ್ತಿರುವದು ನಮ್ಮ ಪಾಲಿನ ಸುದೈವ. ರಾಮನೆ ನಮ್ಮ ಜಮೀನಿನಲ್ಲಿ ಆಶ್ರಹಿಸಿದ್ದ ಎನ್ನುವ ಭಾವನೆ ವ್ಯಕ್ತವಾಗುತ್ತಿದೆ. ಜಗತ್ ವಿಖ್ಯಾತ ಅಯೋಧ್ಯ ರಾಮಮಂದಿರ ನಮ್ಮ ಜಮೀನಿನ ಕಲ್ಲು ಶಿಲೆಯಾಗಿ ನಿಂತಿರುವುದು ನಮ್ಮ ಪಾಲಿಗೆ ಆ ರಾಮನೆ ಎಲ್ಲವೂ ಎಂಬಂತಾಗಿದೆ ಎಂದು ಹಾರೋಹಳ್ಳಿ ಗ್ರಾಮದ ಕೃಷ್ಣಶಿಲೆ ದೊರೆತ ಜಮೀನು ಮಾಲೀಕ ರಾಮದಾಸ್ ಮತ್ತು ಅವರ ಪುತ್ರ ರಂಗಸ್ವಾಮಿ ತಿಳಿಸಿದರು.

ಕಾರ್ಕಳ ಕೃಷ್ಣ ಶಿಲೆ 

ಕಾರ್ಕಳ (ಮಾ.22): ಕೃಷ್ಣ ಶಿಲೆ ಎಂದು ಖ್ಯಾತಿ ಪಡೆದ ಕಾರ್ಕಳ ತಾಲೂಕಿನ ಈದು ಸಮೀಪದ ನೆಲ್ಲಿಕಾರು ಶಿಲೆ ರಾಮಲಲ್ಲಾ ವಿಗ್ರಹ ನಿರ್ಮಾಣಕ್ಕೆ ಹಿಂದೂಗಳ ಪವಿತ್ರ ಸ್ಥಳ ಅಯೋದ್ಯೆ ತಲುಪಿದೆ. ಕಾರ್ಕಳದ ನೆಲ್ಲಿಕಾರು ಶಿಲೆ ಹೇರಿಕೊಂಡು ಮಾ.16ರಂದು ಗುರುವಾರ ರಾತ್ರಿ ಕಾರ್ಕಳ ಬೈಪಾಸ್‌, ಪಡುಬಿದ್ರಿ, ಉಡುಪಿ, ಮುಂಬೈ ಮಾರ್ಗವಾಗಿ ಹೊರಟ ಲಾರಿ 2107 ಕಿ.ಮೀ. ಕ್ರಮಿಸಿ ಮಾ.19ರಂದು ರಾತ್ರಿ ಭಾನುವಾರ ರಾತ್ರಿ ಅಯೋಧ್ಯೆ ತಲುಪಿತು. ಕಾರ್ಕಳ ತಾಲೂಕಿನ ಈದು ಗ್ರಾಮದ ತುಂಗಾ ಪೂಜಾರಿ ಮನೆಯ ಪರಿಸರದಲ್ಲಿ ಈ ವಿಶಿಷ್ಟ ಕೃಷ್ಣ ಶಿಲೆಯನ್ನು ಆರಿಸಿ ಕೊಂಡೊಯ್ಯಲಾಗಿದೆ.

9 ಟನ್‌ ತೂಕ, 10 ಅಡಿ ಉದ್ದ, 6 ಅಡಿ ಅಗಲ ಮತ್ತು 4 ಅಡಿ ದಪ್ಪವಿರುವ ಕೃಷ್ಣ ಶಿಲೆಯನ್ನು ಮಾ.20ರಂದು ಬೆಳಗ್ಗೆ 9.10ಕ್ಕೆ ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣದ ಉಸ್ತುವಾರಿಯಲ್ಲೊಬ್ಬರಾದ ವಿಶ್ವ ಹಿಂದೂ ಪರಿಷತ್ತಿನ ಹಿರಿಯರಾದ ಗೋಪಾಲ್‌ ಜಿ. ನೇತೃತ್ವದಲ್ಲಿ ಲಾರಿಯಿಂದ ಕ್ರೇನ್‌ ಮೂಲಕ ಇಳಿಸಲಾಯಿತು. ಕರ್ನಾಟಕದ ಮಾಜಿ ಮುಜರಾಯಿ ಸಚಿವ ಹಾಗೂ ಗಣೇಶ್‌ ಶಿಪ್ಪಿಂಗ್‌ ಮಾಲೀಕ ಮಾಲಕ ನಾಗರಾಜ ಶೆಟ್ಟಿ, ಪಾಂಡುರಂಗ ನಾಯಕ್‌ ಕಡ್ತಲ , ಚೆನ್ನಕೇಶವ ಮೆಂಡನ್‌ ಕಾಪು, ಯತೀಶ್‌ ಶೆಟ್ಟಿನಲ್ಲೂರು, ತುಂಗಪ್ಪ ಪೂಜಾರಿ, ರೂಪಾ ಆರ್‌.ಶೆಟ್ಟಿ, ಶ್ರೇಯಾಂಕ ಆರ್‌.ಶೆಟ್ಟಿ, ಅಖಿಲಾ ಪಾಂಡುರಂಗ ನಾಯಕ್‌, ಈ ಶಿಲೆ ಕಲ್ಲು ಸಾಗಟದ ಉಸ್ತುವಾರಿ ವಹಿಸಿದ್ದ ಕರ್ನಾಟಕ ರಾಜ್ಯ ಫೆಡರೇಶನ್‌ ಆಫ್‌ ಕರ್ನಾಟಕ ಕ್ವಾರಿ ಸ್ಟೋನ್‌ ಕ್ರಷರ್‌ ಓನರ್ಸ್‌ ಅಸೋಸಿಯೇಶನ್‌ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿಬಜಗೋಳಿ ಹಾಜರಿದ್ದರು.

ಬಿಜೆಪಿ, ಕಾಂಗ್ರೆಸ್‌ಗೆ ಬೆಂಗಳೂರು ದುಡ್ಡು ಮಾಡುವ ಎಟಿಎಂ: ಎಚ್‌.ಡಿ.ಕುಮಾರಸ್ವಾಮಿ ಕಿಡಿ

ಭಕ್ತರ ಮೆಚ್ಚಿನ ತಾಣವಾದ ಶಿಲೆ ದೊರೆತ ಜಾಗ: ಕಾರ್ಕಳ ತಾಲೂಕು ನೆಲ್ಲಿಕಾರಿನ ಈದು ಗ್ರಾಮದ ತುಂಗಪ್ಪ ಪೂಜಾರಿ ಅವರ ಜಾಗದಲ್ಲಿ ದೊರೆತ ರಾಮನ ಮೂರ್ತಿ ಕೆತ್ತನೆಗೆ ಕಳುಹಿಸಲಾದ ಕೃಷ್ಣ ಶಿಲೆ ದೊರೆತ ಜಾಗವನ್ನು ನೋಡಲು ಜನರು ತಂಡೋಪತಂಡವಾಗಿ ಅಗಮಿಸುತ್ತಿದ್ದಾರೆ. ಈ ಜಾಗ ಈಗ ಆಸ್ತಿಕರ ಪಾಲಿನ ಕೌತುಕದ ತಾಣವಾಗಿದ್ದು, ನಿತ್ಯ 100ಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಿದ್ದಾರೆ.

ರಾಮನ ವಿಗ್ರಹಕ್ಕೆ ದೇಶದ 5 ಕಡೆಗಳಿಂದ ಶಿಲೆಗಳು ಅಯೋಧ್ಯೆಗೆ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸುವ ಬಾಲರಾಮನ ವಿಗ್ರಹ ನಿರ್ಮಾಣಕ್ಕೆ ಈಗಾಗಲೇ 4 ಕಡೆಗಳಿಂದ 12 ಶಿಲೆಗಳನ್ನು ತರಿಸಲಾಗಿದೆ, ಇನ್ನೂ 2 ಶಿಲೆಗಳು ಬರಲಿವೆ. ಅವುಗಳಲ್ಲಿ ಸೂಕ್ತವಾದುದನ್ನು ಆರಿಸಿ ವಿಗ್ರಹ ನಿರ್ಮಾಣ ಮಾಡಲಾಗುತ್ತದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ವ್‌ನ ವಿಶ್ವಸ್ಥರಾಗಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. 

ಮಂಗಳವಾರ ಅಯೋಧ್ಯೆಗೆ ತೆರಳಿ, ರಾಮಮಂದಿರ ನಿರ್ಮಾಣದ ಪ್ರಗತಿ ಕಾರ್ಯವನ್ನು ವೀಕ್ಷಿಸಿದ ಶ್ರೀಗಳು, ಅಲ್ಲಿಂದಲೇ ವೀಡಿಯೋ ಮೂಲಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ್ದಾರೆ. ಈಗಾಗಲೇ ನೇಪಾಳದ ಕಾಳಿಗಂಡಕಿ ನದಿ ತೀರದಿಂದ 2 ಶಿಲೆಗಳು, ರಾಜಾಸ್ಥಾನದಿಂದ 5 ಶಿಲೆಗಳು, ಕರ್ನಾಟಕದ ಹೆಗ್ಗಡೆದೇವನ ಕೋಟೆಯಿಂದ 2 ಮತ್ತು ಕಾರ್ಕಳದಿಂದ 1 ಶಿಲೆ ಅಯೋಧ್ಯೆ ತಲುಪಿವೆ. ತಮಿಳುನಾಡಿನ ಮಹಾಬಲಿಪುರಂನಿಂದ 2 ಶಿಲೆಗಳು ಇನ್ನಷ್ಟೇ ತಲುಪಬೇಕಾಗಿವೆ. ಶಿಲ್ಪಿತಜ್ಞರು ಈ ಕಲ್ಲುಗಳಲ್ಲಿ ರಾಮನ ವಿಗ್ರಹ ನಿರ್ಮಾಣಕ್ಕೆ ಯಾವುದು ಸೂಕ್ತ ಎಂದು ನಿರ್ಧರಿಸಲಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದಾರೆ.

click me!