ಶಿವಮೊಗ್ಗದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಮಲೆನಾಡಿನ ಶಮಿತಾ ಆತ್ಮಹತ್ಯೆ!

By Sathish Kumar KH  |  First Published Jan 18, 2024, 10:48 AM IST

ಕಳೆದ ಎಂಟು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಮಲೆನಾಡಿನ ನವ ವಿವಾಹಿತೆ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ.


ಶಿವಮೊಗ್ಗ (ಜ.18): ಕಳೆದ ಎಂಟು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಮಲೆನಾಡಿನ ನವ ವಿವಾಹಿತೆ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ.

ತೀರ್ಥಹಳ್ಳಿ ತಾಲ್ಲೂಕಿನ ನಾಲೂರು ಕೊಳಿಗೆ ಗ್ರಾಪಂ ವ್ಯಾಪ್ತಿಯ ದಾಸನಕೊಡಿಗೆ ಗ್ರಾಮದಲ್ಲಿ ಘಟನೆ ನಡೆದಿದೆ. ಶಮಿತಾ ಬಿ.ಯು (24) ಮೃತ ದುರ್ಧೈವಿಯಾಗಿದ್ದಾರೆ.ಮೃತರ ಪತಿ ವಿದ್ಯಾರ್ಥ್ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ವೃತ್ತಿ ಮಾಡುತ್ತಿದ್ದಾರೆ. ರಾತ್ರಿ ಪಾಳಿಯಲ್ಲಿ ಪತಿ ಕೆಲಸಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ. ಕಳೆದ ಮಾರ್ಚ್ ನಲ್ಲಿ ಶಮಿತಾ ಹಾಗೂ ವಿದ್ಯಾರ್ಥ್ ಪ್ರೀತಿಸಿ ಮದುವೆಯಾಗಿದ್ದರು. ರಾತ್ರಿ ಅತ್ತೆ ಮಾವನಿಗೆ ತಿಳಿಸಿ ಶರ್ಮಿತಾ ರಾತ್ರಿ ಊಟ ಮಾಡಿ ಮಲಗಲು ಕೋಣೆಗೆ  ತೆರಳಿದ್ದರು. ಆದರೆ, ಬೆಳಗಾಗುವಷ್ಟರಲ್ಲಿ ನೇಣಿಗೆ ಶರಣಾಗಿದ್ದಾರೆ.

Latest Videos

undefined

ಶಿವಮೊಗ್ಗ: ಆರು ವರ್ಷದಿಂದ ಪ್ರೇತಿಸುತ್ತಿದ್ದ ಹುಡುಗಿಗೆ ಚಾಕು ಚುಚ್ಚಿದ ಪಾಗಲ್ ಪ್ರೇಮಿ

ಆದರೆ ಬೆಳಿಗ್ಗೆ ಕೊಠಡಿ ಬಾಗಿಲು ತೆರೆಯದಿದ್ದ ಹಿನ್ನಲೆಯಲ್ಲಿ ಕುಟುಂಬದವರು, ಕೆಲಸದವರು ಕಿಟಕಿಯಿಂದ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಯ ಪೋಷಕರು ಆಗಮಿಸಿದ ನಂತರ ಬಾಗಿಲು ಒಡೆಯಲಾಗಿದೆ. ಮೃತದೇಹದ ಬಳಿ ಡೆತ್ ನೋಟ್ ಲಭ್ಯವಾಗಿದೆ. ಆರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ ಎನ್ನಲಾಗಿದೆ. ಇನ್ನು ಮೃತದೇಹವನ್ನು ತೀರ್ಥಹಳ್ಳಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತಹಶೀಲ್ದಾರ್ ಜಕ್ಕನ್ ಗೌಡರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ. ಆಗುಂಬೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಆಗಿದೆ.

ಪ್ರೀತಿಸಿದ ಹುಡುಗಿಗೆ ಚಾಕು ಚುಚ್ಚಿದ ಯುವಕ: 
ಕಳೆದ ಆರು ವರ್ಷಗಳಿಂದ ಪ್ರೀತಿ ಮಾಡುತ್ರಿದ್ದ ಹುಡುಗಿ ಬೇರೊಬ್ಬನನ್ನು ಮದುವೆ ಆಗುತ್ತಾಳೆಂಬ ನೋವಿಗಾಗಿ ತನ್ನ ಪ್ರೇಯಸಿಯನ್ನು ಜನನಿಬಿಡ ಪ್ರದೇಶಕ್ಕೆ ಕರೆದೊಯ್ದು ಚಾಕು ಚುಚ್ಚಿದ ಘಟನೆ ಶಿವಮೊಗ್ಗ ತಾಲೂಕಿನ  ಹಾಡೋನಹಳ್ಳಿಯ ಗ್ರಾಮದಲ್ಲಿ ನಡೆದಿದೆ. ತಾನು ಪ್ರೀತಿ ಮಾಡುತ್ತಿದ್ದ ಯುವತಿಯನ್ನು ಜನ ನಿಬಿಡ ಪ್ರದೇಶ ಕರೆದುಕೊಂಡು ಹೋಗಿದ್ದ ಪಾಗಲ್‌ ಪ್ರೇಮಿ ತಾವಿಬ್ಬರೂ ಏಕಾಂತದಲ್ಲಿರುವಾಗಲೇ ಜಗಳ ತೆಗೆದು ತನ್ನ ಪ್ರೇಯಸಿಯ ಹೊಟ್ಟೆಗೆ ಚಾಕು ಚುಚ್ಚಿದ್ದಾನೆ. ಈ ದುರ್ಘಟನೆ ಶಿವಮೊಗ್ಗ ನಗರದ ಜನನಿಬಿಡ ಶಿವಪ್ಪ ನಾಯಕ ಸರ್ಕಲ್ ಬಳಿ ನಡೆದಿದೆ. ಪ್ರಿಯಕರನಿಂದ ಪ್ರಿಯತಮೆಗೆ ಚಾಕು ಇರಿತವಾಗಿದೆ. ಪ್ರೇಮಿಗಳು ಎನ್ನಲಾದ ಯುವಕ ಯುವತಿಯ ಮಧ್ಯದ ಜಗಳ ಶುರುವಾಗಿದೆ. ಈ ವೇಳೆ ಯುವಕ ಯುವತಿಗೆ ಚಾಕುನಿಂದ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ.

ಗಂಡನ ಕಿರುಕುಳಕ್ಕೆ ಬೇಸತ್ತು ಎರಡು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ

ಪೊಲೀಸರ ಮುಂದೆ ಹೇಳಿಕೆ ನೀಡಿದ ಯುವಕ: ಕಳೆದ ಆರು ವರ್ಷಗಳಲ್ಲಿ  ಚೇತನ್ ಮತ್ತು ಅಂಬಿಕಾ ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದೆವು. ಕಳೆದೊಂದು ವರ್ಷದಿಂದ ನಮ್ಮ ಮಧ್ಯೆ ಮನಸ್ತಾಪ ಇತ್ತು. ಇತ್ತೀಚಿಗೆ ಆಕೆಗೆ ಬೇರೆ ಕಡೆ ಮದುವೆ ಮಾಡಲು ಅವರ ಮನೆಯವರು ನಿರ್ಧಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ 3 ಚಾಕು ತೆಗೆದುಕೊಂಡು ಹೋಗಿದ್ದೆ. ಒಂದು ಚಾಕುವಿನಿಂದ ಇರಿದಾಗ ಮಿಸ್ ಆದರೆ ಮತ್ತೊಂದರಲ್ಲಿ ಇರಿಯುವುದು ನನ್ನ ಉದ್ದೇಶವಾಗಿತ್ತು. ನಂತರ ನಾನು ಮೂರನೇ ಚಾಕುವಿನಿಂದ ಇರಿದುಕೊಂಡು ಸಾಯಬೇಕು ಎಂದುಕೊಂಡಿದ್ದೆ ಎಂದು ಯುವಕನ ಹೇಳಿಕೆ ನೀಡಿದ್ದಾರೆ. ಈ ಘಟನೆ ಕುರಿತಂತೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

click me!