ದಸರಾದಲ್ಲಿ ಕಂಬಳ ಆಯೋಜನೆ ಬಗ್ಗೆ ಪ್ರಮೋದಾ ದೇವಿ ಅಚ್ಚರಿ ಹೇಳಿಕೆ

Published : Sep 21, 2026, 06:33 PM IST
Pramoda devi

ಸಾರಾಂಶ

ಮೈಸೂರು ದಸರಾದಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಜಾನಪದ ಕ್ರೀಡೆ ಕಂಬಳವನ್ನು ಆಯೋಜಿಸಲಾಗಿದ್ದು, ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಕಂಬಳವನ್ನು ದಸರಾದೊಂದಿಗೆ ಸೇರಿಸಿರುವ ಬಗ್ಗೆ ರಾಜವಂಶಸ್ಥೆ ಪ್ರಮೋದಾ ದೇವಿ ಅವರು ಪ್ರತಿಕ್ರಿಯಿಸಿದ್ದಾರೆ.

ಮೈಸೂರು ದಸರಾದಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಕ್ರೀಡೆ, ಜಾನಪದ ಕ್ರೀಡಾಕೂಟ ಕಂಬಳ ಆಯೋಜನೆ ಮಾಡಲಾಗಿದೆ. ಕಂಬಳ ಪರ ವಿರೋಧ ಚರ್ಚೆಗಳ ನಡುವೆ, ದಸರಾದಲ್ಲಿ ಕಂಬಳ ಓಡಿಸಲು ನೋಂದಣಿ ಪ್ರಕ್ರಿಯೆ ಶುರುವಾಗಿದೆ.

ದಸರಾದಲ್ಲಿ ಕಂಬಳ ಆಯೋಜನೆ ಬಗ್ಗೆ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪ್ರತಿಕ್ರಿಯಿಸಿದ್ದಾರೆ. ಕಂಬಳಕ್ಕೆ ಆ ಭಾಗದಲ್ಲಿ (ಕರಾವಳಿಯಲ್ಲಿ) ಅದರದ್ದೇ ಆದ ಪ್ರಾಮುಖ್ಯತೆ ಇದೆ. ಇದು ಬೇಕಾ ಬೇಡವಾ ಎಂಬುದನ್ನ ನಾವೇ ಯೋಚನೆ ಮಾಡಬೇಕಿದೆ. ಕಂಬಳವನ್ನ ದಸರಾ ನಂತರ ಅಥವಾ ಮುಂಚೇಯೇ ಮಾಡಿದ್ರೆ ಸರಿ ಹೋಗ್ತಿತ್ತು. ಕಂಬಳವನ್ನ ದಸರಾಗೆ ಸೇರಿಸಬಾರದಿತ್ತು. ದಸರಾದಲ್ಲಿ ಒಂದು ಕಾರ್ಯಕ್ರಮವಾಗಿ ಅದನ್ನು ಮಾಡೋದ್ರಿಂದ ಅದಕ್ಕೆ ಸಿಗುವಷ್ಟು ಪ್ರಾಮುಖ್ಯತೆ ಸಿಗುವುದಿಲ್ಲವೇನೋ. ಇದು ನನ್ನ ಅಭಿಪ್ರಾಯ. ದಸರಾದಲ್ಲಿ ಕಂಬಳ ಆಯೋಜನೆ ಮಾಡಿರೋದು ಸರಿ ತಪ್ಪು ಎಂದು ನಾನು ಹೇಳುತ್ತಿಲ್ಲ ಎಂದು ಪ್ರಮೋದಾ ದೇವಿ ಒಡೆಯರ್ ಹೇಳಿದ್ದಾರೆ.

ಬರಗಾಲದಲ್ಲಿ ದಸರಾ ಆಚರಣೆ ಬಗ್ಗೆ ಹೇಳಿದ್ದೇನು?

ಕಂಬಳವನ್ನು ಪ್ರತ್ಯೇಕವಾಗಿ ಆಯೋಜಿಸಿದರೆ ಹೆಚ್ಚಿನ ಮಹತ್ವ ಸಿಗುತ್ತದೆ. ದಸರಾ ಭಾಗವಾದರೆ ಕಂಬಳಕ್ಕೆ ಸಿಗಬೇಕಾದ ಪ್ರತ್ಯೇಕ ಗಮನ ಕಡಿಮೆಯಾಗಬಹುದು ಎಂದರು. ಇದೇ ವೇಳೆ ಬರಗಾಲದಲ್ಲೂ ಅದ್ದೂರಿ ದಸರಾ ಆಚರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದಸರಾ ಎಂಬ ಶಬ್ದದಲ್ಲೇ ಅದ್ದೂರಿತನ ಅಡಗಿದೆ. ದಸರಾ ಆಚರಣೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸಾಧ್ಯವಿಲ್ಲ. ಮಳೆ ಕೊರತೆ, ಬರಗಾಲ ಇದ್ದರೂ ಸಂಪ್ರದಾಯದಂತೆ ದಸರಾ ಆಚರಣೆ. ಮಳೆ-ಬೆಳೆ ಉತ್ತಮವಾಗಲಿ ಎಂಬ ಆಶಯವೂ ದಸರಾ ಆಚರಣೆಯಲ್ಲಿದೆ. ಜಂಬೂಸವಾರಿ ಬದಲಾವಣೆಗೂ ಅರಮನೆ ಪರಂಪರೆಗೂ ಸಂಬಂಧವಿಲ್ಲ. ಸರ್ಕಾರದ ಜಂಬೂಸವಾರಿಗೂ ಅರಮನೆಯ ಧಾರ್ಮಿಕ ಪರಂಪರೆಗೂ ನೇರ ಸಂಬಂಧವಿಲ್ಲ. ಮೆರವಣಿಗೆಯಲ್ಲಿ ಬದಲಾವಣೆ ಮಾಡಿದರೂ ಅರಮನೆಯ ಪೂಜಾ ಪರಂಪರೆಗೆ ಧಕ್ಕೆ ಇಲ್ಲ. ಹೊಸತನ ತರುವ ಬಗ್ಗೆ ಸರ್ಕಾರ ಹಾಗೂ ಯುವ ಪೀಳಿಗೆ ಚರ್ಚಿಸಲಿ. ಆಯುಧ ಪೂಜೆ, ವಿಜಯದಶಮಿಯಂದು ಸ್ವಲ್ಪ ಗೊಂದಲ ಉಂಟಾಗುತ್ತದೆ. ಬ್ಯಾರಿಕೇಡ್, ಕುರ್ಚಿ ಹಾಗೂ ಗದ್ದಲದಿಂದ ಆನೆ-ಕುದುರೆಗಳು ಬೆದರುವ ಸಾಧ್ಯತೆ. ಸರ್ಕಾರಿ ಕಾರ್ಯಕ್ರಮಗಳ ಸಮಯ ಹಾಗೂ ಅರಮನೆ ಪೂಜೆಯ ಸಮಯ ಹೊಂದಾಣಿಕೆ ಅಗತ್ಯ. ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲಾಗುತ್ತದೆ ಎಂದರು.

ಇದೇ ಅಕ್ಟೋಬರ್ 18 ಮತ್ತು 19 ರಂದು ಮೈಸೂರಿನ ಸಾತಗಳ್ಳಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಹಸನಾಗಿ ಮಾಡಿದ ಮಣ್ಣಿನ ಗದ್ದೆಯಲ್ಲಿ ಕೋಣಗಳನ್ನು ಓಡಿಸುವುದೇ ಕಂಬಳ. ಈ ಕ್ರಿಡೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜನಪದದೊಂದಿಗೆ ಹಾಸು ಹೊಕ್ಕಾಗಿದೆ. ಸಾಂಸ್ಕೃತಿ ಹಿನ್ನೆಲೆಯಲ್ಲಿ ದಸರಾದಲ್ಲಿ ಈ ಕ್ರೀಡೆ ಆಯೋಜನೆ ಮಾಡಲಾಗಿದೆ.

ಇನ್ನು ಕಂಬಳ ನೋಂದಣಿಗೆ ಸೆಪ್ಟೆಂಬರ್ 30 ರಂದು ಕೊನೆಯ ದಿನಾಂಕವಾಗಿದೆ.ಕೋಣಗಳ ಓಡಿಸೋರು ಸ್ಪರ್ಧೆಗಳ ವಿಭಾಗದಲ್ಲಿ ಭಾಗಿಯಾಗಲು ಅವಕಾಶ ಇದೆ. ಆಸಕ್ತರು ಈ ಕೆಳಗಿನ ವಿಧಾನಗಳ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ಆನ್‌ಲೈನ್ ಮೂಲಕ ಮಾಡೋದಾಗಿದ್ರೆ https://mysoredasara.gov.in ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಜೊತೆಗೆ ಆಫ್‌ಲೈನ್ ಮೂಲಕ ಮಾಡೋದಾಗಿದ್ದರೆ ಮೈಸೂರಿನ ಜಿಲ್ಲಾ ಪಂಚಾಯತ್ ಕಚೇರಿಯ ಅಧಿಕೃತ ಪ್ರಾಧಿಕಾರದ ಮೂಲಕ ನೇರವಾಗಿ ಅರ್ಜಿಗಳನ್ನ ಪಡೆದು ಸಲ್ಲಿಸಬಹುದು.

PREV
Read more Articles on
click me!

Recommended Stories

ಬಸ್ ನಿಲ್ದಾಣದ ಮುಂದೇನಿದು ಅವಾಂತರ? ಗಂಗಾವತಿಯಲ್ಲಿ ಗಲೀಜು ನೀರಿನ ನಡುವೆ ವ್ಯಾಪಾರ!
Hubli: ಮತ್ತೆ ಮಾರ್ಧನಿಸುತ್ತಾ ಮಹಾದಾಯಿ ಹೋರಾಟ; ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಖಡಕ್‌ ವಾರ್ನ್ ಮಾಡಿದ ರೈತ ಪಡೆ!