ಒಬ್ಬ ಅಭ್ಯರ್ಥಿ ಕೋಟ್ಯಾಧಿಪತಿಯಾದರೂ ಕಾರಿಲ್ಲ, ಮತ್ತೊಬ್ಬರ ಬಳಿ ಸ್ಕೂಟರ್‌ ಬಿಟ್ಟರೆ ಬೇರೆನಿಲ್ಲ

By Kannadaprabha News  |  First Published Apr 19, 2023, 9:00 AM IST

ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಕವೀಶ್‌ಗೌಡ ಕೋಟ್ಯಧಿಪತಿಯಾದರೂ ಕಾರು ಇಲ್ಲ. ಕೆ.ಆರ್‌. ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೆ.ವಿ. ಮಲ್ಲೇಶ್‌ ಬಳಿ . 1.15 ಲಕ್ಷ ಮಾತ್ರ. ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಮಾಹಿತಿ ನೀಡಿದ್ದಾರೆ.


 ಮೈಸೂರು :  ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಕವೀಶ್‌ಗೌಡ ಕೋಟ್ಯಧಿಪತಿಯಾದರೂ ಕಾರು ಇಲ್ಲ. ಕೆ.ಆರ್‌. ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೆ.ವಿ. ಮಲ್ಲೇಶ್‌ ಬಳಿ . 1.15 ಲಕ್ಷ ಮಾತ್ರ. ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಮಾಹಿತಿ ನೀಡಿದ್ದಾರೆ.

ಕವೀಶ್‌ ಅವರು . 1.13 ಕೋಟಿ ಮೊತ್ತ ಚರಾಸ್ತಿ, . 1.85 ಕೋಟಿ ಬೆಲೆಯ ಸ್ಥಿರಾಸ್ತಿ ಹೊಂದಿದ್ದಾರೆ. . 43.16 ಲಕ್ಷ ಮೊತ್ತ ಚರಾಸ್ತಿ ಹೊಂದಿರುವ ಇವರ ಪತ್ನಿ ಪ್ರಗ್ಯಾ ಪ್ರಕಾಶ್‌ ಹೆಸರಿನಲ್ಲಿ ಸ್ಥಿರಾಸ್ತಿ ಇಲ್ಲ. ಇವರ ಹೆಸರಿನಲ್ಲಿ . 5 ಲಕ್ಷ ಮೊತ್ತದ ವೋಕ್ಸ್‌ ವ್ಯಾಗನ್‌ ಪೋಲೋ ಕಾರ್‌ ಇದೆ.

Latest Videos

undefined

ಕೃಷ್ಣರಾಜ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೆ.ವಿ. ಮಲ್ಲೇಶ್‌ ಅವರು ಕೇವಲ . 1.15 ಲಕ್ಷ ಆಸ್ತಿ ಹೊಂದಿದ್ದಾರೆ. ಇವರ ಬಳಿ ಸ್ಕೂಟರ್‌ ಬಿಟ್ಟರೆ ಬೇರೆ ವಾಹನ ಇಲ್ಲ, ಸಾಲವೂ ಇಲ್ಲ.

ನಂಜನಗೂಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಹರ್ಷವರ್ಧನ್‌ ಅವರು . 67.64 ಲಕ್ಷ ಚರಾಸ್ತಿ ಹೊಂದಿದ್ದಾರೆ. . 6.97 ಲಕ್ಷ ಸಾಲ ಹೊಂದಿದ್ದಾರೆ. ಸ್ಥಿರಾಸ್ತಿ ಇಲ್ಲ. ಆದರೆ ಇವರ ಪತ್ನಿ ಹೆಸರಿನಲ್ಲಿ . 59.58 ಲಕ್ಷ ಚರಾಸ್ತಿ, . 41.62 ಲಕ್ಷ ಸ್ಥಿರಾಸ್ತಿ ಹೊಂದಿದ್ದಾರೆ.

ವರುಣಾದಲ್ಲಿ ಸಿದ್ದರಾಮಯ್ಯ ಗೆಲ್ಲುತ್ತಾರೆ

ಮೈಸೂರು (ಏ.13): ವರುಣ ವಿಧಾನಸಭಾ ಕ್ಷೇತ್ರದಲ್ಲಿ ಎದುರಾಳಿಗಳು ಯಾರೇ ನಿಂತರೂ ಸಿದ್ದರಾಮಯ್ಯ ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಿದ್ದರಾಮಯ್ಯ ಅವರ ಪರವಾಗಿ ಮೆಲ್ಲಹಳ್ಳಿ, ಹಳ್ಳಿಕೆರೆಹುಂಡಿ, ಶಿವಪುರ, ಲಕ್ಷ್ಮಿಪುರ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿ ಅವರು ಮಾತನಾಡಿದರು.

ಹಿರಿಯರಾದ ಸೋಮಣ್ಣ ಅವರಿಗೆ ವರುಣ ಕ್ಷೇತ್ರದಲ್ಲಿ ನಿಲ್ಲಲು ಇಷ್ಟವಿಲ್ಲದಿದ್ದರೂ ಸಹ ಬಲವಂತವಾಗಿ ಬಿಜೆಪಿಯವರು ನಿಲ್ಲಿಸಿದ್ದಾರೆ. ಅದಕ್ಕೆ ನಾವು ಸ್ವಾಗತ ಮಾಡುತ್ತೇವೆ. ಸಿದ್ದರಾಮಯ್ಯವರು ವರುಣ ಕ್ಷೇತ್ರಕ್ಕೆ 2 ಸಾವಿರ ಕೋಟಿಗಿಂತಲೂ ಹೆಚ್ಚು ಅನುದಾನ ನೀಡಿ ರಸ್ತೆಗಳು, ಚರಂಡಿಗಳು, ಕುಡಿಯುವ ನೀರು, ಮನೆಗಳು, ಸಮುದಾಯ ಭವನಗಳು, ಕೆರೆ ತುಂಬಿಸುವ ಯೋಜನೆ, ನಿಗಮ ಮಂಡಳಿಗಳಿಂದ ವಾಹನಗಳು, ಗಂಗಾ ಕಲ್ಯಾಣ ಯೋಜನೆ ಹೀಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮತದಾರರ ಮೇಲೆ ನಮಗೆ ವಿಶ್ವಾಸವಿದೆ. 

ಬಿಜೆಪಿ ಟಿಕೆಟ್ ಮಿಸ್ ಆಗಲು ಬಿಎಸ್‌ವೈ, ವಿಜಯೇಂದ್ರ ಕಾರಣ: ಗೂಳಿಹಟ್ಟಿ ಶೇಖರ್‌

ಸಿದ್ದರಾಮಯ್ಯ ಅವರು ಹೆಚ್ಚುಮತಗಳ ಅಂತರದಿಂದ ಗೆಲ್ಲುವ ಅವಕಾಶ ಹೆಚ್ಚಾಗಿದೆ ಎಂದರು. ಜಿಪಂ ಮಾಜಿ ಸದಸ್ಯ ಕೆಂಪೀರಯ್ಯ, ತಾಪಂ ಮಾಜಿ ಸದಸ್ಯರಾದ ಶಿವರತ್ನ ನಾಗರಾಜ್‌, ಎಂ.ಟಿ. ರವಿಕುಮಾರ್‌, ಗುರುಸ್ವಾಮಿ, ಪುಟ್ಟಣ್ಣ, ಸಿದ್ದಯ್ಯ, ನಿವೃತ್ತ ಪ್ರಾಂಶುಪಾಲ ಸಿದ್ದಯ್ಯ, ಮುಖಂಡರಾದ ರವಿ, ಗವಿಸಿದ್ದು, ರವಿ, ಮಹಾದೇವ, ಗಂಗನ ತಿಮ್ಮಣ್ಣ, ಸಾಕಣ್ಣ, ಮಂಚಯ್ಯ, ಸೋಮು, ಮಹಾದೇವ, ಟಿ. ಹರೀಶ, ಮಣಿ, ಪಟ್ಟೆಹುಂಡಿ, ಕಲ್ಪನ, ಪುಷ್ಪ ಬೋರೇಗೌಡ, ಚೆನ್ನಾಜಮ್ಮ ಇದ್ದರು.

ಇಂದು ಮೈಸೂರಿಗೆ ಸಿದ್ದರಾಮಯ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏ.13 ರಂದು ಮೈಸೂರಿಗೆ ಆಗಮಿಸುವರು. ಇಲವಾಲ- ಜಯಪುರ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ಸಭೆ ಸೇರಿದಂತೆ ದಿನವಿಡಿ ವಿವಿಧ ಸಭೆಗಳಲ್ಲಿ ಪಾಲ್ಗೊಳ್ಳುವರು. ತಾವು ಸ್ಪರ್ಧಿಸಿರುವ ವರುಣ ಕ್ಷೇತ್ರದ ಮುಖಂಡರೊಂದಿಗೂ ಸಮಾಲೋಚಿಸುವರು. ವರುಣ ಕಣಕ್ಕೆ ರಂಗು: ವಸತಿ ಸಚಿವ ವಿ. ಸೋಮಣ್ಣ ಅವರು ಬಿಜೆಪಿ ಅಭ್ಯರ್ಥಿಯಾಗಿರುವುದರಿಂದ ವರುಣ ಕ್ಷೇತ್ರದ ಕಣ ರಂಗೇರಿದೆ. ಅಲ್ಲಿ ಹಾಲಿ ಶಾಸಕ ಡಾ.ಎಸ್‌. ಯತೀಂದ್ರ ಅವರು ತಂದೆ ಸಿದ್ದರಾಮಯ್ಯ ಅವರಿಗೆ ಸೀಟು ಬಿಟ್ಟುಕೊಟ್ಟಿದ್ದಾರೆ.

click me!