ಮಾಸ್ಕ್ ಧರಿಸಿ ಪೇಚಿಗೆ ಸಿಲುಕಿದ ಮೇಯರ್..!

By Suvarna NewsFirst Published Mar 4, 2020, 1:09 PM IST
Highlights

ಮೈಸೂರು ಮಹಾನಗರ ಮಾಲಿಕೆಯಲ್ಲಿ ಕೊರೋನಾ ಭೀತಿ ಎದುರಾಗಿದೆ. ಜನಪ್ರತಿನಿಧಿಗಳು ಮಾಸ್ಕ್ ಧರಿಸಿಕೊಮಡು ಮೈಸೂರು ಮಹಾನಗರ ಪಾಲಿಕೆ ಸಭೆಗೆ ಬಂದಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೌನ್ಸಿಲ್ ಸಭೆಗೆ ಮಾಸ್ಕ್ ಧರಿಸಿ ಆಗಮಿಸಿದ್ದಾರೆ.

ಮೈಸೂರು(ಮಾ.04): ಮೈಸೂರು ಮಹಾನಗರ ಮಾಲಿಕೆಯಲ್ಲಿ ಕೊರೋನಾ ಭೀತಿ ಎದುರಾಗಿದೆ. ಜನಪ್ರತಿನಿಧಿಗಳು ಮಾಸ್ಕ್ ಧರಿಸಿಕೊಮಡು ಮೈಸೂರು ಮಹಾನಗರ ಪಾಲಿಕೆ ಸಭೆಗೆ ಬಂದಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೌನ್ಸಿಲ್ ಸಭೆಗೆ ಮಾಸ್ಕ್ ಧರಿಸಿ ಆಗಮಿಸಿದ್ದಾರೆ.

ಎಲ್ಲೆಡೆ ಕೊರೊನಾ ಭೀತಿ ಇರುವುದರಿಂದ ಮುಂಜಾಗ್ರತಾವಾಗಿ ಮಾಸ್ಕ್ ಧರಿಸಲಾಗಿದೆ. ಪಾಲಿಕೆ ಮೇಯರ್, ಉಪಮೇಯರ್ ಹಾಗೂ ಸದಸ್ಯರು ಪಾಲಿಕೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಮಾಸ್ಕ್ ಧರಿಸಿ ಬಂದಿದ್ದಾರೆ.

ಕೊರೋನಾ ರೋಗಿಯನ್ನು ಕೊಲ್ಲಿಸಿದನೇ ತಿಕ್ಕಲು ಸರ್ವಾಧಿಕಾರಿ!

ಮೇಯರ್ ತಸ್ನೀಂ, ಉಪಮೇಯರ್ ಶ್ರೀಧರ್ ಹಾಗೂ ಉಳಿದ ಸದಸ್ಯರು ಮಾಸ್ಕ್ ಧರಿಸಿಕೊಂಡು ಬಮದಿದ್ದಾರೆ. ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಸಭೆ ನಡೆದಿದೆ. ಮಾಸ್ಕ್ ಧರಿಸಿ ಮೇಯರ್ ಪೇಚಿಗೆ ಸಿಲುಕಿದ್ದು, ಜಾಗೃತಿ ಮೂಡಿಸುವ ಬದಲು ಭಯ ಹುಟ್ಟಿಸುವ ಪ್ರಯತ್ನ ನಡೆದಿದೆ.

ಕೆಮ್ಮು, ನಗಡಿ ಇರುವವರು ಮಾಸ್ಕ್ ಧರಿಸಬೇಕು. ಸುಖಾಸುಮ್ಮನೆ ಮಾಸ್ಕ್ ಧರಿಸಿದರೆ ಅನಗತ್ಯ ಆತಂಕ ಉಂಟಾಗುವುದಿಲ್ಲವೇ ಎಂದು ಜನ ಪ್ರಶ್ನಿಸಿದ್ದಾರೆ. ಪ್ರತಿಪಕ್ಷ, ಮಾಧ್ಯಮಗಳಿಂದ ಪ್ರಶ್ನೆ ಉಂಟಾಗಿದ್ದು, ಆಕ್ಷೇಪ ಗಮನಿಸಿ ಮೇಯರ್ ತಬ್ಬಿಬ್ಬಾಗಿದ್ದಾರೆ. ನಾನು ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದೇನೆ. ಭಯ ಹುಟ್ಟಿಸುತ್ತಿಲ್ಲ ಎಂದು ಮೇಯರ್ ಸ್ಪಷ್ಟನೆ ನೀಡಿದ್ದಾರೆ.

click me!