ವಿಕಲಚೇತನಳಿಗೆ ಉದ್ಯೋಗ ನೀಡಿದ ಜಿಪಂ ಸಿಇಒ ಗಂಗೂಬಾಯಿ ಮಾನಕರ| ಹುನಗುಂದ ತಾಲೂಕಿನ ಕೆಲೂರ ಗ್ರಾಮದ 26 ವರ್ಷದ ಲಕ್ಷ್ಮೀಬಾಯಿ ಇಟಗಿ ಅವರಿಗೆ ಉದ್ಯೋಗ ಕಲ್ಪಿಸಿದ ಮಾನಕರ|
ಬಾಗಲಕೋಟೆ(ಮಾ.04): ವಿಕಲಚೇತನನೊಬ್ಬಳಿಗೆ ಜಿಪಂ ಸಿಇಒ ಗಂಗೂಬಾಯಿ ಮಾನಕರ ಗುಳೇದಗುಡ್ಡದ ಸಾಮಾಜಿಕ ಅರಣ್ಯ ವಿಭಾಗದಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹುನಗುಂದ ತಾಲೂಕಿನ ಕೆಲೂರ ಗ್ರಾಮದ 26 ವರ್ಷದ ಲಕ್ಷ್ಮೀಬಾಯಿ ಇಟಗಿ ಅವರು ಬಿಕಾಂ ಪದವಿಯನ್ನು ಹುನಗುಂದಲ್ಲಿ ಕಲಿತಿದ್ದು, ಉದ್ಯೋಗಕ್ಕಾಗಿ ಜಿಲ್ಲಾಧಿಕಾರಿಗಳನ್ನು ಭೇಟಿ ನೀಡಿದ್ದರು. ನಂತರ ಇತ್ತೀಚೆಗೆ ಜರುಗಿದ ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಮಟ್ಟದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಉದ್ಯೋಗ ಮೇಳದಲ್ಲಿ ಜಿಪಂ ಸಿಇಒ ಅವರನ್ನು ಭೇಟಿ ಮಾಡಿ ಉದ್ಯೋಗ ನೀಡುವಂತೆಯೂ ಕೇಳಿಕೊಂಡಿದ್ದರು. ಉದ್ಯೋಗ ಮೇಳದಲ್ಲಿ ಉದ್ಯೋಗ ದೊರಕದಿದ್ದಲ್ಲಿ ಉದ್ಯೋಗ ಕೊಡಿಸುವುದಾಗಿ ತಿಳಿಸಿದ ಸಿಇಒ ಅವರು ಎರಡೇ ದಿನಗಳಲ್ಲಿ ಗುಳೇದಗುಡ್ಡದ ಸಾಮಾಜಿಕ ಅರಣ್ಯ ವಿಭಾಗದಲ್ಲಿ ಡಾಟಾ ಎಂಟ್ರಿ ಆಪರೇಟರ್ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ. ಈ ಮೂಲಕ ನೊಂದವರ ಧ್ವನಿಯಾಗಿ ಜಿಪಂ ಸಿಇಒ ಕಾರ್ಯ ಮಾಡುತ್ತಾ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಉದ್ಯೋಗ ಪಡೆದ ಲಕ್ಷ್ಮೀಬಾಯಿ ಕೂಡಾ ಸಂತಸಗೊಂಡಿದ್ದಾರೆ.