ಉಡುಪಿಯಲ್ಲಿ ಸುಮಾರು 32 ಕೆಜಿ ಗಾಂಜಾ ನಾಶಪಡಿಸಲಾಗಿದೆ. 17 ಪ್ರಕರಣಗಳ 32.883 ಕಿಲೋ ಗಾಂಜಾಕ್ಕೆ ಬೆಂಕಿ ನೀಡಲಾಗಿದೆ.
ಉಡುಪಿ(ಮಾ.04): ಉಡುಪಿಯಲ್ಲಿ ಸುಮಾರು 32 ಕೆಜಿ ಗಾಂಜಾ ನಾಶಪಡಿಸಲಾಗಿದೆ. 17 ಪ್ರಕರಣಗಳ 32.883 ಕಿಲೋ ಗಾಂಜಾಕ್ಕೆ ಬೆಂಕಿ ನೀಡಲಾಗಿದೆ. ನಂದಿಕೂರು ಇಂಡಸ್ಟ್ರಿಯಲ್ ವ್ಯಾಪ್ತಿಯಲ್ಲಿ ಗಾಂಜಾ ನಾಶಪಡಿಸಲಾಗಿದೆ.
ಉಡುಪಿಯಲ್ಲಿ 32 ಕೆಜಿ ಗಾಂಜಾ ನಾಶ ಮಾಡಲಾಗಿದ್ದು, ನಂದಿಕೂರು ಇಂಡಸ್ಟ್ರಿಯಲ್ ವ್ಯಾಪ್ತಿಯಲ್ಲಿ ಪೊಲೀಸರು ಸೂಕ್ತ ಕ್ರಮಗಳನ್ನು ಕೈಗೊಂಡು ಗಾಂಜಾ ನಾಶ ಮಾಡಿದ್ದಾರೆ. ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶವಾದ ಗಾಂಜಾವನ್ನು ಒಟ್ಟಿಗೇ ನಾಶ ಮಾಡಲಾಗಿದೆ.
ಬೆಂಗಳೂರು: ಕಡಿಮೆ ಬೆಲೆಗೆ ಗಾಂಜಾ ಮಾರಾಟ, ಕೇರಳ ಮೂಲದ ಆರೋಪಿಗಳ ಬಂಧನ
17 ಪ್ರಕರಣಗಳ 32.883 ಕಿಲೋ ಗಾಂಜಾಕ್ಕೆ ಬೆಂಕಿ ನೀಡಲಾಗಿದೆ. ಎಸ್.ಪಿ ವಿಷ್ಣುವರ್ಧನ್ ನೇತೃತ್ವದಲ್ಲಿ ಅಮಲು ಪದಾರ್ಥಗಳನ್ನು ನಾಶ ಮಾಡಲಾಗಿದೆ. ಹೆರಾಯಿನ್, ಮಾಫಿನ್, ಚರಾಸ್‌ಗಳನ್ನು ನಾಶ ಮಾಡಿದ್ದಾರೆ.
ಗಾಂಜಾ ನಾಶ ಸಂದರ್ಭ ವಿಷಯುಕ್ತ ಅನಿಲ ಬಿಡುಗಡೆಯಾಗು ಸಾಧ್ಯತೆಯಿಂದಾಗಿ ಗಾಂಜಾ ನಾಶದ ಸಂದರ್ಭ ಬಹಳ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗಿತ್ತು. ಹೀಗಾಗಿ ಪೊಲೀಸರು ಎಲ್ಲ ಎಚ್ಚರಿಕೆಗಳನ್ಉ ತೆಗೆದುಕೊಂಡು ಗಾಂಜಾ ನಾಶ ಮಾಡಿದ್ದಾರೆ. ಠಾಣೆಗಳಲ್ಲಿ ವಶಪಡಿಸಿಕೊಂಡ 32 ಕೆಜಿ 883 ಗ್ರಾಂ ಗಾಂಜಾ ನಾಶ ಪಡಿಸಿದ್ದು, ಕಾರ್ಯಾಚರಣೆಯಲ್ಲಿ ಸೆನ್ ಠಾಣೆ, ಮಣಿಪಾಲ, ಉಡುಪಿ ಠಾಣಾ ಪೊಲೀಸರು ಭಾಗಿಯಾಗಿದ್ದಾರೆ.