ಮೈಸೂರು :  ಆರು ಮಂದಿ ವಿಜ್ಞಾನಿಗಳಿಗೆ ಜಾಗತಿಕ ಪುರಸ್ಕಾರ

By Kannadaprabha News  |  First Published Oct 21, 2023, 10:07 AM IST

ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಸಂಸ್ಥೆಯ ಆರು ಮಂದಿ ವಿಜ್ಞಾನಿಗಳು ಜಾಗತಿಕ ಮಟ್ಟದ ಪುರಸ್ಕಾರ ಪಡೆದಿದ್ದಾರೆ.


  ಮೈಸೂರು :  ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಸಂಸ್ಥೆಯ ಆರು ಮಂದಿ  ವಿಜ್ಞಾನಿಗಳು ಜಾಗತಿಕ ಮಟ್ಟದ ಪುರಸ್ಕಾರ ಪಡೆದಿದ್ದಾರೆ.

ಅಮೆರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯವು ಜಗತ್ತಿನಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಸುಮಾರು 80 ಲಕ್ಷಕ್ಕೂ ಅಧಿಕ ವಿಜ್ಞಾನಿಗಳಲ್ಲಿ, ಮೊದಲ ಸುತ್ತಿನಲ್ಲಿ 1.80 ಲಕ್ಷ ವಿಜ್ಞಾನಿಗಳನ್ನು ಈ ಆಯ್ಕೆಗೆ ಪರಿಗಣಿಸುತ್ತದೆ. ವೃತ್ತಿ ಜೀವನದ ದೀರ್ಘಾವಧಿ ಸಂಶೋಧನಾ ಪ್ರಕಟಣೆಗಳು, ಉಲ್ಲೇಖಗಳು ಮತ್ತು ಸಂಶೋಧನೆಗಳ ಪ್ರಭಾವಗಳ ಆಧಾರದ ಮೇಲೆ ಈ ಮೌಲ್ಯಮಾಪನವನ್ನು ಮಾಡಲಾಗುತ್ತದೆ.

Tap to resize

Latest Videos

undefined

ಸ್ಕೋಪಸ್ ಡೇಟಾ ಬೇಸ್ನಿಂದ ಪಡೆದ ಬಿಬ್ಲಿಯೋ ಮೆಟ್ರಿಕ್ ಮಾಹಿತಿಗಳ ಆಧಾರದ ಮೇಲೆ ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾಗುವ ಈ ಶ್ರೇಯಾಂಕದ ಮಾಹಿತಿಯು 22 ಪ್ರಮುಖ ವೈಜ್ಞಾನಿಕ ಕ್ಷೇತ್ರಗಳನ್ನು ಮತ್ತು 176 ಉಪಕ್ಷೇತ್ರಗಳನ್ನು ಈ ಪರಿಶೀಲನೆಗೆ ಒಳಪಡಿಸಿದೆ.

ಈ ಪ್ರತಿಷ್ಠಿತ ಪ್ರಶಸ್ತಿಯು ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಸಂಸ್ಥೆಯ ವಿಜ್ಞಾನಿಗಳಾದ ಡಾ.ಪಿ.ಎ. ಮಹೇಶ್ [ಪ್ರಾಧ್ಯಾಪಕರು, ರೆಸ್ಪಿರೇಟರಿ ಮೆಡಿಸಿನ್ ವಿಭಾಗ, ಜೆಎಸ್ಎಸ್ ವೈದ್ಯಕೀಯ ಕಾಲೇಜು, ಮೈಸೂರು], ಡಾ.ಕೆ.ಟಿ. ರಾಜೇಶ್ [ಪ್ರಾಧ್ಯಾಪಕರು, ಬಯೋ ಕೆಮಿಸ್ಟಿ ವಿಭಾಗ, ಜೆಎಸ್ಎಸ್ ವೈದ್ಯಕೀಯ ಕಾಲೇಜು, ಮೈಸೂರು], ಡಾ. ರಮಿತ್ ರಾಮು [ಸಹಾಯಕ ಪ್ರಾಧ್ಯಾಪಕರು, ಬಯೋ ಟೆಕ್ನಾಲಜಿ ಮತ್ತು ಬಯೋ ಇನ್ಫರ್ಮ್ಯಾಟಿಕ್ಸ್ ವಿಭಾಗ, ಸ್ಕೂಲ್ ಆಫ್ಲೈಫ್ ಸೈನ್ಸಸ್, ಜೆಎಸ್ಎಸ್ ಎಎಚ್ಇಆರ್] ಡಾ.ಕೆ. ಗೌತಮರಾಜನ್ [ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು, ಫಾರ್ಮಾಸ್ಯೂಟಿಕ್ಸ್ವಿಭಾಗ, ಜೆಎಸ್ಎಸ್ ಫಾರ್ಮಸಿ ಕಾಲೇಜು, ಊಟಿ], ಡಾ.ಕೆ.ವಿ.ವಿ. ಸತ್ಯನಾರಾಯಣ ರೆಡ್ಡಿ [ಸಹಾಯಕ ಪ್ರಾಧ್ಯಾಪಕರು, ಫಾರ್ಮಾಸ್ಯೂಟಿಕ್ಸ್ ವಿಭಾಗ, ಜೆಎಸ್ಎಸ್ ಫಾರ್ಮಸಿ ಕಾಲೇಜು, ಊಟಿ], ಮತ್ತು ದಿವಂಗತ ಡಾ. ಸೆಲ್ವಕುಮಾರ್ ಧರ್ಮರಾಜ್ [ಸಹಾಯಕ ಪ್ರಾಧ್ಯಾಪಕರು, ಸ್ಕೂಲ್ ಆಫ್ ಲೈಫ್ಸೈನ್ಸ್, ಊಟಿ], ಇವರಿಗೆ ಲಭಿಸಿರುತ್ತದೆ.

ಜಾಗತಿಕ ಮಟ್ಟದ ಇಂತಹ ಪ್ರತಿಷ್ಠಿತ ಮಾನ್ಯತೆಗಳಿಸಿರು ಎಲ್ಲ ವಿಜ್ಞಾನಿಗಲನ್ನು ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಸಂಸ್ಥೆಯು ಅಭಿನಂದಿಸಿದೆ.

ವಿಕ್ರಂ ಪ್ರಗ್ಯಾನ್‌ಗಳಿಗೆ ಅಪಾಯ

ಬೆಂಗಳೂರು (ಅ.21): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿ ಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದ ವಿಕ್ರಂ ಲ್ಯಾಂಡ‌ರ್‌ ಹಾಗೂ ಪ್ರಗ್ಯಾನ್ ರೋವರ್‌ಗೆ ಚಂದ್ರನ ಮೇಲೆ ಮೇಲೆ ಆಗಾಗ ಬಂದಪ್ಪಳಿಸುವ ಸಣ್ಣ ಕ್ಷುದ್ರಗ್ರಹಗಳಿಂದ ಅಪಾಯವಾಗುವ ಸಂಭವವಿದೆ. ಇಂತಹ ಘಟನೆಗಳು ಅಪೊಲೋ ಯೋಜನೆಯಲ್ಲೂ ಸಂಭವಿಸಿದ್ದು ಅದು ಇಲ್ಲೂ ಸಹ ಮರುಕಳಿಸಬಹುದು ಎಂದು ಮಣಿಪಾಲ್ ನೈಸರ್ಗಿಕ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ. ಪಿ. ಶ್ರೀಕುಮಾರ್ ತಿಳಿಸಿದ್ದಾರೆ. ಹಾಗೆಯೇ ಚಂದ್ರನಲ್ಲಿರುವ ಧೂಳಿನ ಕಣಗಳೂ ಸಹ ಲ್ಯಾಂಡರ್ ಹಾಗೂ ರೋವರ್ ಗೆ ಅಪಾಯ ಉಂಟು ಮಾಡುವ ಸಾಧ್ಯತೆಯಿದ್ದು, ಸೂರ್ಯನಿಂದ ಹೊರಸೂಸುವ ಸಣ್ಣ ಪ್ರಮಾಣದ ವಿಕಿರಣಗಳೂ ಕೂಡ ಅಪಾಯ ತಂದೊಡ್ಡಬಲ್ಲವು ಎಂದು ತಿಳಿಸಿದ್ದಾರೆ. ಪ್ರಗ್ಯಾನ್ ತನ್ನ 14 ದಿನಗಳ ಕಾರ್ಯಾಚರಣೆ ಮಾಡಿದ ಬಳಿಕ ಶಾಶ್ವತ ನಿದ್ರಾವಸ್ಥೆಯ ಸ್ಥಿತಿಗೆ ಪ್ರೊಗ್ರಾಂ ಮಾಡಲಾಗಿತ್ತು.

ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಕರ್ನಾಟಕದ ಕೇವಲ 7 ಜನ,

ಆಗಸ್ಟ್ 23 ರಂದು ಚಂದ್ರನ ಮೇಲೆ ಸ್ಪರ್ಶಿಸಿದ ಮತ್ತು ರೋವರ್ ನಿಯೋಜನೆಯೊಂದಿಗೆ ಹಲವಾರು ಪರೀಕ್ಷೆಗಳನ್ನು ನಡೆಸಿದ ಮಿಷನ್ ಅನ್ನು ಶಾಶ್ವತವಾಗಿ ಸ್ಲೀಪ್ ಮೋಡ್‌ನಲ್ಲಿ ಇರಿಸಲಾಗಿದೆ. ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಪ್ರಕಾರ, ವಿಕ್ರಮ್ ಲ್ಯಾಂಡರ್ ತನ್ನ "ಕೆಲಸವನ್ನು ಉತ್ತಮವಾಗಿ" ನಿರ್ವಹಿಸಿದ ನಂತರ "ಸಂತೋಷದಿಂದ ಚಂದ್ರನ ಮೇಲೆ ನಿದ್ರಿಸುತ್ತಿದೆ". ಸ್ಲೀಪ್ ಮೋಡ್‌ನಲ್ಲಿರುವಾಗ ಬಾಹ್ಯಾಕಾಶ ನೌಕೆಯು ಹೊಸ ಅಪಾಯಗಳನ್ನು ಎದುರಿಸುತ್ತಲೇ ಇರುತ್ತದೆ. ಅವುಗಳಲ್ಲಿ ಒಂದು ಚಂದ್ರನ ಹೊರಗಿನಿಂದ ಬರುವ ಕಾಯಗಳು.

ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (APXS) ಮತ್ತು ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (LIBS) ಅನ್ನು ಬಳಸಿಕೊಂಡು ರಾಸಾಯನಿಕ ಸಂಶೋಧನೆ ನಡೆಸುತ್ತಿದೆ. ದಕ್ಷಿಣ ಧ್ರುವದ ಸಮೀಪವಿರುವ ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ ಇರುವಿಕೆಯನ್ನು ರೋವರ್ ಕಂಡು ಹಿಡಿದಿದೆ.

click me!