ನಾಡಹಬ್ಬ ಮೈಸೂರು ದಸರಾ : ಎಂಜಿಎಸ್‌ ವಿಂಟೇಜ್, ಕ್ಲಾಸಿಕ್ ಕಾರ್ ರ್‍ಯಾಲಿ

By Kannadaprabha News  |  First Published Oct 21, 2023, 9:32 AM IST

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಹೆಬ್ಬಾಳಿನ ಕೈಗಾರಿಕಾ ಪ್ರದೇಶದಲ್ಲಿ ನಡೆದ ಎಂಜಿಎಸ್‌ ವಿಂಟೇಜ್‌, ಕ್ಲಾಸಿಕ್‌ಕಾರ್‌ ಮತ್ತು ಬೈಕ್‌ಗಳ ರ್‍ಯಾಲಿಗೆ ಕೆ.ಬಿ.ಗಣಪತಿ, ಸಂಸದ ಪ್ರತಾಪ್‌ ಸಿಂಹ, ಶಾಸಕ ಟಿ,ಎಸ್‌. ಶ್ರೀವತ್ಸ, ಪತ್ರಿಕೋದ್ಯಮಿ ಕೆ.ಬಿ.ಗಣಪತಿ ಅವರು ಶುಕ್ರವಾರ ಚಾಲನೆ ನೀಡಿದರು.


 ಎಲ್‌.ಎಸ್‌. ಶ್ರೀಕಾಂತ್‌

 ಮೈಸೂರು :  ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಹೆಬ್ಬಾಳಿನ ಕೈಗಾರಿಕಾ ಪ್ರದೇಶದಲ್ಲಿ ನಡೆದ ಎಂಜಿಎಸ್‌ ವಿಂಟೇಜ್‌, ಕ್ಲಾಸಿಕ್‌ಕಾರ್‌ ಮತ್ತು ಬೈಕ್‌ಗಳ ರ್‍ಯಾಲಿಗೆ ಕೆ.ಬಿ.ಗಣಪತಿ, ಸಂಸದ ಪ್ರತಾಪ್‌ ಸಿಂಹ, ಶಾಸಕ ಟಿ,ಎಸ್‌. ಶ್ರೀವತ್ಸ, ಪತ್ರಿಕೋದ್ಯಮಿ ಕೆ.ಬಿ.ಗಣಪತಿ ಅವರು ಶುಕ್ರವಾರ ಚಾಲನೆ ನೀಡಿದರು.

Tap to resize

Latest Videos

ಎಂ. ಗೋಪಿನಾಥ್‌ ಶೆಣೈ ಅವರ ಒಡೆತನದಲ್ಲಿರುವ ಸುಮಾರು 40ಕ್ಕೂ ಹೆಚ್ಚು ವಿಂಟೇಜ್‌ ಮತ್ತು ಬೈಕ್‌ಗಳು ಅತೀ ಅತ್ಯಾಕರ್ಷಕವಾಗಿದ್ದು, ದಸರಾ ಮಹೋತ್ಸವದ ಅಂಗವಾಗಿ ರ್‍ಯಾಲಿ ಆಯೋಜಿಸಿದ್ದರು.

ಪತ್ರಿಕೋದ್ಯಮಿ ಕೆ.ಬಿ.ಗಣಪತಿ ಮಾತನಾಡಿ, ಮೈಸೂರು ಮಹೋತ್ಸವಕ್ಕೆ ಅನೇಕ ಆಕರ್ಷಣೆಗಳು ಇದೆ. ಈ ಒಂದು ರ್‍ಯಾಲಿಯು ವಿಶೇಷವಾಗಿದೆ. ಇಂತಹ ಒಂದು ವಿಂಟೇಜ್‌ ಕಾರುಗಳು ಧರ್ಮಸ್ಥಳದಲ್ಲಿಯೂ ಇದೆ. ಎಂ. ಗೋಪಿನಾಥ್‌ ಶೆಣೈ ಅವರ ಬಳಿ ಇರುವ ಕಾರುಗಳು ವಿಶ್ವದ ಅಗ್ರಸ್ಥಾನದಲ್ಲಿದೆ, ಅವರಿಗೊಂದು ಬದ್ಧತೆ ಇದೆ. ಮನುಷ್ಯನಿಗೆ ಯಾವುದಾದರೂ ಒಂದು ಹುಚ್ಚು ಇರಬೇಕು, ಆಗ ಇಂತಹ ಕಾರ್ಯಗಳನ್ನು ಮಾಡಲು ಸಾಧ್ಯ ಎಂದರು.

ಮೈಸೂರು ಮತ್ತು ಕೊಡಗಿನ ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ಖ್ಯಾತ ಉದ್ಯಮಿಯಾದ ಎಂ.ಗೋಪಿನಾಥ್‌ ಶೆಣೈ ಮತ್ತು ಕುಟುಂಬದವರಿಂದ ಇಲ್ಲಿ 2ನೇ ಬಾರಿಗೆ ವಿಂಟೇಜ್‌ ಕಾರಿನ ರ್‍ಯಾಲಿ ನಡೆಯುತ್ತಿದ್ದು, 40 ವಿಂಟೇಜ್‌ ಕಾರ್‌ಗಳು ಹಾಗೂ ಮೊಟಾರ್‌ ಬೈಕ್‌ ಸೇರಿದಂತೆ ಒಟ್ಟು 100ಕ್ಕೂ ಹೆಚ್ಚು ವಾಹನಗಳನ್ನು ಇಟ್ಟಿದ್ದಾರೆ. ಇದನ್ನು ಅವರು ಪ್ಯಾಷನ್‌ ಇಟ್ಟುಕೊಂಡು ಮಾಡುತ್ತಿದ್ದಾರೆ.

ಕಳೆದ ಬಾರಿ ಮಾಜಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಬಂದು ಮೊದಲನೇ ವಿಂಟೇಜ್‌ ಕಾರ್‌ ರ್‍ಯಾಲಿಗೆ

ಚಾಲನೆ ನೀಡಿದ್ದರು. ಈ ಬಾರಿ ಹಿರಿಯ ಪತ್ರಿಕೋದ್ಯಮಿ ಕೆ.ಬಿ.ಗಣಪತಿ ಮತ್ತು ಶಾಸಕ ಶ್ರೀವತ್ಸವ ಅವರು ಬಂದು 2ನೇ ವಿಂಟೇಜ್‌ ಕಾರಿಗೆ ಚಾಲನೆ ನೀಡಿದ್ದಾರೆ ಎಂದರು.

ನಗರದಲ್ಲಿ ಬೇರೆಯವರ ಬಳಿ ಒಂದೇರಡು ಕಾರು ಇರಬಹುದು. ಆದರೆ, ಇಂತಹ ದೊಡ್ಡ ಪ್ರಮಾಣದ ಕಾರುಗಳು ಯಾರ ಬಳಿಯಲ್ಲೂ ಇಲ್ಲ, ಗೋಪಿನಾಥ್‌ ಶೆಣೈ ಅವರು ಇದನ್ನು ಷ್ಯಾಷನ್‌ ಇಟ್ಟುಕೊಂಡು ಮಾಡುತ್ತಿದ್ದಾರೆ. ಮ್ಯುಸಿಯಂ ಮಾಡಬೇಕೆಂದು ಉದ್ದೇಶ ಕೂಡ ಇಟ್ಟುಕೊಂಡಿದ್ದಾರೆ. ಇದಕ್ಕೆ ಅನುಮೋದನೆಯು ಸಹ ಸಿಕ್ಕಿದೆ. ಬಹುಶಃ ಮುಂದಿನ ಬಾರಿಗೆ ಒಳ್ಳೆಯ ಮ್ಯುಸಿಯಂ ಮಾಡಿರುತ್ತಾರೆ. ಅಲ್ಲಿಯೇ ಮುಂದಿನ ಬಾರಿ 3ನೇ ವಿಂಟೇಜ್‌ ಕಾರ್‌ ರ್‍ಯಾಲಿ ಮಾಡುವರು. ಮೈಸೂರಿನ ಜನತೆ ರ್‍ಯಾಲಿಯಲ್ಲಿ ಬರುವ ಕಾರುಗಳನ್ನು ನೋಡಿ ಖುಷಿ ಪಡಬಹುದು. ನಾಳೆ ಮತ್ತೆ ಮತ್ತೊಂದು ರ್‍ಯಾಲಿ ನಡೆಯಲಿದ್ದು, ಬೆಂಗಳೂರಿನಿಂದ ಒಂದು ತಂಡ ಬರಲಿದೆ. ಮೈಸೂರು ದಸರಾವನ್ನು ಇನ್ನೂ ಹೆಚ್ಚು ಆಕರ್ಷಣೆಯವಾಗಿ ಮಾಡಲು ಕಳೆದ ಬಾರಿಯಿಂದ ಈ ವೀಟೆಂಜ್‌ ಕಾರು ರ್‍ಯಾಲಿ ಆಯೋಜಿಸಲಾಗಿದೆ ಎಂದರು.

ಉದ್ಯಮಿ ಎಂ. ಗೋಪಿನಾಥ್‌ ಶೆಣೈ ಮಾತನಾಡಿ, ಇದರ ಫ್ಯಾಷನ್‌ ಆರಂಭವಾಗಿದ್ದು, 1965 ರಲ್ಲಿ ನಮ್ಮ ತಾತಾ ಅವರ ಬಳಿ ಇದ್ದ ಕಾರುಗಳು ನನಗೆ ಆಸಕ್ತಿ ಮೂಡಿಸಿತು. 20 ವರ್ಷಗಳ ಹಿಂದೆ ಬಂದ ಕಾರುಗಳು ನೋಡಲು ಖುಷಿಯಾಯಿತು. ನನಗೆ ಬೇಕು ಅನಿಸಿತು. ಇಂಡಿಯನ್‌ ಎಕ್ಸ್‌ಪ್ರೆಸ್‌ನ ಗೋಯಾಂಕ ಅವರು ಸಹ ನನಗೆ ಸಹಾಯ ಮಾಡಿದರು. ಅಲೇನ್‌ ಮತ್ತು ಸಂದೀಪ್‌ ನಾಯಕ್‌ ಅವರು ಇದ್ದರು, ರಾಯಲ್‌ ಫ್ಯಾಮಿಲಿಗಳ ಕಾರು ಸಹ ನನ್ನ ಬಳಿ ಇದೆ. ಈಗ ಹೊಸ ಕಾರಿಗೆ ಇರುವ ಬೆಲೆಯಷ್ಟೇ ಹಳೇಯ ಕಾರುಗಳಿಗೂ ಸಹ ಅಷ್ಟೇ ಬೆಲೆ ಇದೆ ಎಂದರು.

ಶಾಸಕ ಶ್ರೀವತ್ಸ ಮಾತನಾಡಿದರು. ಶ್ರೀಮತಿ ಗೋಪಿನಾಥ್‌ ಶೆಣೈ, ಅಲೆನ್‌, ಸಂದೀಪ್‌ ನಾಯಕ್‌, ಗಿರಿಧರ್‌ ಇತರರ ಇದ್ದರು. ಬಿ. ಭವ್ಯ ಪೈ ಪ್ರಾರ್ಥಿಸಿದರು. ಗಿರಿಧರ್‌ ನಿರೂಪಿಸಿ, ವಂದಿಸಿದರು. ಲಕ್ಷ್ಮೀ ಸ್ವಾಗತಿಸಿದರು.

click me!