ಮೊದಲ ಬಾರಿಗೆ ಶುಂಠಿ ಮಲೇಷ್ಯಾಕ್ಕೆ ರಫ್ತು : ರೈತರಲ್ಲಿ ಹರ್ಷ

By Kannadaprabha News  |  First Published Feb 13, 2021, 3:46 PM IST

ಶುಂಠಿಗೆ ಬೇಡಿಕೆ ಇದ್ದು, ಈಗ ಮಲೇಷ್ಯಾಕ್ಕೆ ಇದೇ ಮೊದಲ ಬಾರಿಗೆ ರಿಯೋಡಿ ಜೆನೆರಿಯಾ ಸ್ಥಳಿಯ ಶುಂಠಿಯನ್ನು ರಫ್ತು ಮಾಡಲಾಗುತ್ತಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ. 


ಬೆಟ್ಟದಪುರ (ಫೆ.13):  ಪಿರಿಯಾಪಟ್ಟಣ ತಾಲೂಕಿನಾದ್ಯಂತ ಉತ್ತಮ ಶುಂಠಿಗೆ ಬೇಡಿಕೆ ಇದ್ದು, ಈಗ ಮಲೇಷ್ಯಾಕ್ಕೆ ಇದೇ ಮೊದಲ ಬಾರಿಗೆ ರಿಯೋಡಿ ಜೆನೆರಿಯಾ ಸ್ಥಳಿಯ ಶುಂಠಿಯನ್ನು ರಫ್ತು ಮಾಡಲಾಗುತ್ತಿದ್ದು, ಹೋಬಳಿಯ ರೈತವರ್ಗದವರಿಗೆ ಹರ್ಷ ತಂದಿದೆ .

ಬೆಟ್ಟದಪುರ ಮುಖ್ಯರಸ್ತೆಯಲ್ಲಿರುವ ಶ್ರೀ ವಿನಾಯಕ ವಾಷಿಂಗ್‌ ಟ್ರೇಡಿಂಗ್‌ನಲ್ಲಿ ಶುಂಠಿಯನ್ನು ಶುಚಿ ಮಾಡಿ ಅಲ್ಲಿಂದ ವಿದೇಶಕ್ಕೆ 24 ಟನ್‌ ಶುಂಠಿಯನ್ನು ಎಸಿ ಕಂಟೈನರ್‌ನಲ್ಲಿ ರಫ್ತು ಮಾಡಲು ಸಕಲ ಸಿದ್ಧತೆ ಮಾಡಲಾಗಿದೆ.

Tap to resize

Latest Videos

undefined

ಕಿತ್ತೂರು ದೊಡ್ಡೇಗೌಡನಕೊಪ್ಪಲು ಜೋಗನಹಳ್ಳಿ ಗ್ರಾಮಗಳಲ್ಲಿ ಬೆಳೆದ ಶುಂಠಿಗೆ ಅತಿ ಹೆಚ್ಚು ಬೇಡಿಕೆ ಇದ್ದು. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳಿಗೆ 200 ಟನ್ ಶುಂಠಿಯ ಬೇಡಿಕೆಯಿದೆ. ಇದರಿಂದ 50 ಕೂಲಿ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ.

ರೈತರಿಗೆ ಸಂತಸದ ಸುದ್ದಿ: ಅಡಕೆಗೆ ಬಂಪರ್‌ ಬೆಲೆ..! ...

ಕೇರಳ ಮೂಲದ ಶುಂಠಿ ವ್ಯಾಪಾರಿ ಅಯೂಬ್ ಮಾತನಾಡಿ, ಚೀನಾ ದೇಶದ ಶುಂಠಿ ಹಾಗೂ ಭಾರತ ದೇಶದ ಶುಂಠಿಗೆ ಪೈಪೋಟಿಯಿದ್ದು. ಈ ಭಾಗದ ಶುಂಠಿಗೆ ಅತಿ ಹೆಚ್ಚು ಬೇಡಿಕೆ ಉಂಟಾದ್ದರಿಂದ ಈ ಭಾಗದಲ್ಲಿ ಹೆಚ್ಚು ರೈತರಿಂದ ಶುಂಠಿಯನ್ನು ಖರೀದಿಸುತ್ತಿದ್ದೇವೆ ಎಂದು ತಿಳಿಸಿದರು.

ಶ್ರೀ ವಿನಾಯಕ ವಾಷಿಂಗ್ಟನ್‌ ಟ್ರೆಂಡ್ಸ್‌ ಮಾಲೀಕ ಕುಲ್ದೀಪ್‌ ಮಾತನಾಡಿ, ಈ ಭಾಗದಲ್ಲಿ ತಂಬಾಕು ಬೆಳೆಗಾರರ ಜತೆಗೆ ಶುಂಠಿಯನ್ನು ಪ್ರಮುಖ ಬೆಳೆಯನ್ನಾಗಿ ಮಾಡುತ್ತಿದ್ದಾರೆ. ವಿದೇಶದಿಂದ ಶುಂಠಿಗೆ ಬೇಡಿಕೆ ಹೆಚ್ಚಾದ್ದರಿಂದ ಈ ಭಾಗದ ರೈತರಿಗೂ ದ್ವಿಗುಣವಾಗಿ ಆದಾಯಗಳಿಸಬಹುದು ಹಾಗೂ ಕೂಲಿ ಕಾರ್ಮಿಕರಿಗೆ ಹೆಚ್ಚು ಉದ್ಯೋಗ ಒದಗಿಸಿದಂತಾಗುತ್ತದೆ ಎಂದು ತಿಳಿಸಿದರು.

click me!