'ಕಾಂಗ್ರೆಸ್‌ನಲ್ಲಿ ಯಾವುದೆ ನಿರ್ಬಂಧ ಇಲ್ಲ : ಮುಕ್ತ ಅವಕಾಶ'

Kannadaprabha News   | Asianet News
Published : Feb 13, 2021, 03:28 PM IST
'ಕಾಂಗ್ರೆಸ್‌ನಲ್ಲಿ ಯಾವುದೆ ನಿರ್ಬಂಧ ಇಲ್ಲ : ಮುಕ್ತ ಅವಕಾಶ'

ಸಾರಾಂಶ

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರಿತಿಯ ನಿರ್ಬಂಧಗಳಿಲ್ಲ.. ಮುಕ್ತ ಅವಕಾಶವಿದೆ ಎಂದು ಮುಖಂಡರೋರ್ವರು ಹೇಳಿದರು. 

ಟಿ. ನರಸೀಪುರ (ಫೆ.13):  ಕಾಂಗ್ರೆಸ್‌ನಲ್ಲಿ ಎಲ್ಲ ಧರ್ಮ ಮತ್ತು ಜಾತಿಯವರಿಗೂ ಸಂಘಟನೆಯಲ್ಲಿ ಮುಕ್ತ ಅವಕಾಶವಿದೆ ಎಂದು ಯುವ ಘಟಕದ ಜಿಲ್ಲಾಧ್ಯಕ್ಷ ಡೋನಾಲ್ಡ್ ಎಫ್‌. ನಿರ್ಮಾಣಿಕ ಸ್ಪಷ್ಟಪಡಿಸಿದರು.

ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಕಬಿನಿ ಅತಿಥಿಗೃಹದಲ್ಲಿ ವರುಣ ಯುವ ಕಾಂಗ್ರೆಸ್‌ನ ನೂತನ ಉಪಾಧ್ಯಕ್ಷ ಎಂ. ಲಿಂಗರಾಜು ಹಾಗೂ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನಾನೂ ಕೂಡ ಅಲ್ಪಸಂಖ್ಯಾತನೇ, ನನ್ನ ಆಯ್ಕೆಯಿಂದ ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಸಾಂಸ್ಥಿಕ ಚುನಾವಣೆಯ ಸೋಲಿಗೆ ಚುನಾವಣಾಧಿಕಾರಿ ಮತ್ತು ವರಿಷ್ಠನ್ನು ದೂಷಿಸುವುದು ಸರಿಯಲ್ಲ ಎಂದರು.

'ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ, ಸಿಎಂ ಕುರ್ಚಿಯದ್ದೇ ಜಪ ಮಾಡ್ತಾರೆ.' ...

ವರುಣ ಯುವ ಕಾಂಗ್ರೆಸ್‌ನ ನೂತನ ಉಪಾಧ್ಯಕ್ಷ ಎಂ. ಲಿಂಗರಾಜು ಅವರನ್ನು ಸನ್ಮಾನಿಸಲಾಯಿತು.

ಪುರಸಭಾ ಸದಸ್ಯರಾದ ಆರ್‌. ನಾಗರಾಜು, ಅಹಮದ್‌ ಸಯೀದ್‌, ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕ ಅಮ್ಜದ್‌ ಖಾನ್‌, ಕುರುಬರ ಸಂಘದ ನಿರ್ದೇಶಕ ಎಂ.ಕೆ. ಸಹದೇವ, ಹಾಲುಮತ ಮಹಾಸಭಾ ಉಪಾಧ್ಯಕ್ಷ ಸುರೇಶ ಇದ್ದರು.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC