Mysuru : ಆನೆ ದಾಳಿ : 8 ಎಕರೆ ಬಾಳೆ ನಾಶ - ಆನೆಗಳ ದಾಳಿಯಿಂದ ಸಂಕಷ್ಟಕ್ಕೀಡಾಗಿರುವ ರೈತರು

By Kannadaprabha News  |  First Published Oct 12, 2023, 1:23 PM IST

ಹೋಬಳಿಯ ಚಂದ್ರವಾಡಿ ಮತ್ತು ನೆಲೆತಾಳಪುರ ಗ್ರಾಮದಲ್ಲಿ ಆನೆಗಳ ಹಿಂಡು ಜಮೀನಿಗಳ ಮೇಲೆ ಪದೇ ಪದೇ ದಾಳಿ ಮಾಡುತ್ತಿರುವುದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.


 ಹುಲ್ಲಹಳ್ಳಿ :  ಹೋಬಳಿಯ ಚಂದ್ರವಾಡಿ ಮತ್ತು ನೆಲೆತಾಳಪುರ ಗ್ರಾಮದಲ್ಲಿ ಆನೆಗಳ ಹಿಂಡು ಜಮೀನಿಗಳ ಮೇಲೆ ಪದೇ ಪದೇ ದಾಳಿ ಮಾಡುತ್ತಿರುವುದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಅನೇಕ ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು ಯಾರು ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

Latest Videos

undefined

ನೇಲಿತಾಳಪುರ ಗ್ರಾಮದ ಮನೋಹರ್ ಮತ್ತು ದಿನೇಶ್ ಎಂಬವವರ ಜಮೀನಿಗೆ ಲಗ್ಗೆ ಇಟ್ಟ ಆನೆಗಳ ಹಿಂಡು, ಸುಮಾರು 6 ರಿಂದ 8 ಎಕರೆಯಷ್ಟು ಬಾಳೆ ತೋಟವನ್ನು ತುಳಿದು ನಾಶ ಮಾಡಿದ್ದಲ್ಲದೆ, ಸೋಲಾರ್ ತಂತಿ ಬೇಲಿ. ಮನೆಯ ಮುಂದಿನ ದೊಡ್ಡ ಗೇಟನ್ನು ಮುರಿದು ಹಾಕಿ ಲಕ್ಷಾಂತರ ರು. ನಷ್ಟ ಅನುಭವಿಸಿದ್ದಾರೆ. ಸುಮಾರು ಒಂದು ವಾರದಿಂದಲೂ ಚಂದ್ರವಾಡಿ ನೆಲ್ಲಿತಾಳಪುರ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಕಾಡಿಗೆ ಓಡಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಯಾರು ಕೂಡ ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ, ಹೀಗೆ ಆದರೆ ನಮ್ಮ ಬೆಳೆಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಹೇಗೆ ಎಂಬ ಚಿಂತೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸಾಲ ಸೋಲ ಮಾಡಿ ನಾವು ಗಳು ಬೆಳೆಯನ್ನು ಬೆಳೆಯುತ್ತಿದ್ದೇವೆ ಒಂದು ಕಡೆ ಮಳೆ ಇಲ್ಲದೆ ಬೋರ್ ಗಳಲ್ಲಿ ನೀರು ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಕಾಡು ಪ್ರಾಣಿಗಳ ಹಾವಳಿ ಜಾಸ್ತಿಯಾಗಿದೆ, ಹೀಗೆ ಆದರೆ ನಾವುಗಳು ವಿಷ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಈಗಲಾದರೂ ಸರ್ಕಾರವಾಗಲಿ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳು ನಮ್ಮಗಳ ಕಷ್ಟಕ್ಕೆ ಸ್ಪಂದಿಸಿ ಆನೆಗಳ ಗುಂಪಿನಿಂದ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ ನಾವು ಬೆಳೆದ ಬೆಳೆಗಳು ರಕ್ಷಿಸಿ ಕೊಡಬೇಕೆಂದು ನೆಲಿತಾಳಪುರ ಹಾಗೂ ಚಂದ್ರವಾಡಿ ಗ್ರಾಮದ ರೈತರು ಅರಣ್ಯಾಧಿಕಾರಿ ಮತ್ತು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ಬಿಟ್ಟು ಹೋಗದಂತೆ ಮಾಲಿಕನ ತಡೆದ ಆನೆ

ಮನುಷ್ಯ ಹಾಗೂ ಪ್ರಾಣಿಗಳ ಒಡನಾಟದ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಮನುಷ್ಯ ಹೇಗೆ ಪ್ರೀತಿ ತೋರುತ್ತಾನೋ ಅದಕ್ಕಿಂತ ತುಸು ಜಾಸ್ತಿಯೇ ಪ್ರಾಣಿಗಳು ಮನುಷ್ಯನ ಮೇಲೆ ಪ್ರೀತಿ ತೋರುತ್ತವೆ. ಸಾಕುಪ್ರಾಣಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅದೇ ರೀತಿ ಇಲ್ಲೊಂದು ಕಡೆ ಮನುಷ್ಯ ಹಾಗೂ ಆನೆಯ ನಡುವಿನ ಪ್ರೀತಿಯನ್ನು ಸಾರುವ ವೀಡಿಯೋವೊಂದು ಸಾಕಷ್ಟು ವೈರಲ್‌ ಆಗಿದೆ.

ಆನೆಯೊಂದು ತನ್ನ ಮಾಲೀಕ ತನ್ನ ಬಿಟ್ಟು ಹೋಗದಂತೆ ತಡೆಯುತ್ತಿರುವ ವೀಡಿಯೋ ಇದಾಗಿದೆ. ಒಂದು ನಿಮಿಷ 48 ಸೆಕೆಂಡ್‌ಗಳ ಈ ವೀಡಿಯೋವನ್ನು ಅನಂತ್ ರೂಪನಗುಡಿ  ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. ಆನೆಯ ಪಾಲಕ ಹಾಗೂ ಆನೆಯ ನಡುವಿನ ಒಡನಾಟವಿದು, ಆನೆ ತನ್ನ ನೋಡಿಕೊಳ್ಳುವವನ್ನು ಬಿಟ್ಟು ಹೋಗುವುದಕ್ಕೆ ಬಿಡುತ್ತಿಲ್ಲ ಎಂದು ಬರೆದು ಈ ವೀಡಿಯೋವನ್ನು ಅನಂತ್ ರೂಪನಗುಡಿ ಪೋಸ್ಟ್ ಮಾಡಿದ್ದಾರೆ. ರಸ್ತೆಯೊಂದರಲ್ಲಿ ಈ ವೀಡಿಯೋವನ್ನು ಸೆರೆ ಹಿಡಿಯಲಾಗಿದೆ.

ವೀಡಿಯೋದಲ್ಲಿ ಏನಿದೆ?

ರಸ್ತೆಯಲ್ಲಿ ಆನೆ ಹಾಗೂ ಆನೆಯನ್ನು ನೋಡಿಕೊಳ್ಳುವವ ಹಾಗೂ ಮತ್ತೊರ್ವ ಇದ್ದಾರೆ, ಜೊತೆಗೆ ಒಂದು ಮೊಪೆಡ್ ರೀತಿಯ ಗಾಡಿ ಇದ್ದು, ಓರ್ವ ಈ ಗಾಡಿಯನ್ನು ಸ್ಟಾರ್ಟ್‌ ಮಾಡಿದ್ದರೆ. ಆನೆ ಮಾಲೀಕ ಹಿಂಬದಿ ಸವಾರನಾಗಿ ಗಾಡಿ ಮೇಲೆ ಕೂರಲು ನೋಡುತ್ತಾನೆ. ಆದರೆ ಅಲ್ಲೇ ಇದ್ದ ಆನೆ ಏನು ಮಾಡಿದರು ಮಾಲೀಕ ತನ್ನನ್ನು ಬಿಟ್ಟು ಹೋಗುವುದಕ್ಕೆ ಸುತಾರಾಂ ಒಪ್ಪುತ್ತಿಲ್ಲ, ಗಾಡಿ ಮೇಲೆ ಕೂತಿದ್ದ ಆತನನ್ನು ಸೊಂಡಿಲಿನಿಂದ ಎಳೆದು ಕೆಳಗಿಳಿಸಿದ ಆನೆ ಬಳಿಕ ಆತನನ್ನು ತನ್ನ ಬಾಲದಲ್ಲಿ ಸುತ್ತಿ ಹಿಡಿದು ಎಳೆದುಕೊಂಡು ಹೋಗುತ್ತದೆ. ಈ ವೇಳೆ ಮತ್ತೆ ಆನೆಯಿಂದ ತಪ್ಪಿಸಿಕೊಂಡು ಬರುವ ಮಾಲೀಕ ಮತ್ತೆ ಗಾಡಿ ಮೇಲೆ ಕೂರಲು ಯತ್ನಿಸಿದ್ದು, ಈ ವೇಳೆಯೂ ಆನೆ ಮಾತ್ರ ಆತನನ್ನು ಗಾಡಿ ಏರುವುದಕ್ಕೆ ಏನು ಮಾಡಿದರು ಬಿಡುವುದೇ ಇಲ್ಲ.. 

ದಾರಿಮಧ್ಯೆ ಸಂಕಷ್ಟಕ್ಕೊಳಗಾದ ಒಡತಿಯ ಸುರಕ್ಷಿತವಾಗಿ ಕರೆತಂದ ಶ್ವಾನ: ಕ್ಯಾಮರಾದಲ್ಲಿ ದೃಶ್ಯ ಸೆರೆ
 
ಈ ವೀಡಿಯೋ ನೋಡಿದ ಅನೇಕರು ಇವರಿಬ್ಬರ ಒಡನಾಡ ಬಹಳ ಪ್ರೀತಿಯಿಂದ ತುಂಬಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ದೃಶ್ಯ ನೋಡಿದ ಮೇಲೆ ನನಗೂ ಆನೆ ಸಾಕುವ ಮನಸಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆತ ತನ್ನ ಪಾಲಕನನ್ನು ಬೈಕ್‌ನಿಂದ ಇಳಿಸುವ ವೇಳೆ ಆತನಿಗೆ ನೋವಾಗದಂತೆ ಎಷ್ಟು ಕಾಳಜಿಯಿಂದ ನಿರ್ವಹಿಸುತ್ತಾನೆ ನೋಡಿ ಎಂದು ಆನೆಯ ಬುದ್ಧಿವಂತಿಕೆ ಹಾಗೂ ಕಾಳಜಿಯನ್ನು ಮತ್ತೊಬ್ಬರು ಶ್ಲಾಘಿಸಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಪ್ರಾಣಿಗಳು ಸ್ವಲ್ಪ ಪ್ರೀತಿ ತೋರಿದರೆ ತನ್ನ ಪ್ರೀತಿಸುವವನಿಗಾಗಿ ಏನು ಮಾಡಲು ಸಿದ್ಧವಿರುತ್ತವೆ ಎಂಬುದನ್ನು ಈ ವೀಡಿಯೋ ಸಾಬೀತುಪಡಿಸಿದೆ

click me!