ಸ್ಪರ್ಧೆ ಖಚಿತ : ಆದರೆ ದರ್ಶನ್ ಡೌಟ್ ?

By Web DeskFirst Published Sep 27, 2018, 5:42 PM IST
Highlights

ಈ ದಸರಾ ಗ್ರಾವೆಲ್ ಫೆಸ್ಟಿವಲ್ ಮೋಟಾರ್ ಉತ್ಸವವು ದೇಶದ ಅತಿ ದೊಡ್ಡ ಮೋಟಾರ್ ಉತ್ಸವವಾಗಿದ್ದು, ಚಾಲಕರು ತಮ್ಮ ಚಾಲನೆ ಕೌಶಲ್ಯಗಳನ್ನು ಪ್ರದರ್ಶಿಸಲಿದ್ದಾರೆ. ಎಂಜಿನ್ ಆಧಾರದ ಮೇಲೆ ಇಲ್ಲಿ 8 ವಿಭಾಗಗಳಲ್ಲಿ ಸ್ಪರ್ಧೆಗಳು
ನಡೆಯಲಿದೆ.

ಮೈಸೂರು[ಸೆ.27]: ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ಪ್ರವಾಸೋದ್ಯಮ ಇಲಾಖೆಯ ಸಹ ಯೋಗದೊಂದಿಗೆ ದಸರಾ ಮಹೋತ್ಸವ ಅಂಗ ವಾಗಿ ಅ.7ರಂದು ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ದಸರಾ ಆಟೋ ಕ್ರಾಸ್ ಎಂಬ ಕಾರ್ ರೇಸ್ ಆಯೋಜಿಸಿದೆ.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ದಸರಾ ಸಭೆಯಲ್ಲಿ ಕಾರ್ ರೇಸ್‌ನ ಪೋಸ್ಟರ್‌ಗಳನ್ನು ಸಚಿವರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್ ಅವರು ಬಿಡುಗಡೆಗೊಳಿಸಿದರು. ಈ ದಸರಾ ಗ್ರಾವೆಲ್ ಫೆಸ್ಟಿವಲ್ ಮೋಟಾರ್ ಉತ್ಸವವು ದೇಶದ ಅತಿ ದೊಡ್ಡ ಮೋಟಾರ್ ಉತ್ಸವವಾಗಿದ್ದು, ಚಾಲಕರು ತಮ್ಮ ಚಾಲನೆ ಕೌಶಲ್ಯಗಳನ್ನು ಪ್ರದರ್ಶಿಸಲಿದ್ದಾರೆ. ಎಂಜಿನ್ ಆಧಾರದ ಮೇಲೆ ಇಲ್ಲಿ 8 ವಿಭಾಗಗಳಲ್ಲಿ ಸ್ಪರ್ಧೆಗಳು
ನಡೆಯಲಿದೆ.

ಪ್ರತಿ ವಿಭಾಗಗಳಲ್ಲಿ ವಿಜೇತರಿಗೆ ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು.ರೇಸ್ ಹಿನ್ನೆಲೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಲಬ್‌ನ ಅಧ್ಯಕ್ಷ ಪಾಲ್ಗುಣ್ ವಿ ಅರಸ್ ವಿವರಿಸಿದರು.

ದರ್ಶನ್ ಭಾಗವಹಿಸುವಿಕೆ ಅನುಮಾನ?
ಈ ವೇಳೆ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ. ಮಹೇಶ್ ಮಾತನಾಡಿ, ದಸರಾ ಕಾರ್ ರೇಸ್ ಉದ್ಘಾಟನೆಯಲ್ಲಿ ನಟ ದರ್ಶನ್ ಅವರು ಭಾಗವಹಿಸಬೇಕಿತ್ತು. ಅಲ್ಲದೆ, ದರ್ಶನ್ ಅವರು ಸ್ಪರ್ಧಿಯಾಗಿದ್ದರು. ಆದರೆ, ಅಪಘಾತದಲ್ಲಿ ಅವರ ಕೈಗೆ ನೋವಾಗಿದೆ. ಹೀಗಾಗಿ, ಅವರು ಬರುತ್ತಾರೋ ಇಲ್ಲವೊ ಗೊತ್ತಿಲ್ಲ. ಆದರೆ, ರೇಸ್ ಮಾತ್ರ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
 

click me!