ರಾಜಕೀಯ ದ್ವೇಷದಿಂದ ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿ ಕಡೆಗಣನೆ

By Kannadaprabha News  |  First Published Feb 21, 2024, 12:12 PM IST

ಮಂಡಕಳ್ಳಿಯಲ್ಲಿರುವ ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿಯನ್ನು ರಾಜಕೀಯ ದ್ವೇಷದ ಕಾರಣ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಡೆಗಣಿಸಿದೆ. ಹೀಗೆ ಮುಂದುವರೆದರೆ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಾಪಂ ಮಾಜಿ ಅಧಕ್ಷೆ ಮಂಜುಳಾ ಮಂಜುನಾಥ್ ಎಚ್ಚರಿಸಿದರು.


  ಮೈಸೂರು :  ಮಂಡಕಳ್ಳಿಯಲ್ಲಿರುವ ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿಯನ್ನು ರಾಜಕೀಯ ದ್ವೇಷದ ಕಾರಣ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಡೆಗಣಿಸಿದೆ. ಹೀಗೆ ಮುಂದುವರೆದರೆ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಾಪಂ ಮಾಜಿ ಅಧಕ್ಷೆ ಮಂಜುಳಾ ಮಂಜುನಾಥ್ ಎಚ್ಚರಿಸಿದರು.

ರಾಜ್ಯಕ್ಕೆ ಸಾಕಷ್ಟು ಬಾರಿ ಭೇಟಿ ನೀಡಿದ್ದರೂ ಚುನಾವಣೆಯಲ್ಲಿ ಸೋಲು ಕಂಡಿದ್ದಕ್ಕೆ ಮೋದಿಯವರು ಈ ರೀತಿ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ. ದೇಶದ ಅನೇಕ ಭಾಗಗಳಿಗೆ ಇಂಧನ ಸಬ್ಸಿಡಿ ಕಡಿತಗೊಳಿಸಿ, ನಿತ್ಯವೂ ವಿಮಾನಗಳ ಸಂಚಾರವಿದ್ದ ಮೈಸೂರು ವಿಮಾನ ನಿಲ್ದಾಣವನ್ನು ಸಂಪೂರ್ಣ ಸೊರಗುವಂತೆ ಮಾಡಿದ್ದಾರೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

Latest Videos

undefined

ಅಭಿವೃದ್ಧಿ ಮಾಡುತ್ತೇವೆ, ಭೂಮಿ ಸ್ವಾಧೀನ ಪಡಿಸುವ ಅಗತ್ಯವಿದೆ ಎನ್ನುತ್ತಾ ಸುತ್ತಮುತ್ತಲಿನ ರೈತರ ಜಮೀನು ಮಾರಾಟಕ್ಕೂ ಸಮಸ್ಯೆ ಉಂಟಾಗಿದೆ. ಅಲ್ಲದೆ, ರಾಜ್ಯ ಸರ್ಕಾರ ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ ಸಿದ್ಧವಿದ್ದು, ಕೇಂದ್ರ ಸರ್ಕಾರವು ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳಬೇಕು. ರೈತರು ಹಾಗೂ ನಗರವಾಸಿಗಳ ಅಭಿವೃದ್ಧಿಯಲ್ಲಿ ಚೆಲ್ಲಾಟವಾಡಬಾರದು ಎಂದು ಅವರು ಆಗ್ರಹಿಸಿದರು.

ಹಾಗೆಯೇ ಮಹಿಳೆಯರ ಸ್ವಾವಲಂಬನೆಗಾಗಿ ಸಾಕಷ್ಟು ಕೆಲಸ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಇರಿಸಬೇಕು ಎಂದು ಅವರು ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡರಾದ ಕಡಕೊಳ ಶಿವಲಿಂಗ, ವಿಜಯಕುಮಾರ್, ಸೋಮಶೇಖರ್, ಮಂಜುನಾಥ್ ಇದ್ದರು.

click me!