ಕೃಷಿ ನವೋದ್ಯಮ, ಕೃಷಿ ಭಾಗ್ಯ ಪ್ರಶಸ್ತಿ ಯೋಜನೆ ಪ್ರಚಾರ ಕೈಗೊಳ್ಳಿ : ಜಿಪಂ ಸಿಇಒ ಕೆ.ಎಂ. ಗಾಯತ್ರಿ

By Kannadaprabha News  |  First Published Feb 21, 2024, 12:02 PM IST

ಜಿಲ್ಲೆಯಲ್ಲಿ ಅನುಷ್ಟಾನವಾಗುತ್ತಿರುವ ಕೃಷಿ ನವೋದ್ಯಮ, ಕೃಷಿ ಭಾಗ್ಯ, ಹೈಟೆಕ್ ಹಾರ್ವೆಸ್ಟರ್ ಹಬ್ ಹಾಗೂ ಕೃಷಿ ಪ್ರಶಸ್ತಿ ಯೋಜನೆಗೆ ಸಂಬಂಧಿಸಿದoತೆ ಹೆಚ್ಚಿನ ಪ್ರಚಾರ ಕೈಗೊಳ್ಳಿ ಎಂದು ಜಿಪಂ ಸಿಇಒ ಕೆ.ಎಂ. ಗಾಯತ್ರಿ ಅಧಿಕಾರಿಗಳಿಗೆ ಸೂಚಿಸಿದರು.


 ಮೈಸೂರು :  ಜಿಲ್ಲೆಯಲ್ಲಿ ಅನುಷ್ಟಾನವಾಗುತ್ತಿರುವ ಕೃಷಿ ನವೋದ್ಯಮ, ಕೃಷಿ ಭಾಗ್ಯ, ಹೈಟೆಕ್ ಹಾರ್ವೆಸ್ಟರ್ ಹಬ್ ಹಾಗೂ ಕೃಷಿ ಪ್ರಶಸ್ತಿ ಯೋಜನೆಗೆ ಸಂಬಂಧಿಸಿದoತೆ ಹೆಚ್ಚಿನ ಪ್ರಚಾರ ಕೈಗೊಳ್ಳಿ ಎಂದು ಜಿಪಂ ಸಿಇಒ ಕೆ.ಎಂ. ಗಾಯತ್ರಿ ಅಧಿಕಾರಿಗಳಿಗೆ ಸೂಚಿಸಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ನವೋದ್ಯಮ, ಕೃಷಿ ಭಾಗ್ಯ, ಹೈಟೆಕ್ ಹಾರ್ವೆಸ್ಟರ್ ಹಬ್ ಹಾಗೂ ಕೃಷಿ ಪ್ರಶಸ್ತಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ ಭಾಗ್ಯ ಯೋಜನೆಯಡಿ ಈವರೆಗೆ ಒಟ್ಟು 283 ಗುರಿಯಿದ್ದು, ಈವರೆಗೆಗೂ 231 ರೈತರು ಅರ್ಜಿ ಸಲ್ಲಿಸಿದ್ದು, 149 ಫಲಾನುಭವಿಗಳಿಗೆ ಈಗಾಗಲೇ ಕಾರ್ಯದೇಶವನ್ನು ನೀಡಲಾಗಿದೆ. ಎಲ್ಲಾ ಯೋಜನೆಯಡಿ ಹೆಚ್ಚು ಪ್ರಚಾರ ಕೈಗೊಂಡು ಹೆಚ್ಚು ರೈತರಿಗೆ ಸಹಾಯಧನ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದರು.

Latest Videos

undefined

ಸಭೆಯಲ್ಲಿ ಕೃಷಿ ನವೋದ್ಯಮ ಯೋಜನೆಯಡಿ ಎರಡು ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಪರಿಶೀಲನೆಗೆ ಮಟ್ಟದ ಸಮಿತಿಗೆ ಶಿಫಾರಸು ಮಾಡಲಾಯಿತು. ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಸಂಸ್ಥೆ ವತಿಯಿಂದ ಒಂದು ಅರ್ಜಿ ಹಾಗೂ ಫಲಾನುಭವಿಯ ಒಂದು ಅರ್ಜಿ ಪರಿಶೀಲನೆಗೆ ಕಾರ್ಯಾದೇಶ ನೀಡಲು ನಿರ್ಧರಿಸಲಾಯಿತು. 2022- 23ನೇ ಸಾಲಿಗೆ ಸಂಬಂಧಿಸಿದಂತೆ ಕೃಷಿ ಪ್ರಶಸ್ತಿ ಯೋಜನೆಯಡಿ ಜಿಲ್ಲೆಯಲ್ಲಿ ನೊಂದಾಯಿಸಲಾದ ರೈತರ ಆಯ್ಕೆಯನ್ನು ಮಾಡಲಾಯಿತು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಎಸ್. ಚಂದ್ರಶೇಖರ್, ಮೈಸೂರು ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಧನಂಜಯ, ಹುಣಸೂರು ಉಪ ವಿಭಾಗದ ಉಪ ಕೃಷಿ ನಿರ್ದೇಶಕ ರಾಜು, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

click me!