Vijayapura: ನೀರಾವರಿ ವ್ಯಾಪ್ತಿ ಹೆಚ್ಚಿಸುವುದೇ ನನ್ನ ಗುರಿ: ಶಾಸಕ ಸೋಮನಗೌಡ

By Govindaraj S  |  First Published Nov 30, 2022, 3:59 PM IST

ಕೆರೆಗಳನ್ನು ತುಂಬಿಸುವ ಮೂಲಕ ಸುಮಾರು 2 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಕಲ್ಪಿಸುವುದರ ಜೊತೆ ಇನ್ನೂ ಹೆಚ್ಚಿನ ನೀರಾವರಿ ಮಾಡಬೇಕು ಎಂಬುವುದು ನನ್ನ ಕನಸು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. 


ದೇವರಹಿಪ್ಪರಗಿ (ನ.30): ಕೆರೆಗಳನ್ನು ತುಂಬಿಸುವ ಮೂಲಕ ಸುಮಾರು 2 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಕಲ್ಪಿಸುವುದರ ಜೊತೆ ಇನ್ನೂ ಹೆಚ್ಚಿನ ನೀರಾವರಿ ಮಾಡಬೇಕು ಎಂಬುವುದು ನನ್ನ ಕನಸು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಕ್ಷೇತ್ರದಲ್ಲಿ ನೀರಾವರಿ ವ್ಯಾಪ್ತಿ ಹೆಚ್ಚಿಸುವುದೇ ನನ್ನ ಗುರಿ ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.

ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದಲ್ಲಿ ಸೋಮವಾರ .495 ಲಕ್ಷ ವೆಚ್ಚದ ಹಡಗಲಿ-ಯಂಭತ್ನಾಳ-ಬೊಮ್ಮನಳ್ಳಿ-ಮಾರ್ಕಬ್ಬಿನಹಳ್ಳಿ-ಸಾತಿಹಾಳ ರಸ್ತೆ ಕಿಮೀ 16.130-18.580 ವರೆಗೆ ಸರ್ಕಾರಿ ಪ್ರೌಢಶಾಲೆ ರಸ್ತೆ ಸಹಿತ ಜಿಲ್ಲಾ ಮುಖ್ಯರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸುವ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾದ ಗ್ರಾಮದ ಪ್ರೌಢಶಾಲೆಯ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

Tap to resize

Latest Videos

Vijayapura: ಮತದಾರ ಪಟ್ಟಿಯಲ್ಲಿ ಹೆಸರು ಡಿಲಿಟ್‌ ಖಂಡಿಸಿ ಧರಣಿ ಸತ್ಯಾಗ್ರಹ

ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ನಾವೆಲ್ಲರೂ ಸಹಕರಿಸೋಣ, ವಾಲ್ಮೀಕಿ ಭವನಕ್ಕೆ 10 ಲಕ್ಷ, ದರ್ಗಾಕ್ಕೆ 3ಲಕ್ಷ ವೆಚ್ಚದಲ್ಲಿ ಬೊರ್ವೆಲ್‌ ಕೊರೆಸಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಸುಮಾರು .0 ಲಕ್ಷ ವೆಚ್ಚದ ಓರ್ವ ಹೆಡ್‌ಟ್ಯಾಂಕ್‌, ಮಲ್ಲಿಕಾರ್ಜುನ ದೇವಸ್ಥಾನದ ಸಮುದಾಯ ಭವನಕ್ಕೆ 3 ಲಕ್ಷ, ಸುಮಾರು 78 ಲಕ್ಷ ವೆಚ್ಚದ ಜೆಜೆಎಂ ಕಾಮಗಾರಿ ಸೇರಿದಂತೆ ಗ್ರಾಮಸ್ಥರ ಹಲವಾರು ಬೇಡಿಕೆಗಳನ್ನು ಈಡೇರಿಸಲಾಗಿದೆ. ಮುಂಬರುವ ದಿನಗಳಲ್ಲಿ ಹಂತ​-ಹಂತವಾಗಿ ಕೆಲ ಬೇಡಿಕೆಗಳನ್ನು ಈಡೇರಿಸಲಾಗುವುದು. ಮತಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಜನರ ವಿಶ್ವಾಸದಿಂದ ಮಾದರಿ ಕ್ಷೇತ್ರ ನಿರ್ಮಾಣದ ಪಣತೊಟ್ಟಿದ್ದೇನೆ. ಅಭಿವೃದ್ಧಿಗೆ ಯಾವುದೇ ಜಾತಿ ಇಲ್ಲ, ಸರ್ವ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ರೈತರಿಗಾಗಿ ವಿದ್ಯುತ್‌ ಕ್ಷೇತ್ರದ ಅಭಿವೃದ್ಧಿಗಾಗಿ ಪಟ್ಟಣದಲ್ಲಿ ಸುಮಾರು 400 ಮೆಗಾ ವ್ಯಾಟ್‌ ಹಾಗೂ ಕ್ಷೇತ್ರದಲ್ಲಿ 2 ಹೊಸ 110 ಕೆವಿ ವಿದ್ಯುತ್‌ ಸ್ಥಾವರ ನಿರ್ಮಾಣ ಮಾಡಲು ಪ್ರಯತ್ನಿಸಿದ್ದೇನೆ. ಬರುವಂತ ದಿನಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸುಮಾರು .1208 ಕೋಟಿ ವೆಚ್ಚದ ನಾರಾಯಣಪುರ ಹಿನ್ನೀರಿನಿಂದ ಪ್ರತಿ ಗ್ರಾಮಕ್ಕೂ ನೀರು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಶೀಘ್ರದಲ್ಲಿ ಜಾರಿಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಪಪಂ ಸದಸ್ಯರಾದ ರಮೇಶ ಮಸಿಬಿನಾಳ ಮಾತನಾಡಿ, ಮತಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರು ಸಾಕಷ್ಟುಅನ್ನದಾನವನ್ನು ತಂದು ರಸ್ತೆ, ರೈತರಿಗೆ ನೀರು, ಪ್ರತಿ ಗ್ರಾಮಕ್ಕೂ ಸಿ.ಸಿ.ರಸ್ತೆ ಸೇರಿದಂತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ರೈತರಿಗಾಗಿ ವಿದ್ಯುತ್‌ ಹಾಗೂ ನೀರಾವರಿ ಅವರ ಕನಸಾಗಿದ್ದು ಮುಂಬರುವ ದಿನಗಳಲ್ಲಿ ಅವರಿಗೆ ಸಹಕಾರ ಕೊಟ್ಟು ಕೈ ಬಲಪಡಿಸೋಣ ಎಂದರು.

ಗ್ರಾಮದ ಮುಖಂಡ ಎಂ.ಆರ್‌.ಪಾಟೀಲ್‌ ಮಾತನಾಡಿ, ಗ್ರಾಮಸ್ಥರೆಲ್ಲರೂ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ ಕೆಲ ತಿಂಗಳಲ್ಲಿಯೇ ಕಾಮಗಾರಿ ಪ್ರಾರಂಭಿಸಿದ್ದು ಶಾಸಕರ ಕ್ರಿಯಾಶೀಲತೆಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ತಿಳಿಸಿದರು. ಪಿಡಬ್ಲ್ಯೂಡಿ ಇಲಾಖೆಯ ಎಇಇ ಗಳಾದ ಜೆ.ವಿ.ಕೀರಸೂರ ಕಾಮಗಾರಿಯ ಮಾಹಿತಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಭೀಮನಗೌಡ ಸಿದರಡ್ಡಿ, ಗ್ರಾಪಂ ಅಧ್ಯಕ್ಷರಾದ ಮಹಾಂತಗೌಡ, ಪಿಡಬ್ಲ್ಯೂಡಿ ಎಇ ಎಸ್‌.ಜಿ.ದೊಡ್ಡಮನಿ, ಗುತ್ತಿಗೆದಾರರಾದ ರಾಮು ಕೌಲಗಿ, ಎಂ.ಎಸ್‌.ಹಿರೇಮಠ, ಶಿವಾನಂದ ಮಾವಿನಗಿಡ, ಗಂಗನಗೌಡ ಪಾಟೀಲ, ಕೆ.ಬಿ.ರೊಗಿ, ಎಸ್‌.ಜಿ.ರೊಗಿ ಸೇರಿದಂತೆ ಸುತ್ತ-ಮುತ್ತಲಿನ ಗ್ರಾಮಸ್ಥರು, ಗ್ರಾಮದ ಪ್ರಮುಖರು ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯಪುರದಲ್ಲಿ ವಿಚಿತ್ರ ಹಬ್ಬದ ಆಚರಣೆ: ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

ಮತಕ್ಷೇತ್ರದ ಸಮಗ್ರ ನೀರಾವರಿ ಸೌಲಭ್ಯ ಒದಗಿಸಲು ವಿಜಯಪುರ ಮುಖ್ಯ ಕಾಲುವೆಗೆ ಉಪ ಕಾಲುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಸುಮಾರು .800 ಕೋಟಿ ವೆಚ್ಚದ ಟೆಂಡರ್‌ ಪ್ರಕ್ರಿಯೆ ನಡೆದಿದ್ದು ಇದರಿಂದ ಮತಕ್ಷೇತ್ರದ 1.25 ಲಕ್ಷ ಎಕರೆ ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸುವ ಬಹುನಿರೀಕ್ಷಿತ ಬೂದಿಹಾಳ-ಪಿರಾಪುರ ಏತ ನೀರಾವರಿ ಕಾಲುವೆ ನಿರ್ಮಾಣದ ಸುಮಾರು .800 ಕೋಟಿ ವೆಚ್ಚದ ಕಾಮಗಾರಿಯಿಂದ ಸುಮಾರು 55 ಸಾವಿರ ಎಕರೆ ರೈತರ ಜಮೀನುಗಳಿಗೆ ಶೀಘ್ರದಲ್ಲಿ ನೀರು ಒದಗಿಸುವ ಉದ್ದೇಶದಿಂದ ಬರುವಂತ ದಿನಗಳಲ್ಲಿ ಪ್ರಾಯೋಗಿಕವಾಗಿ ಕೆಲ ಪ್ರದೇಶಕ್ಕೆ ನೀರು ಹರಿಸಲಾಗುವುದು.
-ಸೋಮನಗೌಡ ಪಾಟೀಲ ಸಾಸನೂರ, ಶಾಸಕರು

click me!