ಸ್ವಚ್ಛತೆ ನಿರ್ವಹಣೆಯಲ್ಲಿ ಸ್ತ್ರೀಯರ ಪಾತ್ರ ಅನನ್ಯ: ಉಮಾ ಮಹಾದೇವನ್‌

By Govindaraj S  |  First Published Nov 30, 2022, 3:00 PM IST

ಸ್ವಚ್ಛತೆ ನಿರ್ವಹಣೆಯಲ್ಲಿ ಸ್ವ-ಸಹಾಯ ಸಂಘಗಳ ಮಹಿಳೆಯರ ಪಾತ್ರ ಮುಖ್ಯವಾಗಿದ್ದು, ಅವರಿಗೆ ಸಾಮಥ್ರ್ಯಾಭಿವೃದ್ಧಿ ತರಬೇತಿ ಅವಶ್ಯವಾಗಿದೆ ಎಂದು ಪಂಚಾಯತ್‌ ರಾಜ್‌ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್‌ ತಿಳಿಸಿದರು.


ಬಾಗಲಕೋಟೆ (ನ.30): ಸ್ವಚ್ಛತೆ ನಿರ್ವಹಣೆಯಲ್ಲಿ ಸ್ವ-ಸಹಾಯ ಸಂಘಗಳ ಮಹಿಳೆಯರ ಪಾತ್ರ ಮುಖ್ಯವಾಗಿದ್ದು, ಅವರಿಗೆ ಸಾಮಥ್ರ್ಯಾಭಿವೃದ್ಧಿ ತರಬೇತಿ ಅವಶ್ಯವಾಗಿದೆ ಎಂದು ಪಂಚಾಯತ್‌ ರಾಜ್‌ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್‌ ತಿಳಿಸಿದರು. ಜಿ.ಪಂ, ನೂತನ ಸಭಾಭವನದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್‌ ಇಲಾಖೆ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನಯೋಪಾಯ ಇಲಾಖೆ ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಸ್ವಚ್ಛ ಸಂಕೀರ್ಣ ನಿರ್ವಹಣೆಯಲ್ಲಿ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಹಮ್ಮಿಕೊಂಡ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಹಾಗೆ ಗ್ರಾಮವನ್ನು ಸ್ವಚ್ಛವಾಗಿಡುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದರು. ಗ್ರಾಮಗಳ ಅಭಿವೃದ್ಧಿಗೆ ದೂರದೃಷ್ಟಿಯೋಜನೆ ಅಗತ್ಯವಾಗಿದೆ. ಗ್ರಾಮದಲ್ಲಿ ಡಿಜಿಟಲ್‌ ಗ್ರಂಥಾಲಯ, ಘನತ್ಯಾಜ್ಯ ವಿಲೇವಾರಿ ಮುಖ್ಯವಾಗಿದೆ. ಗ್ರಾಮಗಳ ಘನತ್ಯಾಜ್ಯವನ್ನು ಬೇರ್ಪಡಿಸಿ ವಿಲೇವಾರಿಯಲ್ಲಿ ಸ್ವ-ಸಹಾಯಗಳ ಪಾತ್ರ ಮುಖ್ಯವಾಗಿದೆ. ಇದರಿಂದ ಮಹಿಳೆಯರು ಉದ್ಯೋಗ ಪಡೆಯುವದರ ಜೊತೆಗೆ ಗ್ರಾಮ ಸ್ವಚ್ಛವಾಗಿಡಲು ಸಾಧ್ಯವಾಗುತ್ತದೆ. ತಮ್ಮದೇಯಾದ ನಿವೇಶನ ಹೊಂದಿದಲ್ಲಿ ಶೆಡ್‌ ನಿರ್ಮಿಸಿಕೊಂಡು ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದರು.

Tap to resize

Latest Videos

undefined

Bagalkote: ಹದಗೆಟ್ಟ ರಸ್ತೆ: ಕಬ್ಬು ಸಾಗಣೆಗೆ ಸಂಕಷ್ಟ

ಮಹಿಳೆಯರು ಸ್ವಚ್ಛವಾಹಿನಿಯ ಚಾಲನೆ ಮಾಡುವದಷ್ಟೇ ಅಲ್ಲ ಟ್ರ್ಯಾಕ್ಟರ್‌, ಜೆಸಿಬಿಗಳನ್ನು ಸಹ ಚಾಲನೆ ಮಾಡುತ್ತಿದ್ದಾರೆ. ಗಂಡಸರಿಗೆ ಸಮಾನವಾದ ಕೆಲಸವನ್ನು ಮಹಿಳೆಯರು ಮಾಡಬಹುದಾಗಿದೆ. ಇದಕ್ಕಾಗಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಮಥ್ರ್ಯಾಭಿವೃದ್ಧಿ ತರಬೇತಿ ನೀಡುವ ಮೂಲಕ ಮಹಿಳಾ ಸಬಲೀಕರಣದ ಜೊತೆಗೆ ಗ್ರಾಮಗಳ ಅಭವೃದ್ಧಿ ಮಾಡಲಾಗುತ್ತಿದೆ. ತರಬೇತಿಯ ಲಾಭವನ್ನು ತಾವು ಪಡೆದುಕೊಳ್ಳಬಹುದು ಎಂದರು.

ಜಿ.ಪಂ ಸಿಇಒ ಟಿ.ಭೂಬಾಲನ್‌ ಮಾತನಾಡಿ, ಜಿಲ್ಲೆಯಲ್ಲಿ ಸುಸಜ್ಜಿತವಾದ ಕಟ್ಟಡ ಹೊಂದಿರುವ ಸ್ಥಳಗಲ್ಲಿ ಡಿಜಿಟಲ್‌ ಗ್ರಂಥಾಲಯ ಪ್ರಾರಂಭಿಸಲಾಗುತ್ತದೆ. ಘನತ್ಯಾಜ್ಯ ವಿಲೇವಾರಿಗೆ ಕಾರ್ಯಕ್ಕೆ 5 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಪರ ಕಾರ್ಯದರ್ಶಿಗಳು ಹೇಳಿದ ವಿಷಯಗಳನ್ನು ಪಾಲಿಸುವುದಾಗಿ ತಿಳಿಸಿದ ಅವರು ಜಿಲ್ಲೆಯಲ್ಲಿರುವ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಗೆ ದೂರದೃಷ್ಟಿಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ಎಎನ್‌ಎನ್‌ಎಸ್‌ಐಆರ್‌ಡಿ ಮತ್ತು ಪಿಆರ್‌ ನಿರ್ದೇಶಕಿ ಲಕ್ಷ್ಮೇಪ್ರಿಯಾ ಅವರು ದೂರದೃಷ್ಟಿಯೋಜನೆ ಕುರಿತು, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಸಿ.ಆರ್‌.ಮುಂಡರಗಿ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಜಿಲ್ಲೆಯ ಪ್ರಸ್ತುತ ಅನುಷ್ಠಾನ ಹಾಗೂ ಪ್ರಗತಿ ವರದಿ ಕುರಿತು ಮಾತನಾಡಿದರು. ಹಸಿರುದಳ ಸಂಸ್ಥೆಯ ಮಂಜುನಾಥ ಅವರಿಂದ ಕಸ ವಿಂಗಡಣೆ ಕುರಿತು, ಬೆಂಗಳೂರಿನ ಸಾಹಸ್‌ ಸಂಸ್ಥೆ ಪ್ರತಿನಿ​ಧಿ ಚಂದ್ರಶೇಖರ ಸುಸ್ಥಿರ ಕಸ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

Bagalkote: ಲಿಂಗತ್ವ ಅಲ್ಪಸಂಖ್ಯಾತರಿಗೆ ದಾರಿದೀಪವಾದ ಶ್ರಮ ಚೇತನ: ಉಮಾ ಮಹಾದೇವನ್

ಕುಂದರಗಿ ಗ್ರಾಮ ಪಂಚಾಯತಿಯ ಸ್ವಚ್ಛ ವಾಹಿನಿ ಚಾಲಕಿ ಶರೀಫಾಬಾನು ಬೂದಿಹಾಳ, ಸೂಳಿಭಾವಿ ಗ್ರಾಮದ ತ್ಯಾಜ್ಯ ನಿರ್ವಹಣೆ ಮಹಿಳಾ ಸದಸ್ಯೆ ಶ್ರೀದೇವಿ ಮಾದರ, ಕುಳಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದಾ ತೇಲಿ ಸೇರಿದಂತೆ ಇತರರು ಕಾರ್ಯಾಗಾರದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯಾಗಾರದಲ್ಲಿ ಪ್ರೊಬೇಷನರಿ ಐಎಎಸ್‌ ಅ​ಧಿಕಾರಿ ಕನಿಷ್ಕ, ಜಿ.ಪಂ ಉಪಕಾರ್ಯದರ್ಶಿ ಎನ್‌.ವೈ.ಬಸರಿಗಿಡದ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಗ್ರಾ.ಪಂ ಅಭಿವೃದ್ಧಿ ಅ​ಕಾರಿಗಳು, ಸ್ವ-ಸಹಾಯ ಸಂಘಗಳ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಸ್ವಚ್ಛ ವಾಹಿನಿಗಳಿಗೆ ಚಾಲನೆ ನೀಡಿದರು.

click me!