ಕಾಂಗ್ರೆಸ್‌ ತೊರೆದು ‘ಕಮಲ’ ಹಿಡಿದ ಮುಸ್ಲಿಂ ಯುವಕರು

Published : Mar 31, 2023, 05:32 AM IST
ಕಾಂಗ್ರೆಸ್‌ ತೊರೆದು ‘ಕಮಲ’  ಹಿಡಿದ ಮುಸ್ಲಿಂ ಯುವಕರು

ಸಾರಾಂಶ

ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳೇ ಬಿಜೆಪಿ ಪಕ್ಷಕ್ಕೆ ಶ್ರೀರಕ್ಷೆ. 2023ಕ್ಕೆ ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವು ಖಚಿತ. ಯುವ ಕಾರ್ಯಕರ್ತರ ಸೇರ್ಪಡೆಯಿಂದ ಬಿಜೆಪಿ ಪಕ್ಷಕ್ಕೆ ಮತ್ತಷ್ಟುಶಕ್ತಿ ಬಂದಿದೆ ಎಂದು ಕೊರಟಗೆರೆ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಬಿ.ಹೆಚ್‌.ಅನಿಲ್‌ಕುಮಾರ್‌ ತಿಳಿಸಿದರು.

ಕೊರಟಗೆರೆ: ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳೇ ಬಿಜೆಪಿ ಪಕ್ಷಕ್ಕೆ ಶ್ರೀರಕ್ಷೆ. 2023ಕ್ಕೆ ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವು ಖಚಿತ. ಯುವ ಕಾರ್ಯಕರ್ತರ ಸೇರ್ಪಡೆಯಿಂದ ಬಿಜೆಪಿ ಪಕ್ಷಕ್ಕೆ ಮತ್ತಷ್ಟುಶಕ್ತಿ ಬಂದಿದೆ ಎಂದು ಕೊರಟಗೆರೆ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಬಿ.ಹೆಚ್‌.ಅನಿಲ್‌ಕುಮಾರ್‌ ತಿಳಿಸಿದರು.

ಕೊರಟಗೆರೆ ತಾಲೂಕು ಹೊಳವನಹಳ್ಳಿಯ ಇಂದಿರಾ ಕಾಲೋನಿಯಲ್ಲಿ ಬಿಜೆಪಿ ಮಂಡಲದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಯುವ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ರಾಷ್ಟ್ರ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಮುಳುಗಿದೆ. ಮುಳುಗುವ ಹಡಗಿನಲ್ಲಿ ಪ್ರಯಾಣಿಕ ಸಂಚಾರ ಮಾಡಿದರೇ ಅಪಾಯ ಕಟ್ಟಿಟ್ಟಬುತ್ತಿ. ಕರ್ನಾಟಕ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ 2023ಕ್ಕೆ ಕಾಂಗ್ರೆಸ್‌ ಪಕ್ಷದ ಮುಳುಗಡೆ ಖಚಿತವಾಗಿದೆ. 125ಕ್ಕೂ ಅಧಿಕ ಜನ ಯುವ ಕಾಂಗ್ರೆಸ್‌ ಕಾರ್ಯಕರ್ತರ ಸೇರ್ಪಡೆಯಿಂದ ಬಿಜೆಪಿ ಪಕ್ಷಕ್ಕೆ ಮತ್ತಷ್ಟುಶಕ್ತಿ ಬರಲಿದೆ ಎಂದು ಹೇಳಿದರು. ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಬಿ.ಹೆಚ್‌.ಅನಿಲ್‌ಕುಮಾರ್‌ ಕೊರಟಗೆರೆ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದ್ದಾರೆ. ಕೊರಟಗೆರೆ ಕ್ಷೇತ್ರದ ಪ್ರತಿ ಹಳ್ಳಿಯ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಬೂತ್‌ಮಟ್ಟದ ಸಭೆಗಳನ್ನ ಈಗಾಗಲೇ ನಡೆಸಿದ್ದಾರೆ. ಬೂತ್‌ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮೀಣ ಮತದಾರರ ವಿಶ್ವಾಸ ಗಳಿಸಲು ಹಗಲುರಾತ್ರಿ ಎನ್ನದೇ ಬಿಜೆಪಿ ಪಕ್ಷದ ಪರವಾರ ಪ್ರಚಾರ ದಲ್ಲಿ ತೊಡಗಿದ್ದಾರೆ.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಜಿ.ವೆಂಕಟಾಚಲಯ್ಯ, ರೀಯಾಸತ್‌ ಅಲಿ, ಸಂಜೀವರೆಡ್ಡಿ, ರವಿವರ್ಮ, ದಾಸಾಲುಕುಂಟೆ ರಘು, ಆಟೋ ಗೋಪಾಲ ಕೃಷ್ಣ, ರಾಜಣ್ಣ, ನಾಗರಾಜು, ವೆಂಕಟೇಶ್‌, ಇರ್ಫಾನ್‌, ಪ್ರವೀನ್‌, ದಯಾನಂದ್‌, ಆನಂದ್‌, ಗಂಗಣ್ಣ ಸೇರಿದಂತೆ ಮುಸ್ಲಿಂ ಮುಖಂಡರು ಇದ್ದರು.

ಮುಸ್ಲೀಮರ ಮೀಸಲಾತಿಗೆ ಕೊಕ್‌, ಸಿಎಂ ಕೊನೆಯ ಕ್ಯಾಬಿನೆಟ್‌ ಸಭೆಯಲ್ಲಿ ಮಹತ್ವದ ನಿರ್ಣಯ?

JDS ಗೆ ಅಧಿಕಾರ ಖಚಿತ

ದೇವರಹಿಪ್ಪರಗಿ(ಮಾ.24): ಜೆಡಿಎಸ್‌ ಪಕ್ಷ ಜಾತ್ಯತೀತ, ಧರ್ಮಾತೀತ ತಳಹದಿ ಹೊಂದಿದ್ದು, ಪಂಚರತ್ನ ಯೋಜನೆ ಅಳವಡಿಸಿಕೊಂಡಿದೆ. ಹೀಗಾಗಿ, ಕಾಂಗ್ರೆಸ್‌, ಬಿಜೆಪಿ ಏನೇ ಆಮಿಷ ಒಡ್ಡಿದರೂ ಈ ಬಾರಿ ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಭರವಸೆ ವ್ಯಕ್ತಪಡಿಸಿದರು.

ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಸಮುದಾಯದ ಮುಖಂಡರ ಜೊತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕಿಡ್ನಿ ಕಳೆದುಕೊಂಡ ರೋಗಿಯ ಚಿಕಿತ್ಸೆಗೆ 50 ಲಕ್ಷ, ಉಚಿತ ಶಿಕ್ಷಣ, ವಿಧವೆಯರಿಗೆ 3 ಸಾವಿರ, ಹಿರಿಯ ನಾಗರಿಕರಿಗೆ 5 ಸಾವಿರ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುವುದು ಜೆಡಿಎಸ್‌ನ ಉದ್ದೇಶವಾಗಿದೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾತೇ ಇಲ್ಲ; ಜೆಡಿಎಸ್ ಶಾಸಕ ದೇವಾನಂದ ಚೌಹಾನ್ ಸ್ಪಷ್ಟನೆ

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಪ್ರಧಾನಿ ಮೋದಿ ದೇಶಕ್ಕೆ ಅಚ್ಛೇ ದಿನ್‌ ಬರುತ್ತವೆ ಎಂದು ಹೇಳಿ ಗ್ಯಾಸ್‌, ಪೆಟ್ರೊಲ್‌, ಡೀಸೆಲ್‌ ಹಾಗೂ ಜನ ಸಾಮಾನ್ಯರು ಬಳಸುವ ವಸ್ತುಗಳ ಬೆಲೆ ಏರಿಸಿದ್ದಾರೆ. ರೈತರ ಸಾಲ ಮನ್ನಾ ಮಾಡದೇ ಕಾರ್ಪೋರೇಟ್‌ ಕಂಪನಿಗಳ ಸಾಲ ಮನ್ನಾ ಮಾಡಿದ್ದಾರೆ. ಇವು ಅಚ್ಛೇದಿನ್‌ ಅಲ್ಲ ಅತ್ಯಂತ ಕೆಟ್ಟದಿನಗಳು ಎಂದು ಕುಟುಕಿದರು.

ಜೆಡಿಎಸ್‌ ಘೋಷಿತ ಅಭ್ಯರ್ಥಿ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಮಾತನಾಡಿ, ಕಳೆದ ಬಾರಿ ಚುನಾವಣೆಯಲ್ಲಿ ಅಲ್ಪ ಮತಗಳಿಂದ ನಾನು ಪರಾಭವಗೊಂಡಿದ್ದರೂ ನಿಮ್ಮ ಕಷ್ಟ-ಸುಖದಲ್ಲಿ ಭಾಗಿ ಆಗಿದ್ದೇನೆ. ಸಿ.ಎಂ.ಇಬ್ರಾಹಿಂ ಅವರು ನಮ್ಮ ಪಕ್ಷಕ್ಕೆ ಬಂದಿರುವುದರಿಂದ ಆನೆಬಲ ಬಂದಂತಾಗಿದೆ. ಬರುವ ಚುನಾವಣೆಯಲ್ಲಿ ನಿಮ್ಮ ಆಶೀರ್ವಾದದಿಂದ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಲಿ ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಮಳಖೇಡದ ಡಾ.ಮುರ್ತುಜಾ ಖಾದ್ರಿ ವಹಿಸಿದ್ದರು. ಮಾಜಿ ಶಾಸಕರಾದ ಶಹಜಹಾನ್‌ ಡೊಂಗರಗಾಂವ, ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಸಾಯಬಣ್ಣಾ ಬಾಗೇವಾಡಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಬಸೀರ್‌ ಅಹ್ಮದ್‌ ಸಿಪಾಯಿ, ಮುಖಂಡರಾದ ಅಹ್ಮದಸಾಬ್‌ ಮೋಮಿನ್‌, ಅಬ್ದುಲಗನಿ ಸಿಪಾಯಿ, ಖಾದರಸಾಬ್‌ ಸಿಪಾಯಿ, ಹುಸೇನಬಾಷಾ ಸಿಪಾಯಿ, ನಬೀಸಾಬ್‌ ದೊಡಮನಿ, ಲಾಲಸಾಬ್‌ ಉಸ್ತಾದ, ಅಲ್ಲಾಭಕ್ಷ ಸಿಪಾಯಿ, ಹುಸೇನಸಾಬ್‌ ನಾಗಾವಿ, ಬಾಬು ಉಸ್ತಾದ, ಹುಸೇನಬಾಷಾ ಬಾಣಕಾರ, ಜಾವೇದ್‌ ಬಡೆಘರ, ಬಶೀರ್‌ ಲಲ್ಲೋಟಿ, ಗ್ರಾಮದ ಪ್ರಮುಖರು, ಗಣ್ಯರು, ಯುವಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!