:ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಲೋಕಾಯಕ್ತ ಸಾರ್ವಜನಿಕ ಕುಂದು ಕೊರತೆ ಸಭೆ ಹಾಗೂ ಅಹವಾಲು ಸ್ವೀಕಾರ ಸಭೆ ಯಶಸ್ವಿಯಾಗಿ ನಡೆಸಲಾಯಿತು.
ಕೊರಟಗೆರೆ : :ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಲೋಕಾಯಕ್ತ ಸಾರ್ವಜನಿಕ ಕುಂದು ಕೊರತೆ ಸಭೆ ಹಾಗೂ ಅಹವಾಲು ಸ್ವೀಕಾರ ಸಭೆ ಯಶಸ್ವಿಯಾಗಿ ನಡೆಸಲಾಯಿತು.
ಸಭೆಯಲ್ಲಿ ಸಾರ್ವಜನಿಕರು ಮತ್ತು ರೈತರು ಸುಮಾರು 15 ಅರ್ಜಿಗಳನ್ನು ಸಲ್ಲಿಸಿದರು. ಅದರಲ್ಲಿ 8 ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಸಂಬಂಧ ಪಟ್ಟಅಧಿಕಾರಿಗಳ ಸಮ್ಮುಖದಲ್ಲಿ ಇತ್ಯರ್ಥ ಮಾಡ ಲಾಯಿತು. ಉಳಿದ 7 ಅರ್ಜಿಗಳನ್ನು ಸಂಬಂಧ ಪಟ್ಟಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಶೀಘ್ರವೇ ಸಮಸ್ಯೆಯನ್ನು ಬಗೆಹರಿಸಲು ಲೋಕಾಯುಕ್ತ ಎಸ್‌ಪಿ ವಾಲಿ ಬಾಷಾ ನಿರ್ದೇಶನ ನೀಡಿದರು.
ಗ್ರಾಮ ಪಂಚಾಯಿತಿಗಳ ಮತ್ತು ಹಲವು ಇಲಾಖೆಗಳಲ್ಲಿ ರೈತರ ಕೆಲಸ ಕಾರ್ಯಗಳಾಗದೆ ಪ್ರತಿನಿತ್ಯ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಖ್ಯವಾಗಿ ತಾಲ್ಲೂಕು ಕಚೇರಿಯಲ್ಲಿ ಬಗರ್‌ಹುಕುಂ ಸಾಗುವಳಿ ಜಮೀನಿನ ವಿಚಾರವಾಗಿ ಸಾಗುವಳಿ ಮಂಜೂರಾಗಿದ್ದರೂ ಕೂಡ ಖಾತೆ-ಪಹಣಿ ಮಾಡಲು ಅಧಿಕಾರಿಗಳು ಲಂಚವನ್ನು ಕೇಳುತ್ತಿದ್ದಾರೆ ಎಂಬ ಆರೋಪವನ್ನು ರೈತ ಸಂಘದ ಮುಖಂಡರು ಸಭೆಯಲ್ಲಿ ಲೋಕಾಯಕ್ತ ಅಧಿಕಾರಿಗಳ ಗಮನಕ್ಕೆ ತಂದ ಘಟನೆ ನಡೆಯಿತು.
ಕರ್ನಾಟಕ ರಣಧೀರರ ವೇದಿಕೆಯ ತಾಲೂಕು ಅಧ್ಯಕ್ಷರಾದ ಮಂಜುಸ್ವಾಮಿ ಎಂ.ಎನ್. ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಕೆ.ಎನ್.ದೇವರಾಜ್‌ರವರು ಕೊರಟಗೆರೆ ಪಟ್ಟಣದ ಸಾರ್ವಜನಿಕ ಶೌಚಾಲಯಗಳಲ್ಲಿನ ಸ್ವಚ್ಛತೆ ಬಗ್ಗೆ ದೂರು ಅರ್ಜಿ ಸಲ್ಲಿಸಿದ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕ ಶೌಚಾಲಯವನ್ನು ಗಮನಿಸಿ ಪಟ್ಟಣ ಪಂಚಾಯಿತಿಯ ಆರೋಗ್ಯ ಅಧಿಕಾರಿಗೆ ಒಂದು ವಾರದ ಒಳಗಾಗಿ ತಾಲೂಕಿನ ಎಲ್ಲಾ ಸಾರ್ವಜನಿಕ ಶೌಚಾಲಯಗಳು ನೀರಿನ ವ್ಯವಸ್ಥೆಯೊಂದಿಗೆ ಪುನರಾರಂಭವಾಗಬೇಕೆಂದು ಖಡಕ್ ಎಚ್ಚರಿಕೆಯ ಸಂದೇಶವನ್ನು ನೀಡಿದರು.
ಒಂದು ವಾರದ ಒಳಗಾಗಿ ಸಾರ್ವಜನಿಕ ಶೌಚಾಲಯಗಳು ಪುನರ್ ಆರಂಭವಾಗದಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಪತ್ರಕರ್ತರ ಸಮ್ಮುಖದಲ್ಲಿ ತಿಳಿಸಿದರು.
ನಂತರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹಾಜರಾತಿ ಪುಸ್ತಕ ಶಿಕ್ಷಕರ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿ ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಜಿಲ್ಲಾ ಮುಖ್ಯ ಅಧೀಕ್ಷಕರಾದ ವಾಲಿ ಬಾಷಾ, ಮಂಜುನಾಥ್, ಮತ್ತು ಲೋಕಾಯುಕ್ತ ಅಧಿಕಾರಿಗಳು ಹಾಗೂ ಗ್ರೇಡ್ 2 ತಹಶೀಲ್ದಾರ್ ನರಸಿಂಹಮೂರ್ತಿ, ಇಓ ದೊಡ್ಡ ಸಿದ್ದಯ್ಯ ಹಾಗೂ ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮತ್ತು ರೈತರು ಹಾಜರಿದ್ದರು.
ಹವಾಮಾನ ವೈಪರೀತ್ಯ _ ಇಳುವರೀ ಕುಂಠಿತ
ಕಾರ್ಕಳ (ಮಾ.30) : ಕರಾವಳಿಯಲ್ಲಿ ನಿತ್ಯ ಬಿಸಿಲು ಏರಿಕೆ ಕಾಣುತಿದ್ದು , ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಸರಿಯಾಗಿ ಫಸಲು ಸಿಗದೆ ಇಳುವರಿ ಕುಂಠಿತಗೊಂಡು ನಿರಾಶರಾಗಿದ್ದಾರೆ. ಕರಾವಳಿ ಭಾಗದಲ್ಲಿ ಮಾವು, ಹಲಸು ಹಾಗೂ ಗೇರು ಹಣ್ಣಿನಿಂದ ಅದಾಯ ಪಡೆಯುತ್ತಿದ್ದ ರೈತರು ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಫಸಲು ಬರದೆ ನಷ್ಟಅನುಭವಿಸಿದ್ದಾರೆ.
ಕೈಕೊಟ್ಟಹವಾಮಾನ: ತೋಟಗಾರಿಕಾ ಬೆಳೆಗಳ ಜೊತೆಗೆ ಮಾವು, ಗೇರು, ಹಲಸು ಬೆಳೆಸುವುದು ವಾಡಿಕೆ. ಆದರೆ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚುತಿದ್ದು ಹವಾಮಾನ ಬದಲಾವಣೆಯಿಂದಾಗಿ ಇಳುವರಿ ಕುಸಿತವಾಗಿದೆ. ಅಕ್ಟೋಬರ್, ಡಿಸೆಂಬರ್ ಜನವರಿ ತಿಂಗಳಲ್ಲಿ ಎಲೆ ಚಿಗುರಿ ಹೂ ಬಿಡುವ ಕಾಲವಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಚಳಿ ಇರದೆ ಬಿಸಿಯೇ ಹೆಚ್ಚಾಗಿದ್ದ ಹೂ ಸಂಪೂರ್ಣ ಸುಟ್ಟು ಹೋಗಿದೆ. ನಿತ್ಯ 36- 38 ಡಿಗ್ರಿವರೆಗೂ ತಾಪಮಾನ ಇರುವುದರಿಂದ ಹೂಗಳು ಸಂಪೂರ್ಣ ಸುಟ್ಟು ಹೋಗಿ ಫಸಲು ಕೈಕೊಟ್ಟಿದೆ.
ಕರ್ನಾಟಕದಲ್ಲಿ ಮುಂದಿನ 4 ದಿನ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆ
ಅಲ್ಪ ಸ್ವಲ್ಪ ಫಸಲಿಗೂ ಬೆಲೆ ಇಲ್ಲ: ಕಾರ್ಕಳ ತಾಲೂಕಿನಲ್ಲಿ ಸುಮಾರು 100 ಹೆಕ್ಟೇರ್‌ನಲ್ಲಿ ಮಾವು ಹಾಗೂ 1020 ಹೆಕ್ಟೇರ್ ಗೇರು ಬೆಳೆ ಬೆಳೆಯಲಾಗುತ್ತಿದೆ. ಇದರಲ್ಲಿ ಗೇರು ಇಳುವರಿ ಇದ್ದರೂ ಅದಕ್ಕೆ ಸರಿಯಾಗಿ ಬೆಲೆ ಸಿಗದೆ ಬೆಳಗಾರರು ನಷ್ಟಅನುಭವಿಸುತ್ತಿದ್ದಾರೆ. ಗೇರಿಗೆ ಕೆ.ಜಿ.ಗೆ 110 ರು. ನಿಗದಿಯಾಗಿದ್ದರೂ, ಕಳೆದ ತಿಂಗಳು ಸುರಿದ ಅಕಾಲಿಕ ಮಳೆಗೆ ದರ ಕುಸಿತ ಕಂಡಿದ್ದು, ಕೆಜಿಗೆ 95 ರುಪಾಯಿ ಆಗಿದೆ.
ಮಾವಿನ ಮಿಡಿಗೆ ಭಾರಿ ಡಿಮಾಂಡ್: ಕೆಲವು ಪ್ರದೇಶಗಳಲ್ಲಿ ಮಾವಿನ ಮಿಡಿಗಳು ದೊರೆಯುತ್ತಿದ್ದು, 100 ಮಿಡಿಗಳಿಗೆ ತಲಾ 800 ರು.ಗಳಂತೆ ಮಾರಾಟ ಮಾಡಲಾಗುತ್ತಿದೆ. ಮದುವೆ, ಮುಂಜಿ ನೇಮೋತ್ಸವ ಸಮಾರಂಭಗಳಲ್ಲಿ ಹಲಸಿನ ಹಣ್ಣಿಗೆ ಬೇಡಿಕೆ ಬರುತಿದ್ದು ಗಾತ್ರಕ್ಕೆ ಅನುಗುಣವಾಗಿ ಬೆಲೆ ನಿರ್ಧರಿತವಾಗುತ್ತಿದೆ. ಸಣ್ಣ ಗಾತ್ರದ ಹಲಸಿಗೆ 30 ರುಪಾಯಿ ಆದರೆ ದೊಡ್ಡ ಗಾತ್ರದ ಹಲಲು ಒಂದಕ್ಕೆ 100 ರುಪಾಯಿವರೆಗೂ ಮಾರಾಟವಾಗುತ್ತಿದೆ.