ಪೌರತ್ವ ಕಾಯ್ದೆ: ಗಲಭೆಗೆ ಜಲ್ಲಿಕಲ್ಲು ಶೇಖರಿಸಿಟ್ಟವರ ಬಂಧನ..!

By Suvarna NewsFirst Published Jan 9, 2020, 10:33 AM IST
Highlights

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು ಗೊತ್ತೇ ಇದೆ. ಕೋಲಾರದಲ್ಲಿ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಸಿಎಎ ಬೆಂಬಲ ಸಮಾವೇಶದಲ್ಲಿಯೋ ಲಾಠಿ ಚಾರ್ಜ್ ನಡೆದಿತ್ತು. ಈ ಘಟನೆಯಲ್ಲಿ ಕಲ್ಲು ತೂರಾಟ ನಡೆಸಲು ಜಲ್ಲಿಕಲ್ಲು ಸಂಗ್ರಹಿಸಿದ ಇಬ್ಬರು ಯುವಕರನ್ನು ಬಂಧಿಸಲಾಗಿದೆ.

ಕೋಲಾರ(ಜ.09): ಕೋಲಾರದಲ್ಲಿ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಸಿಎಎ ಬೆಂಬಲ ಸಮಾವೇಶದಲ್ಲಿ ಲಾಠಿ ಚಾರ್ಜ್ ನಡೆದಿತ್ತು. ಈ ಘಟನೆಯಲ್ಲಿ ಕಲ್ಲು ತೂರಾಟ ನಡೆಸಲು ಜಲ್ಲಿಕಲ್ಲು ಸಂಗ್ರಹಿಸಿದ ಇಬ್ಬರು ಯುವಕರನ್ನು ಬಂಧಿಸಲಾಗಿದೆ.

ಕೋಲಾರದಲ್ಲಿ ಗಲಭೆಗೆ ಜಲ್ಲಿ ಕಲ್ಲು ಶೇಖರಿಸಿಟ್ಟಿದ್ದ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸುವ ಸಭೆ ದಿನ ಕಲ್ಲು ತೂರಾಟ ನಡೆಸಲು ಜಲ್ಲಿಕಲ್ಲು ಶೇಖರಣೆ ಮಾಡಲು ಯತ್ನಿಸಿರುವ ಆರೋಪದಲ್ಲಿ ಕೋಲಾರ ನಗರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಲಾಗಿದೆ.

ಕೋಲಾರದಲ್ಲಿ ಲಾಠಿ ಚಾರ್ಜ್: ಏನಂದ್ರು ಐಜಿಪಿ..?

ಕೋಲಾರ ನಗರದ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಲಾಗಿದ್ದು, ಇನ್ನುಳಿದ ಮೂವರು ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕೋಲಾರದಲ್ಲಿ ಜ.4 ರಂದು ಭಾರತೀಯ ಹಿತರಕ್ಷಣಾ ವೇದಿಕೆ ಸಭೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಕಲ್ಲು ತೂರಾಟ ನಡೆಸಿ ಗಲಭೆ ಎಬ್ಬಿಸಲು ಸಂಚು ರೂಪಿಸಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.

ಜ.3 ರಂದು ಕೋಲಾರದ ರೈಲ್ವೆ ಹಳಿಗಳ ಬಳಿ ಐವರು ಚೀಲಗಳಲ್ಲಿ ಶೇಖರಣೆ ಮಾಡಿ ಗಾಡಿಗಳಿಗೆ ತುಂಬಿಸುತ್ತಿದ್ದರು. ಬಂಧಿತರಿಂದ ಪಲ್ಸರ್ ಗಾಡಿ, ಗೋಣಿ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ.

ಕೋಲಾರದಲ್ಲಿ ಲಾಠಿ ಚಾರ್ಜ್: ಏನಂದ್ರು ಐಜಿಪಿ..?

ಬಿಜೆಪಿ ಬೆಂಬಲಿಗರು ಜ.4 ರಂದು ಕೋಲಾರದ ಕ್ಲಾಕ್ ಟವರ್ ಪ್ರದೇಶಕ್ಕೆ ನುಗ್ಗಲು ಯತ್ನಿಸಿದಾಗ ಲಾಠಿ ಚಾರ್ಜ್ ಆಗಿತ್ತು. ಕೋಲಾರ ಸಂಸದ ಮುನಿಸ್ವಾಮಿ ಸೇರಿ 18 ಮಂದಿ ವಿರುದ್ಧ ಪ್ರಕರಣ ಕೂಡಾ ದಾಖಲಾಗಿದೆ.

tags
click me!