'ಮುಸ್ಲಿಮರ ವೋಟು ಬೇಡ' ಎಂಬ ಕೆಲವರ ತೆವಲಿಗೆ 30% ವೋಟುಗಳೂ ಹೋದ್ವು: ಛಲವಾದಿ

By Kannadaprabha NewsFirst Published Aug 15, 2023, 6:09 AM IST
Highlights

 ಹಿಂದೂಗಳು ಓಟ್‌ ಹಾಕಿದರೆ ಸಾಕು ಗೆದ್ದು ಬಿಡುತ್ತೇವೆ, ಮುಸ್ಲಿಂ ಓಟುಗಳು ನಮಗೆ ಬೇಡ ಎಂದು ತೆವಲಿಗೆ ಕೆಲವರು ಹೇಳಿಕೆಯಿಂದಲೇ ಬಿಜೆಪಿಗೆ ಮುಸ್ಲಿಮರ ಓಟುಗಳು ದೂರ ಆದವು ಎಂದು ವಿಧಾನ ಪರಿಷತ್‌ ಸದಸ್ಯ, ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಸ್ವಪಕ್ಷೀಯರ ವಿರುದ್ಧ ಗುಡುಗು ಹಾಕಿದ್ದಾರೆ.

ಯಾದಗಿರಿ: ಹಿಂದೂಗಳು ಓಟ್‌ ಹಾಕಿದರೆ ಸಾಕು ಗೆದ್ದು ಬಿಡುತ್ತೇವೆ, ಮುಸ್ಲಿಂ ಓಟುಗಳು ನಮಗೆ ಬೇಡ ಎಂದು ತೆವಲಿಗೆ ಕೆಲವರು ಹೇಳಿಕೆಯಿಂದಲೇ ಬಿಜೆಪಿಗೆ ಮುಸ್ಲಿಮರ ಓಟುಗಳು ದೂರ ಆದವು ಎಂದು ವಿಧಾನ ಪರಿಷತ್‌ ಸದಸ್ಯ, ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಸ್ವಪಕ್ಷೀಯರ ವಿರುದ್ಧ ಗುಡುಗು ಹಾಕಿದ್ದಾರೆ.

ಯಾದಗಿರಿಯಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ನಮ್ಮವರೇ (ಬಿಜೆಪಿ) ಕೆಲವರು ಮುಸ್ಲಿಂ ಓಟ್‌ ಬೇಡ, ಹಿಂದೂಗಳು ಓಟ ಹಾಕಿದರೆ ಸಾಕು ಗೆದ್ದು ಬಿಡುತ್ತೇವೆ ಅಂತ ತಮ್ಮ ತೆವಲಿಗೆ ಹೇಳಿ ಬಿಡುತ್ತಾರೆ. ಆದರೆ, ಅವರ ಮಾತುಗಳು ಇಲ್ಲಿ ನಮಗೆ ಅನುಭವಿಸುವಂತೆ ಆಗುತ್ತವೆ. ನಾವು ಒಂದು ಸಮುದಾಯವನ್ನ ಹೊರಗಿಟ್ಟು ರಾಜಕಾರಣ ಮಾಡಲು ಬರುವುದಿಲ್ಲ ಎಂದ ಛಲವಾದಿ ನಾರಾಯಣಸ್ವಾಮಿ,

ಸಿದ್ದರಾಮಯ್ಯ ದಲಿತ ವಿರೋಧಿ ಸಿಎಂ: ಛಲವಾದಿ ನಾರಾಯಣಸ್ವಾಮಿ

 

ಇಂತಹ ಹೇಳಿಕೆಗಳಿಂದಾಗಿ ನಮಗೆ ಬರುತ್ತಿದ್ದ ಮುಸ್ಲಿಂ ಸಮುದಾಯದ ಶೇ.30 ರಷ್ಟುಮತಗಳೂ ತಪ್ಪಿದಂತಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಮುಸ್ಲಿಂರ ಮತಗಳು ನಮಗೆ ಬೇಡ ಎಂದು ವಿಜಯಪುರ ಶಾಸಕ ಯತ್ನಾಳ್‌ ಹಾಗೂ ಮಾಜಿ ಸಚಿವ ಈಶ್ವರಪ್ಪ ಅವರ ಹೇಳಿಕೆಗಳಿಗೆ ನಾರಾಯಣಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದಂತಿತ್ತು.

click me!