ದೇಶವು ಸ್ವಾತಂತ್ರ್ಯ ಪಡೆಯಲು ಸಾವಿರಾರು ದೇಶ ಭಕ್ತರ ಬಲಿದಾನವಾಗಿದ್ದು ಆದರೆ ಸ್ವಾತಂತ್ರ ನಂತರ ಆಳಿದ ನಾಯಕರು ಭಾರತ ಮಾತೆಯ ಸೀಳಿ ಭಾಗಗಳಾಗಿ ಮಾಡಿ ಆಳುವಂತಾಗಿದ್ದು, ಹಿಂದು ದೇಶ ಭಾರತ ಮತ್ತೆ ಒಗ್ಗೂಡಿಸುವುದೇ ನಮ್ಮ ಗುರಿ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಹೇಳಿದರು.
ಚನ್ನಗಿರಿ (ಆ.15) : ದೇಶವು ಸ್ವಾತಂತ್ರ್ಯ ಪಡೆಯಲು ಸಾವಿರಾರು ದೇಶ ಭಕ್ತರ ಬಲಿದಾನವಾಗಿದ್ದು ಆದರೆ ಸ್ವಾತಂತ್ರ ನಂತರ ಆಳಿದ ನಾಯಕರು ಭಾರತ ಮಾತೆಯ ಸೀಳಿ ಭಾಗಗಳಾಗಿ ಮಾಡಿ ಆಳುವಂತಾಗಿದ್ದು, ಹಿಂದು ದೇಶ ಭಾರತ ಮತ್ತೆ ಒಗ್ಗೂಡಿಸುವುದೇ ನಮ್ಮ ಗುರಿ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ್ ಹೇಳಿದರು.
ಸೋಮವಾರ ಸಂಜೆ ಪಟ್ಟಣದ ಊರಬಾಗಿಲ ಹನುಮಂತ ದೇವರ ದೇವಾಲಯದ ಆವರಣದಲ್ಲಿ ವಿಶ್ವ ಹಿಂದು ಪರಿಷತ್(VHP) ಮತ್ತು ಬಜರಂಗದಳ(Bajrangadal) ವತಿಯಿಂದ ಹಮ್ಮಿಕೊಂಡಿದ್ದ ಅಖಂಡ ಭಾರತ ಸಂಕಲ್ಪ(Akhanda bharat sankalpa) ದಿನ ಪ್ರಯುಕ್ತ ನಡೆಸಿದ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ ಬ್ರಿಟಿಷರ ಒಡೆದು ಆಳುವ ನೀತಿಯಿಂದ ಅಖಂಡವಾಗಿದ್ದ ಭಾರತವು ಪಾಕಿಸ್ತಾನ, ಬಾಂಗ್ಲಾದೇಶ ಮೊದಲಾದ ಭಾರತದ ಭೂ ಭಾಗಗಳ ತುಂಡರಿಸಿದ ಬ್ರಿಟಿಷರು ಅಖಂಡ ಭಾರತದಲ್ಲಿ ಸಹೋದರರಂತೆ ಜೀವಿಸುತ್ತಿದ್ದವರ ದಾಯಾದಿಗಳಾಗಿ ಮಾಡಿರುವುದು ವಿಷಾದನೀಯ ಎಂದರು.
ವಿಜಯಪುರ: ಸ್ವಾತಂತ್ರ್ಯ ಹೋರಾಟಗಾರನಿಗೆ ಗೋಲ್ಡನ್ ಟೆಂಪಲ್!
ಬಜರಂಗದಳದ ರವಿಚಂದ್ರ ಮಾತನಾಡಿ ಹಿಂದು ಧರ್ಮಿಯರ ಮೇಲೆ ಅನ್ಯಧರ್ಮಿಯರ ದಬ್ಬಾಳಿಕೆ ಮತ್ತು ದೌರ್ಜನ್ಯಗಳು ಹೆಚ್ಚಾಗಿದ್ದು ಪ್ರಸ್ತುತ ರಾಜ್ಯ ಸರ್ಕಾರ ತನ್ನ ರಾಜಕೀಯ ಹಿತಾಸಕ್ತಿಗಾಗಿ ಒಂದು ಧರ್ಮದ ಜನರನ್ನೇ ವೋಲೈಸುತ್ತಿರುವುದು ಸರಿಯಲ್ಲ. ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆಗಳ ವಾಪಸ್ ಪಡೆಯುತ್ತೇವೆ ಎಂದು ಹೇಳುತ್ತಿರುವುದು ಖಂಡನೀಯ ಎಂದರು.
ಪಂಜಿನ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಖಂಡ ಭಾರತ ಸಂಕಲ್ಪ ದಿವಸ್ ಘೋಷಣೆಗಳ ಕೂಗಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ವಿಎಚ್‌ಪಿ, ಬಜರಂಗದಳ ಪ್ರಮುಖರಾದ ಕೆ.ಆರ್.ಗೋಪಿ, ಹನುಮಂತ್ ಮಡಿವಾಳ್, ಶ್ರೀನಿವಾಸ್,ರಂಗನಾಥ್, ಅಂಕಿತ್, ಹೇಮಚಂದು, ರಾಕೇಶ್, ಲೋಹಿತ್, ಸತೀಶ್, ಮೂರ್ತಿ, ವೇದಮೂರ್ತಿ, ಮಧು ಸೇರಿ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ಸ್ವಾತಂತ್ರ್ಯೋತ್ಸವ: ಯಲಹಂಕದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ರಾಜೀವ್ ಚಂದ್ರಶೇಖರ್ ಚಾಲನೆ