ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್
ಉಡುಪಿ(ಮಾ.25): ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರ ಮತ್ತು ಶಕ್ತಿ ಪೀಠಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕಾ ದೇವಾಲಯದ (Kolluru Sri Mookambika Temple) ಜಾತ್ರಾ ಮಹೋತ್ಸವದಲ್ಲಿ ಕೂಡ ಅನ್ಯಕೋಮಿನ ವ್ಯಾಪಾರಿಗಳ ವಹಿವಾಟಿಗೆ ಬ್ರೇಕ್ ಬಿದ್ದಿದೆ. ಇದು 20 ಸಾವಿರಕ್ಕೂ ಅಧಿಕ ಭಕ್ತರು ಸೇರುವ ಜಾತ್ರೆಯಾಗಿದ್ದು ಮುಸ್ಲೀಂ ವ್ಯಾಪಾರಿಗಳನ್ನು ನಿರ್ಬಂಧಿಸುವಂತೆ (Muslim Traders Boycott) ಹಿಂದೂ ಸಂಘಟನೆಗಳು (Hindu organisation) ಕೊಲ್ಲೂರು (Kolluru) ಪಂಚಾಯತ್ ಗೆ ಮನವಿ ಸಲ್ಲಿಸಿತ್ತು. ದೇವಿಯ ಜಾತ್ರೆಯ ಸಂದರ್ಭದಲ್ಲಿ ಸಂಘರ್ಷಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಪಂಚಾಯತ್ ಆಡಳಿತ, ವ್ಯಾಪಾರ ನಡೆಸಲು ಅವಕಾಶ ಕೇಳಿಬಂದವರನ್ನು ತಿಳಿಹೇಳಿ ವಾಪಾಸು ಕಳುಹಿಸಿದೆ.
ಹೌದು, ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಕೊಲ್ಲೂರು ಕ್ಷೇತ್ರಕ್ಕೂ ಆರ್ಥಿಕ ಬಹಿಷ್ಕಾರದ ಬಿಸಿತಟ್ಟಿದೆ.ಕಾಪು ಮಾರಿಯಮ್ಮ ದೇವಾಲಯ ದಲ್ಲಿ ಅನ್ಯ ಕೋಮಿನ ವ್ಯಾಪಾರಿಗಳಿಗೆ ವ್ಯಾಪಾರ ಕ್ಕೆ ನಿರ್ಬಂಧ ಹಾಕಾಲಾಗಿತ್ತು. ಆ ನಂತರದಲ್ಲಿ ಉಡುಪಿಯ ಬ್ರಹ್ಮಾವರ ತಾಲೂಕಿನ ಯಡ್ತಾಡಿ ನಂದಿಕೇಶ್ವರ ದೇವಸ್ಥಾನದಲ್ಲೂ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿತ್ತು. ಇಂದು ನಡದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದ ಜಾತ್ರಾ ಉತ್ಸವದಲ್ಲಿ ಅನ್ಯಕೋಮಿನ ವ್ಯಾಪಾರಿ ಗಳಿಗೆ ಅವಕಾಶ ನೀಡಬಾರದು ಎಂದು ಹಿಂದೂ ಸಂಘಟನೆ ಗಳು ಪಂಚಾಯತ್ ಗೆ ಮನವಿ ನೀಡಿದ್ದವು. ಇಷ್ಟು ವರ್ಷಗಳ ಕಾಲ ಹತ್ತಾರು ಮುಸ್ಲೀಂ ವ್ಯಾಪಾರಿಗಳು ಕೊಲ್ಲೂರು ಜಾತ್ರೆಯಲ್ಲಿ ಭಾಗವಹಿಸುತ್ತಿದ್ದು , ಈ ಬಾರಿ ಒಬ್ಬೇಒಬ್ಬ ವ್ಯಾಪಾರಿಗೂ ಅವಕಾಶ ಸಿಕ್ಕಿಲ್ಲ.
MANDYA: ಸರ್ಕಾರಿ ಸ್ಮಶಾನ ಮುಸ್ಲಿಂರ ಮಕಾನ್ ಆಗಿ ಖಾತೆ ಬದಲಾವಣೆ, ಗ್ರಾಮಸ್ಥರಿಂದ ವಿರೋಧ
ಕಳೆದ ಎಂಟು ದಿನಗಳಿಂದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಇಂದು ವಿಜ್ರಂಭಣೆಯಿಂದ ರಥೋತ್ಸವ ನಡೆಯಿತು. 20 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ರು. ಕೇರಳ ,ತಮಿಳುನಾಡಿನಿಂದಲೂ ಅತೀ ಹೆಚ್ಚು ಸಂಖ್ಯೆಯ ಭಕ್ತರು ಆಗಮಿಸಿದ್ರು . ಇಂತಹ ಸಂದರ್ಭದಲ್ಲಿ ಅನ್ಯಕೋಮಿನ ವ್ಯಕ್ತಿ ಗಳಿ ಅವಕಾಶ ನೀಡದಂತೆ ಹಿಂದು ಸಂಘಟನೆ ಗಳು ಮಾಡಿದ್ದ ಮನವಿಗೆ ಸ್ಪಂದಿಸಿದ ಕೊಲ್ಲೂರು ಪಂಚಾಯತ್ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಿತ್ತು.
ಉತ್ಸವ ಸಂಧರ್ಭದಲ್ಲಿ ಸಂಘರ್ಷಕ್ಕೆ ಕಾರಣ ಅಗಬಾರದು ಎಂದು ವ್ಯಾಪಾರ ಕ್ಕೆ ಪರವಾನಿಗೆ ನಿರಾಕರಿಸಿತ್ತು. ವ್ಯಾಪಾರ ನಡೆಸಲು ಅವಕಾಶ ಕೇಳಿ ಬಂದ ವ್ಯಾಪಾರಿಗಳನ್ನು ಮನವೊಲಿಸಿ ವಾಪಸ್ ಕಳಿಸಲಾಗಿತ್ತು. ಸರ್ಕಾರದಿಂದ ಯಾವುದೇ ಅದೇಶ ಬಂದಿಲ್ಲ. ಅದ್ರೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆದೇಶದಂತೆ ವ್ಯಾಪಾರಕ್ಕೆ ಅವಕಾಶ ನೀಡಿಲ್ಲ ಎಂದು ಪಂಚಾಯತ್ ಅಧ್ಯಕ್ಷರು ಹೇಳಿದ್ದಾರೆ. ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಹಿಂದೂ ಸಂಘಟನೆ ಗಳ ಮನವಿಗೆ ಬೆಂಬಲ ವ್ಯಕ್ತಪಡಿಸಿದೆ. ಅದ್ರೆ ವ್ಯಾಪಾರ ಪರವಾನಿಗೆ ನೀಡುವ ಅಧಿಕಾರ ಪಂಚಾಯತ್ ಅಧಿಕಾರ ವ್ಯಾಪ್ತಿ ಸೇರಿದ್ದು. ಕ್ಷೇತ್ರದ ಗೌರವ ಚ್ಯುತಿಯಾಗದಂತೆ. ಸಂಘರ್ಷವಿಲ್ಲದೆ ದೇವಿಯ ರಥೋತ್ಸವ ನಡೆಯಬೇಕು ಎಂಬುದು ನಮ್ಮ ಅಭಿಲಾಷೆಯಾಗಿದೆ ಎಂದು ಕೊಲ್ಲೂರು ವ್ಯವಸ್ಥಾಪನ ಮಂಡಳಿ ಅಭಿಪ್ರಾಯ ವ್ಯಕ್ತಡಿಸಿದೆ.
ಮಠಾಧೀಶರ ಉಡುಪಿನ ಬಗ್ಗೆ ಮಾತನಾಡಿ ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ
ದೇವಸ್ಥಾನದ ಆವರಣದಲ್ಲಿ ಹಾಕಿದ್ದ ಎಲ್ಲಾ ಮಳಿಗೆಗಳಿಗೂ ಕೇಸರಿ ದ್ವಜ ಕಟ್ಟಲಾಗಿತ್ತು. ಒಟ್ಟಿನಲ್ಲಿ ಹಿಜಾಬ್ ವಿವಾದ ದಿನೇ ದಿನೇ ಹೊಸ ರೂಪ ಪಡೆಯುತ್ತಿದ್ದು ,ಕೊರ್ಟ್ ಆದೇಶಕ್ಕೆ ಪ್ರತಿಯಾಗಿ ನಡೆದ ಪ್ರತಿಭಟನೆ ವಿರೋಧಿಸಿ ಕರವಾಳಿಯ ಹಲವು ದೇವಾಲಯ ಗಳಲ್ಲಿ ಅನ್ಯಕೋಮುನ ವ್ಯಾಪಾರಿ ಗಳಿಗೆ ನಿರ್ಬಂಧ ನಡೆಯುತ್ತಿದೆ. ವ್ಯಾಪಾರಿಗಳಿಗೆ ಆರ್ಥಿಕ ನಿರ್ಬಂಧ ಮೂಲಕ ಬಿಸಿ ಮುಟ್ಟಿಸುವ ಪ್ರಯತ್ನಕ್ಕೆ ಹಿಂದೂ ಸಂಘಟನೆಗಳು ಕೈ ಹಾಕಿದ್ದು. ಈ ಬೆಳವಣಿಗೆ ಮುಂದೆ ಯಾವ ರೂಪ ಪಡೆಯತ್ತೋ ಕಾದುನೋಡಬೇಕಿದೆ.