* ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿಗಳ ಮೇಲೆ ಮೇಲ್ಛಾವಣಿ ಕುಸಿತ
* ಒಂದಿಲ್ಲೊಂದು ವಿವಾದ ಅಕ್ರಮಗಳಿಂದಲೇ ಸುದ್ದಿಯಾಗೋ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ..
* ಶಿಥಿಲಾವಸ್ಥೆ ಗೊಂಡಿದ್ದರೂ ಕಣ್ಮುಚ್ಚಿ ಕುಳಿತಿದ್ದ ಅಧಿಕಾರಿಗಳು
* ಕೂದಲೆಳೆ ಅಂತರದಲ್ಲಿ ಸಿಬ್ಬಂದಿ ಪಾರು
ಚಿತ್ರದುರ್ಗ(ಮಾ. 25) ಒಂದಿಲ್ಲೊಂದು ವಿವಾದ, ಅಕ್ರಮಗಳಿಂದ ಪದೇ ಪದೇ ಸುದ್ದಿಯಾಗೋ ಜಿಲ್ಲಾಸ್ಪತ್ರೆ (Chitradurga Hospital)ಇದೀಗ ಮತ್ತೊಂದು ವಿಚಾರಕ್ಕೆ ಆಸ್ಪತ್ರೆ ಮುನ್ನೆಲೆಗೆ ಬಂದಿದೆ. ಅಧಿಕಾರಿಗಳ ಯಡವಟ್ಟೋ ಇಲ್ಲ ನಿರ್ಲಕ್ಷವೋ ಗೊತ್ತಿಲ್ಲ ಸ್ವಲ್ಪದರಲ್ಲೇ ಬಡ ಜೀವಗಳು ಪಾರಾಗಿವೆ. ಅಷ್ಟಕ್ಕೂ ಆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದಾದ್ರು ಏನು..?
ಇದ್ದಕ್ಕಿದ್ದಂತೆ ಕುಸಿದು ಕಚೇರಿಯಲ್ಲಿ ಬಿದ್ದಿರೋ ಕಟ್ಟಡದ ಮೇಲ್ಛಾವಣಿ.. ಅವಸರ ಅವಸರದಲ್ಲಿ ಮೇಲ್ಚಾವಣಿಯ ಅವಶೇಷಗಳನ್ನು ಸ್ವಚ್ಛಗೊಳಿಸುತ್ತಿರೋ ಸಿಬ್ಬಂದಿಗಳು. ಮತ್ತೊಂದು ಕಡೆ ಗಾಯಗೊಂಡು ಕೂದಲೆಳೆ ಅಂತರದಲ್ಲಿ ಪಾರಾಗಿರಿರೋ ಮಹಿಳಾ ನರ್ಸ್ ಗಳು.ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗ ನಗರದ ಸರ್ಕಾರಿ ಜಿಲ್ಲಾಸ್ಪತ್ರೆ.
undefined
ಒಂದಿಲ್ಲೊಂದು ವಿವಾದ ಅಕ್ರಮಗಳಿಂದಲೇ ಪದೇಪದೇ ಸುದ್ದಿಯಾಗುತ್ತಿದ್ದ ಈ ಸರ್ಕಾರಿ ಆಸ್ಪತ್ರೆ ಇದೀಗ ಅಧಿಕಾರಿಗಳ ನಿರ್ಲಕ್ಷಕ್ಕೆ ಮತ್ತೆ ಸುದ್ದಿಯಾಗುತ್ತಿದೆ. ಕಳೆದ ಆರು ದಿನಗಳ ಹಿಂದೆ ಆಸ್ಪತ್ರೆಯ ಜನನ ಮರಣ ವಿಭಾಗದ ಕೊಠಡಿಯಲ್ಲಿ ಊಟ ಮಾಡಲು ಕುಳಿತಿದ್ದ ಐವರು ನರ್ಸ್ ಗಳ ಏಕಾಏಕಿ ಮೇಲ್ಚಾವಣಿ ಕುಸಿದು ಬಿದ್ದಿದೆ. ಪರಿಣಾಮ ಅವಶೇಷಗಳ ಹೊಡತಕ್ಕೆ ಓರ್ವ ಗಂಭೀರವಾಗಿ ಗಾಯಗೊಂಡ್ರೆ, ಉಳಿದ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಇಷ್ಟೆಲ್ಲಾ ಘಟನೆ ನಡೆದ್ರು ತುಟಿಕ್ ಪಿಟಿಕ್ ಎನ್ನದೆ ಪ್ರಕರಣ ಮುಚ್ಚಿಹಾಕಲು ಮೇಲಾಧಿಕಾರಿಗಳು ಪ್ರಯತ್ನಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Bengaluru: 20 ಬಾರಿ ಜೈಲಿಗೆ ಹೋದರೂ ಬುದ್ದಿ ಕಲಿಯದ ಕಳ್ಳಿ ಮತ್ತೆ ಅರೆಸ್ಟ್!
ಇನ್ನು ಕಳೆದ ಐದಾರು ದಿನಗಳಿಂದ ಮುಚ್ಚಿಹೋಗುವ ಹಂತದಲ್ಲಿದ್ದ ಪ್ರಕರಣ ಇದ್ದಕ್ಕಿದ್ದಂತೆ ಚರ್ಚೆಗೆ ಗ್ರಾಸವಾಗ್ತಿದ್ದಂತೆ. ಕೂಡಲೇ ಎಚ್ಚೆತ್ತಿರೋ ಅಧಿಕಾರಿಗಳು ಇದೀಗ ಮೇಲ್ಛಾವಣಿ ಕುಸಿದು ಬಿದ್ದಿದ್ದ ಜಾಗದಲ್ಲಿ ಕಾಮಗಾರಿ ಆರಂಭಿಸಿದ್ದಾರೆ. ಏನೂ ಆಗೇ ಇಲ್ಲ ಎಂಬಂತೆ ಸನ್ನಿವೇಶ ಸೃಷ್ಟಿಮಾಡಿ ಕೆಲಸಗಳು ಸದ್ಯ ಆಗುತ್ತಿದೆ. ವಿಚಾರ ಹೊರಗೆ ಬಂದರೆ ಕೆಲಸಕ್ಕೆ ಕುತ್ತು ಇನ್ನು ವಾರ್ನಿಂಗ್ ಕೂಡ ನೀಡಲಾಗಿದೆ ಅನ್ನೋ ವಿಚಾರ ಬಹಿರಂಗವಾಗುತ್ತಿದೆ. ಈ ಬಗ್ಗೆ ಜಿಲ್ಲಾಸ್ಪತ್ರೆಯ ವೈದ್ಯ ಅಧಿಕಾರಿಯನ್ನು ಕೇಳಿದ್ರೆ ಉಡಾಫೆ ಉತ್ತರ ಕೊಡ್ತಾರೆ.
ಒಟ್ಟಿನಲ್ಲಿ ಜೀವನೋಪಾಯಕ್ಕಾಗಿ ಮೂಲಭೂತ ಸೌಕರ್ಯದ ಕೊರತೆ ನಡುವೆಯೂ ಕೆಲಸ ನಿರ್ವಹಿಸುತ್ತಿದ್ದ ಗುತ್ತಿಗೆ ಸಿಬ್ಬಂದಿಗಳಿಗೆ ಸೂಕ್ತ ಪರಿಹಾರ ಸಿಗಬೇಕಿದೆ. ಜೊತೆಗೆ ಜಿಲ್ಲಾಸ್ಪತ್ರೆಯಲ್ಲಿ ಶಿಥಿಲಗೊಂಡಿರುವ ಕಟ್ಟಡಗಳನ್ನು ಪರಿಶೀಲನೆ ನಡೆಸಿ ಮತ್ತೆ ಇಂಥ ದುರ್ಘಟನೆ ನಡೆಯದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಲೇಕಿದೆ.
ಕುಸಿದು ಬಿದ್ದ ಶಾಲೆ: ಶಾಲೆಯ ಕೊಠಡಿಯ ಮೇಲ್ಛಾವಣಿಗೆ ಮಾಡಲಾಗಿದ್ದ ಪ್ಲಾಸ್ಟರಿಂಗ್ ಕಳಚಿ ಬಿದ್ದು 5 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಅಂಕೋಲಾ ನಗರದ ನಿರ್ಮಲ ಕಾನ್ವೆಂಟ್ ನಿಂದ ವರದಿಯಾಗಿತ್ತು.
ಮಧ್ಯಾಹ್ನದ ಊಟದ ವಿರಾಮದ ವೇಳೆ ಕುಸಿದು ಬಿದ್ದಿದೆ. ಪರಿಣಾಮ ತರಗತಿ ಒಳಗಡೆ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಗಾಯಗಳಾಗಿವ. 4ನೇ ತರಗತಿ ಸುಹಾನಿ, ಸಪನ್, ಸಾಧ್ವೀನ್ ಸೇರಿದಂತೆ ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು
ಅಲ್ಲದೇ ಘಟನೆಯಿಂದ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಡೆಸ್ಕ್ ಸೇರಿದಂತೆ, ತರಗತಿ ಒಳಗಡೆಯ ಸಾಮಾಗ್ರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ತರಗತಿಯಲ್ಲಿ 66 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಬಹುಪಾಲು ವಿದ್ಯಾರ್ಥಿಗಳು ತರಗತಿಯ ಹೊರಗೆ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿತ್ತು.
ಕಂದಕಕ್ಕೆ ಉರುಳಿದ ಬಸ್: ಚಿಕ್ಕಮಗಳೂರಿನಲ್ಲಿ ಖಾಸಗಿ ಬಸ್ ಪ್ರಪಾತಕ್ಕೆ ಉರುಳಿ ಬಿದ್ದಿತ್ತು. ದತ್ತಪೀಠದ ರಸ್ತೆಯ ಅತ್ತಿಗುಂಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ 40ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಹಲವರು ಗಾಯಗೊಂಡಿದ್ದರು.
ದತ್ತಪೀಠದಿಂದ ಚಿಕ್ಕಮಗಳೂರು ಕಡೆಗೆ ಬರುತ್ತಿ ದ್ದಾಗ ಘಟನೆ ಸಂಭವಿಸಿದ್ದು, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಗಿರಿಗೆ ತೆರಳಿದ್ದ 7ಜನರು ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು. ಇವರಲ್ಲಿ ಓರ್ವ ವೃದ್ಧೆಯ ಸ್ಥಿತಿ ಗಂಭೀರವಾಗಿದ್ದು ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೂರು ವರ್ಷದ ಹೆಣ್ಣು ಮಗು ಅಪಾಯದಿಂದ ಪಾರಾಗಿತ್ತು.