* ಮಲೆನಾಡಿನ ಸುಗ್ಗಿ ಹಬ್ಬದಲ್ಲೂ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ
* ಸುಗ್ಗಿ ಹಬ್ಬದಲ್ಲಿ ವ್ಯಾಪಾರ ಮಾಡಲು ಅವಕಾಶವಿಲ್ಲ
* ಮಲೆನಾಡಿನ ಪ್ರತಿ ಹಬ್ಬಕ್ಕೂ ಹಬ್ಬಿದ ನಿರ್ಬಂಧದ ಕಿಚ್ಚು
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಏ.03): ಮಲೆನಾಡ(Malenadu) ಭಾಗವಾದ ಚಿಕ್ಕಮಗಳೂರಿನಲ್ಲಿ(Chikkamagaluru) ಹಿಜಾಬ್ ವಿವಾದದ ಕಿಚ್ಚು ತಣ್ಣಗಾಗುವ ಲಕ್ಷಣಗಳು ಗೋಚರವಾಗುತ್ತಿಲ್ಲ. ಹೌದು, ಹಿಜಾಬ್(Hijab) ವಿವಾದದಿಂದ ಉಂಟಾದ ವ್ಯಾಪಾರ ಸಂಘರ್ಷದ ಕಿಚ್ಚು ಮಲೆನಾಡಿನಲ್ಲಿ ವ್ಯಾಪಕವಾಗಿ ಪ್ರತಿಧ್ವನಿಸುತ್ತಿದೆ. ಮಲೆನಾಡಿನಲ್ಲಿ ನಡೆಯುವ ಪ್ರತಿ ಹಬ್ಬಕ್ಕೂ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧದ ಕೂಗು ಹೆಚ್ಚಾಗುತ್ತಲೇ ಇದೆ. ಇದೀಗ ಸುಗ್ಗಿ ಹಬ್ಬಕ್ಕೂ ವ್ಯಾಪಾರ ಸಂಘರ್ಷದ ಕಿಚ್ಚು ವ್ಯಾಪಿಸಿದೆ.
ಸುಗ್ಗಿ ಹಬ್ಬಕ್ಕೆ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ
ಬೇಸಿಗೆ ಕಾಲದಲ್ಲಿ ಚಿಕ್ಕಮಗಳೂರಿನ ಪ್ರತಿಗ್ರಾಮದಲ್ಲಿ ಕೂಡ ಸುಗ್ಗಿ ಹಬ್ಬದ ಸಂಭ್ರಮ. ಒಂದಲ್ಲ ಒಂದು ಗ್ರಾಮದಲ್ಲಿ ಜಾತ್ರೆ, ಸುಗ್ಗಿ ಹಬ್ಬಗಳ ಸಂಭ್ರಮ ಎಲ್ಲೆ ಮೀರಿರುತ್ತದೆ. ಈ ಬಾರಿ ಮಲೆನಾಡಿನಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ(Muslim Traders) ನಿರ್ಬಂಧದ ಕೂಗು ತಟ್ಟಿದೆ. ಹಿಜಾಬ್ ವಿವಾದದಿಂದ ಉಂಟಾದ ವ್ಯಾಪಾರದ(Business) ಸಂಘರ್ಷ ಮಲೆನಾಡಿನಲ್ಲಿ ಮುಂದುವರೆಯುತ್ತಲೇ ಇದೆ.
ಮಲೆನಾಡಿನ ಪ್ರಖ್ಯಾತ ಮಿಲನ್ ಇನ್ನಿಲ್ಲ: ಪಶುವೈದ್ಯಾಧಿಕಾರಿಗಳ ನಿರ್ಲಕ್ಷಕ್ಕೆ ಮೂಕಪ್ರಾಣಿ ಬಲಿ?
ಒಂದಲ್ಲ ಒಂದು ತಾಲೂಕುಗಳಲ್ಲಿ ನಡೆಯುವಂತಹ ಹಬ್ಬ(Festival) ಜಾತ್ರೆ ಮಹೋತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧದ ಕೂಗು ಬಲವಾಗಿ ಕೇಳಿ ಬರುತ್ತಿದೆ. ಮೂಡಿಗೆರೆ, ಕೊಪ್ಪ, ಶೃಂಗೇರಿ ಸೇರಿದಂತೆ ಚಿಕ್ಕಮಗಳೂರಿನ ಕೆಲ ಭಾಗಗಲ್ಲಿ ಈಗಾಗಲೇನಡೆಯುವ ಜಾತ್ರೆ, ಕೋಲದ ಹಬ್ಬಗಳಲ್ಲಿ ಬ್ಯಾನರ್ ಗಳನ್ನು ಹಾಕಿ ಮುಸ್ಲಿಂ ನ ವ್ಯಾಪಾರಸ್ಥರಿಗೆ ಅವಕಾಶವಿಲ್ಲಂದು ಸಾರಿದ್ದಾರೆ. ಇದರ ನಡುವೆ ಚಿಕ್ಕಮಗಳೂರು ತಾಲ್ಲೂಕಿನ ಚಿಕ್ಕಮಾಗರವಳ್ಳಿ ಗ್ರಾಮದಲ್ಲಿ ಒಂದು ವಾರಗಳ ಕಾಲ ನಡೆಯುವ ಸುಗ್ಗಿ ಹಬ್ಬಕ್ಕೆ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಹೇರಲಾಗಿದೆ.
ಸಾವಿರಾರು ಜನರು ಸೇರುವಂತಹ ಸುಗ್ಗಿ ಹಬ್ಬದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಪ್ರತಿವರ್ಷವೂ ಕೂಡ ಇಲ್ಲಿ ಭರ್ಜರಿ ವ್ಯಾಪಾರ ವಾಗುತ್ತಿತ್ತು ಆದರೆ ಈ ಬಾರಿ ನಿರ್ಬಂಧ ಹೇರಿರುವ ಪರಿಣಾಮ ಮುಸ್ಲಿಂ ವ್ಯಾಪಾರಸ್ಥರು ಅಂಗಡಿ ಮಳಿಗೆಗಳನ್ನು ಹಾಕಿಕೊಳ್ಳುವುದಕ್ಕೆ ಅವಕಾಶವಿಲ್ಲ. ಗ್ರಾಮಕ್ಕೆ ಪ್ರವೇಶ ಮಾಡುವ ಜಾಗದಲ್ಲಿ ಗ್ರಾಮಸ್ಥರ ಹೆಸರಿನಲ್ಲಿ ಬ್ಯಾನರ್ ಹಾಕಲಾಗಿದೆ. ಮುಡಿಯಿಂದ ಕಟ್ಟು ನಿಟ್ಟಾಗಿ ಆಚರಿಸಿಕೊಂಡು ಬರುವುದರಿಂದ ಈ ಜಾತ್ರೆಯಲ್ಲಿ ವ್ಯಾಪಾರ ನಡೆಸುಲು ಮುಸ್ಲಿಂರಿಗೆ ಅವಕಾಶವಿರುವುದಿಲ್ಲ ಎಂದು ಗ್ರಾಮಸ್ಥೆರು ಬ್ಯಾನರ್‌ನಲ್ಲಿ ಸಾರಿದ್ದಾರೆ.
ಚಿಕ್ಕಮಗಳೂರಲ್ಲಿ ಮಳೆ: ವರುಣನ ಆರ್ಭಟಕ್ಕೆ ಹಲವೆಡೆ ಭಾರೀ ಅನಾಹುತ
ಸಿ.ಟಿ.ರವಿ ಹುಟ್ಟೂರು ಚಿಕ್ಕಮಾಗರವಳ್ಳಿಯಲ್ಲೂ ವ್ಯಾಪಾರ ಸಂಘರ್ಷದ ಕಿಚ್ಚು
ಚಿಕ್ಕಮಾಗರವಳ್ಳಿ ಬಿಜೆಪಿ(BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಹುಟ್ಟೂರು . ಇಲ್ಲಿಯೂ ಈ ಭಾರೀ ನಡೆಯುತ್ತಿರುವ ಸುಗ್ಗಿ ಹಬ್ಬಕ್ಕೆ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಹಾಕಲಾಗಿದೆ. ಶ್ರೀ ದೇವಿರಮ್ಮ ಸುಗ್ಗಿ ಹಬ್ಬದಲ್ಲಿ ಮುಸ್ಲಿಮರು ಅಂಗಡಿ ಹಾಕದಂತೆ ಬ್ಯಾನರ್ ಹಾಕಲಾಗಿದೆ.
ಚಿಕ್ಕಮಾಗರಹಳ್ಳಿ, ದೊಡ್ಡ ಮಾಗರಹಳ್ಳಿ, ದೋಣಗೂಡಿಗೆ, ಸಾರಳ್ಳಿ, ಹಳಿಯೂರು ಗ್ರಾಮಸ್ಥರು ಸೇರಿ ಆಚರಿಸುವ ಜಾತ್ರೆ ಇದಾಗಿದ್ದು ಒಂದು ವಾರಗಳ ಕಾಲ ಗ್ರಾಮದಲ್ಲಿ ಸುಗ್ಗಿ ಹಬ್ಬ ಸಂಭ್ರಮ ಮನೆಮಾಡಿರುತ್ತೇದೆ. ಸುಗ್ಗಿ ಹಬ್ಬದಲ್ಲಿ ಜಾತ್ರೆ,ದೇವರ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯುತ್ತೇದೆ. ನಾಳೆಯಿಂದ ಆರಂಭವಾಗಿ ಒಂದು ವಾರಗಳ ನಡೆಯುವ ಸುಗ್ಗಿ ಹಬ್ಬದಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಗ್ರಾಮದ ಮುಂಭಾಗದಲ್ಲಿ ಬ್ಯಾನರ್ ಹಾಕಿ ವ್ಯಾಪಾರಕ್ಕೆ ಬರದಂತೆ ಅನ್ಯಧರ್ಮದ ವ್ಯಾಪಾರಸ್ಥರಿಗೆ ಸೂಚನೆ ನೀಡಲಾಗಿದೆ.