Chamarajanagara ಕನಸಲ್ಲಿ ಬಂದ ಗಣೇಶನಿಗೆ ದೇಗುಲ ಕಟ್ಟಿಸಿ ಆರಾಧಿಸುತ್ತಿರುವ ಮುಸ್ಲಿಂ ವ್ಯಕ್ತಿ!

By Suvarna News  |  First Published Apr 6, 2022, 5:30 PM IST
  • ಸೌಹಾರ್ದತೆಗೆ ಸಾಕ್ಷಿಯಾದ ಚಿಕ್ಕಹೊಳೆಯ ಪಿ.ರೆಹಮಾನ್
  • ವಿವಾದಗಳನ್ನು ಲೆಕ್ಕಿಸದೆ ಗಣಪತಿಯನ್ನು ಆರಾಧಿಸುತ್ತಿರುವ ರೆಹಮಾನ್
  • ತನಗೆ ಬಂದ ಪೆನ್ಷನ್ ಹಣದಲ್ಲಿ ಗಣೇಶನಿಗಾಗಿ ದೇವಾಲಯ ನಿರ್ಮಿಸಿದ ರೆಹಮಾನ್ 
  • ಎಲ್ಲರ ರಕ್ತವು ಒಂದೇ ಬಣ್ಣ ದೇವರು ಒಬ್ಬನೇ ಎಂದು ನಂಬಿದ್ದೇನೆ ಎಂದ ರೆಹಮಾನ್

ಚಾಮರಾಜನಗರ (ಎ.6): ರಾಜ್ಯದಲ್ಲಿ ಹಿಜಾಬ್ (Hijab), ಹಲಾಲ್(Halal), ಜಟ್ಕಾ ಕಟ್(Jhatka cut), ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಮ್ಯಾಂಗೋ ವಾರ್,  ಮೈಕ್  ನಂತಹ ದಂಗಲ್ ನಡೀತಿದೆ. ಇದು ಹಿಂದೂ, ಮುಸ್ಲಿಂ ನಡುವೆ ಸೌಹರ್ದತೆಗೆ ದಕ್ಕೆ ಉಂಟಾಗ್ತಿದೆ. ಇದರ ನಡುವೆಯೂ ಕೂಡ ಮುಸ್ಲಿಂ ವ್ಯಕ್ತಿ ಗಣೇಶನ ಗುಡಿ ಕಟ್ಟಿಸಿ ಆರಾಧಿಸ್ತಿದ್ದಾನೆ. ಆತ ಮುಸಲ್ಮಾನ (Muslim), ಆದ್ರೂ ಸಹ ಗಣೇಶನ ಭಕ್ತ. ಗಣೇಶನಿಗಾಗಿ ದೇಗುಲ ನಿರ್ಮಾಣ ಮಾಡಿದ್ದಾರೆ. ಗಣೇಶನನ್ನೇ ತನ್ನ ಮನೆದೈವ ಎಂದು ಆರಾಧಿಸುತ್ತಾ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.

ಈತನ ಹೆಸರು ರೆಹಮಾನ್ (Rahman), ಮೂಲತಃ ಕೇರಳದವರು. 80 ರ ದಶಕದಲ್ಲೇ ಗಡಿಜಿಲ್ಲೆ ಚಾಮರಾಜನಗರಕ್ಕೆ (Chamarajanagara ) ಕೆಲಸ ಅರಸಿ ಬಂದ್ರು. ನಂತರ ಚಿಕ್ಕಹೊಳೆ ಜಲಾಶಯದಲ್ಲಿ (Chiklihole Reservoir) ಗೇಟ್ ಆಪರೇಟರ್ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಇವರ ನಿವೃತ್ತಿ ಹೊಂದುವ ಒಂದು ತಿಂಗಳ‌ ಮುಂಚೆ ಜಲಾಶಯದ ಬಳಿಯಿದ್ದ ಪುಟ್ಟ ಗಣೇಶನ ವಿಗ್ರಹ ಕಳುವಾಗಿತ್ತು.‌ ಅದೇ ದಿನ ರಾತ್ರಿ ರೆಹಮಾನ್ ಅವರಿಗೆ ಗಣೇಶ ಕನಸಿನಲ್ಲಿ ಬಂದು ನನಗೊಂದು ದೇವಾಲಯ ನಿರ್ಮಿಸು ಎಂದು ಹೇಳಿತ್ತು ಎನ್ನುವ ರೆಹಮಾನ್ ಇದನ್ನು‌ ಗಂಭೀರವಾಗಿ ಪರಿಗಣಿಸಿ ಕೂಡಲೇ ಕಾರ್ಯನ್ಮೋಖರಾದ್ರು.

Tap to resize

Latest Videos

undefined

ಅದೇ ವೇಳೆಗೆ ಅವರು ನಿವೃತ್ತಿ ಹೊಂದಿದ ಹಣ ಸಹ ಕೈ ಸೇರಿತ್ತು. ಆ ಹಣದಲ್ಲೇ ದೇವಾಲಯ ನಿರ್ಮಿಸಿದ್ರು. ಅಲ್ಲದೇ ದೇವಾಲಯಕ್ಕೆ ಓರ್ವ ಅರ್ಚಕರನ್ನು ನೇಮಿಸಿದ್ದಾರೆ. ಗಣಪತಿ ಪೂಜೆಯಿಂದ ನನ್ನ ಬದುಕು ಹಸನಾಗಿದೆ‌. ವಿಘ್ನ ವಿನಾಯಕನ ಆಶಿರ್ವಾದದಿಂದ ನೆಮ್ಮದಿಯಾಗಿದ್ದೇನೆ.‌ಎಲ್ಲರ ರಕ್ತವೂ ಒಂದೇ ಬಣ್ಣ. ಹಾಗೇ ದೇವರೂ ಸಹ ಒಬ್ಬನೇ ಎಂದು ನಂಬಿ ಗಣೇಶನನ್ನು ಆರಾಧಿಸುತ್ತಿದ್ದೇನೆ ಎನ್ನುತ್ತಾರೆ ರೆಹಮಾನ್.

ಹಲಾಲ್ ಕಟ್ ಮಾಡಿದ್ದೆ ನಾವು ತಿನ್ನೋದು, ಮಾಂಸ ತಿನ್ನದವರಿಂದ ವಿವಾದ ಸೃಷ್ಟಿ: ಸಿದ್ದರಾಮಯ್ಯ

ಇನ್ನೂ ಅರ್ಚಕರಿಗೆ ಪ್ರತಿ ತಿಂಗಳು 4 ಸಾವಿರ ಸಂಬಳವನ್ನು ಸಹಾ ರೆಹಮಾನ್ ನೀಡ್ತಾರೆ‌. ಅಲ್ಲದೇ ಪ್ರತಿ ಸೋಮವಾರ ಮತ್ತು ಶುಕ್ರವಾರ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ಸುತ್ತಮುತ್ತಲಿನ ಹಲವು ಜನರು ಭಾಗಿಯಾಗ್ತಾರೆ. ಇವರೆಲ್ಲರಿಗೂ ಪ್ರಸಾದ ವಿನಿಯೋಗ ಸಹಾ ಮಾಡಲಾಗುತ್ತದೆ. ಇಲ್ಲಿನ ಅರ್ಚಕರ ಪ್ರಕಾರ ಗಣೇಶನಿಂದ ರೆಹಮಾನ್‌ಗೆ ಒಳ್ಳೆಯದಾಗಿದೆ. ರೆಹಮಾನ್‌ನಿಂದ ನನಗೆ ಒಳ್ಳೆಯದಾಗಿದೆ. ಆತ ಮುಸ್ಲೀಂ ಅದ್ರೂ ನನಗೆ ಪ್ರತಿ ತಿಂಗಳು ಸಂಬಳ ನೀಡುತ್ತಿದ್ದು ನನ್ನ ಕಷ್ಟ ಸುಖದಲ್ಲೂ ಭಾಗಿಯಾಗ್ತಿದ್ದಾರೆ. ಇದು‌ ನಿಜವಾದ ಮನುಷತ್ವದ ಲಕ್ಷಣ ಎಂಬುದು ಅರ್ಚಕರ ಮಾತು..

ರಾಜ್ಯದಲ್ಲಿ ಹಿಂದೂ-ಮುಸ್ಲೀಂ ಅನ್ನೋ ದಂಗಲ್   ಮಧ್ಯೆ ಓರ್ವ ಮುಸ್ಲೀಂ ಆಗಿ ಗಣೇಶ ದೇಗುಲ ಕಟ್ಟಿರುವುದು ನಿಜಕ್ಕೂ ಉತ್ತಮ ವಿಚಾರ. ಈ ಮೂಲಕ ಸಮಾಜದಲ್ಲಿ ಕೋಮ ಸೌಹಾರ್ದತೆ ಕಾಪಾಡುತ್ತಿರುವ ರೆಹಮಾನ್‌ ನಿಜಕ್ಕೂ ಮಾದರಿ ವ್ಯಕ್ತಿಯೇ ಸರಿ. 

Vijayapura ಕೆಂಡ ಹಾಯ್ದ ನಾಲ್ಕು ರಾಜ್ಯಗಳ 3 ಸಾವಿರ ಭಕ್ತರು!

click me!