Noise pollution ಮೈಕ್ ಬಳಸುತ್ತಿರುವ ಮಸೀದಿ, ಚರ್ಚ್, ದೇಗುಲ ಸೇರಿ 1001 ಕೇಂದ್ರಕ್ಕೆ ಮಂಗಳೂರು ಕಮಿಷನರ್ ನೋಟಿಸ್!

Published : Apr 06, 2022, 05:28 PM ISTUpdated : Apr 07, 2022, 01:39 PM IST
Noise pollution ಮೈಕ್ ಬಳಸುತ್ತಿರುವ ಮಸೀದಿ, ಚರ್ಚ್, ದೇಗುಲ ಸೇರಿ 1001 ಕೇಂದ್ರಕ್ಕೆ ಮಂಗಳೂರು ಕಮಿಷನರ್ ನೋಟಿಸ್!

ಸಾರಾಂಶ

ಕಮಿಷನರ್ ಶಶಿಕುಮಾರ್ ಆದೇಶದ ಹಿನ್ನೆಲೆ ಎಚ್ಚರಿಕೆ ನೋಟೀಸ್ 1001 ಧ್ವನಿವರ್ಧಕ ಬಳಸುವ ಕೇಂದ್ರಗಳಿಗೆ ನೋಟೀಸ್ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಎಂದ ಪೊಲೀಸ್

ಮಂಗಳೂರು(ಏ.06): ರಾಜ್ಯದಲ್ಲಿ ಮಸೀದಿಗಳಲ್ಲಿ ಮೈಕ್ ಬಳಕೆ ವಿಚಾರ ಡಿಜಿಪಿ ಸುತ್ತೋಲೆ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಧ್ವನಿವರ್ಧಕ ಬಳಸುವ ಕೇಂದ್ರಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ.ಮಂಗಳೂರು ‌ಕಮಿಷನರ್ ಶಶಿಕುಮಾರ್ ಆದೇಶದ ಹಿನ್ನೆಲೆ ಎಚ್ಚರಿಕೆ ನೋಟೀಸ್ ನೀಡಲಾಗಿದ್ದು, ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಠಾಣೆಗಳಿಂದ ನೋಟೀಸ್ ಕಳುಹಿಸಲಾಗಿದೆ. ದೇವಸ್ಥಾನ, ‌ಮಸೀದಿ, ಶಿಕ್ಷಣ ಸಂಸ್ಥೆ, ಚರ್ಚ್, ಕೈಗಾರಿಕಾ ಸ್ಥಳ, ಮಾಲ್ ಗಳು, ಮದುವೆ ಹಾಲ್ ಗಳು ಸೇರಿ ಒಟ್ಟು 1001 ಧ್ವನಿವರ್ಧಕ ಬಳಸುವ ಕೇಂದ್ರಗಳಿಗೆ ನೋಟೀಸ್ ನೀಡಲಾಗಿದೆ. 1986ರ ನಿಯಮದಡಿ ಹೆಚ್ಚಿನ ಶಬ್ದ ಬಳಸದಂತೆ ಹಾಗೂ ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. 

ಧ್ವನಿವರ್ಧಕ ಬಳಕೆಗಳ ವಿಪರೀತಕ್ಕೆ ಕಡಿವಾಣ ಹಾಕಲು ಸರ್ಕಾರ ನಿರ್ಧಾರ ಮಾಡಿದ್ದು, ಅದರಂತೆ ಮಂಗಳೂರು ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಡೆಸಿಬಲ್ ಶಬ್ದಕ್ಕಿಂತ ಹೆಚ್ಚಿನ ಶಬ್ದವನ್ನು ಹೊರಡಿಸುವ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಮಂಗಳೂರು ನಗರದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ. ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಬ್ದ ಮಾಲಿನ್ಯ ಆಕ್ಟ್ 1986ರಡಿಯಲ್ಲಿ ಡೆಸಿಬಲ್ ಶಬ್ದಕ್ಕಿಂತ ಹೆಚ್ಚಿನ ಶಬ್ದವನ್ನು ಉಪಯೋಗಿಸಬಾರದೆಂದು ನಿರ್ದೇಶಿಸಲಾಗಿದೆ.

ಈ ನಿಯಮವನ್ನು ಶಬ್ದ ಮಾಲಿನ್ಯ ಆಕ್ಟ್ 1986 ರಡಿಯಲ್ಲಿ ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. 357 ದೇವಸ್ಥಾನ, 168 ಮಸೀದಿ, 95 ಚರ್ಚ್ ಹಾಗೂ 106  ಶಿಕ್ಷಣ ಸಂಸ್ಥೆಗಳು, 60 ಕೈಗಾರಿಕಾ ಸ್ಥಳಗಳು, 98ಮನರಂಜನಾ ಸ್ಥಳಗಳು,68 ಮದುವೆ ಹಾಲ್‌ಗಳು ಮತ್ತು ಕಾರ್ಯಕ್ರಮ ಸ್ಥಳಗಳು, 49 ಇತರ ಸಾರ್ವಜನಿಕ ಸ್ಥಳಗಳು ಸೇರಿದಂತೆ 1001 ಸ್ಥಳಗಳನ್ನು ಗುರುತಿಸಿ ಶಬ್ದ ಕಡಿಮೆ ಮಾಡುವಂತೆ ಸೂಚನೆ ನೀಡಲಾಗಿದೆ ಅಂದರು.

"

ಹೈಕೋರ್ಟ್ ಆದೇಶ ಉಲ್ಲಂಘಿಸಿದ್ರೆ ಕಾನೂನು ಕ್ರಮ!

ಬೆಂಗಳೂರಿನ 301 ಧಾರ್ಮಿಕ ಕೇಂದ್ರಗಳಿಗೆ ನೋಟಿಸ್: ರಾಜ್ಯದ ಉಚ್ಛ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಧ್ವನಿವರ್ಧಕ ಬಳಸಿದ ಆರೋಪದ ಮೇರೆಗೆ ನಗರ ವ್ಯಾಪ್ತಿ ದೇವಾಲಯ, ಚಚ್‌ರ್‍ ಹಾಗೂ ಮಸೀದಿಗಳು ಸೇರಿ 301 ಧಾರ್ಮಿಕ ಕೇಂದ್ರಗಳಿಗೆ ನೋಟಿಸ್‌ ನೀಡಲಾಗಿದ್ದು, ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಧ್ವನಿವರ್ಧಕ ಬಳಕೆ ಸಂಬಂಧ ಆರು ತಿಂಗಳ ಹಿಂದೆಯೇ ನ್ಯಾಯಾಲಯವು ಧ್ವನಿವರ್ಧಕಗಳ ಬಳಕೆ ಸಂಬಂಧ ಆದೇಶ ನೀಡಿದೆ. ನ್ಯಾಯಾಲಯದ ಸೂಚನೆ ಪಾಲಿಸುವಂತೆ ಧಾರ್ಮಿಕ ಕೇಂದ್ರಗಳು ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ನಿರ್ದೇಶಿಸಲಾಗಿದೆ ಎಂದರು.

ಮಸೀದಿ ಮೇಲಿನ ಮೈಕ್ ತೆರವಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ

ಮಹಾರಾಷ್ಟ್ರದಿಂದ ಎದ್ದ ಅಜಾನ್ ಬಿರುಗಾಳಿ ಕರ್ನಾಟಕದಲ್ಲಿ ಬಲು ಜೋರು: ಮಹಾರಾಷ್ಟ್ರದಲ್ಲಿ ರಾಜ್‌ ಠಾಕ್ರೆ ಶುರು ಮಾಡಿರುವ ಲೌಡ್‌ಸ್ಪೀಕರ್‌ ಅಭಿಯಾನವನ್ನು ಕರ್ನಾಟಕದಲ್ಲಿ ಜೋರಾಗಿದೆ. ಅಜಾನ್ ಮೈಕ್ ತೆಗೆಸದಿದ್ದರೆ ನಿತ್ಯ ಬೆಳಗ್ಗೆ 5ಕ್ಕೆ ಮಂದಿರ, ಮಠಗಳಲ್ಲಿ ಮೈಕ್‌ ಅಳವಡಿಸಿ ರಾಮ, ಈಶ್ವರನ ಭಜನೆ ಹಾಗೂ ಓಂಕಾರ ಹಾಡುಗಳನ್ನು ಹಾಕುತ್ತೇವೆ ಎಂದು ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿತ್ತು.

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

PREV
Read more Articles on
click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ