ಹರ್ ಘರ್ ತಿರಂಗಾ: ಮಸೀದಿ ಮೇಲೂ ಹಾರಿದ ರಾಷ್ಟ್ರಧ್ವಜ

By Suvarna News  |  First Published Aug 13, 2022, 5:22 PM IST

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಹರ್ ಘರ್ ತಿರಂಗಾ ಅಭಿಯಾನ ಸಂಭ್ರಮ ಮನೆ ಮಾಡಿದೆ, ಇನ್ನು ವಿಶೇಷ ಅಂದ್ರೆ ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಾಡಿದೆ.


ಬೆಳಗಾವಿ, (ಆಗಸ್ಟ್.13): ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನ ಎಲ್ಲಡೆ ಜೋರಾಗಿದೆ.   ಹರ್ ಘರ್ ತಿರಂಗ ಅಡಿಯಲ್ಲಿ ಪ್ರತಿ ಮನೆಯಲ್ಲೂ ತಿರಂಗ ಹಾರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಗಳಲ್ಲಿ  ತ್ರಿವರ್ಣ ಧ್ವಜ ಹಾರಾಡುತ್ತಿದೆ. ಮತ್ತೊಂದೆಡೆ ಮಸೀದಿಯ ಮೇಲೂ ಹಾರಿದ ರಾಷ್ಟ್ರಧ್ವಜ ಹರಾಡಿರುವುದು ವಿಶೇಷ.

ಮಸೀದಿ ಮೇಲೆ ಹಾರಾಡಿದ ತ್ರಿವರ್ಣ ಧ್ವಜ
ಹೌದು....ಬೆಳಗಾವಿ ಜಿಲ್ಲೆಯ ಗೋಕಾಕ‌ ನಗರದ ಅಂಬೇಡ್ಕರ್ ಗಲ್ಲಿಯ ಈದ್ಗಾ ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಾಡಿದೆ.  ಇಂದು(ಶನಿವಾರ) ಮುಸ್ಲಿಂ ಜಮಾತ್‌ ಕಮಿಟಿ ಮಸೀದಿಯ ಮೇಲೆ ಧ್ವಜಾರೋಹಣ ಮಾಡಿದೆ. ಇದು ಅಚ್ಚರಿಗೆ ಕಾರಣವಾಗಿದೆ.

Tap to resize

Latest Videos

ಮಸೀದಿಗಳ ಮೇಲೆ ರಾಷ್ಟ್ರಧ್ವಜ ಏರಿಸಿದ ಉದಾಹರಣೆಗಳೇ ಇಲ್ಲ. ಆದ್ರೆ, ಇದೀಗ ಪ್ರಧಾನ ನರೇಂದ್ರ ಮೋದಿ ಅವರು ಹರ್ ಘರ್ ತಿರಂಗ ಅಭಿಯಾನಕ್ಕೆ ಕರೆಕೊಟ್ಟ ಬೆನ್ನಲ್ಲೇ ಗೋಕಾಕ್‌ ಮಸೀದಿ ಮೇಲೆ ತ್ರಿವರ್ಣ ಕಟ್ಟಿರುವುದು ಸಂತಸದ ಸಂಗತಿಯಾಗಿದೆ.

ಕರ್ನಾಟಕದಲ್ಲೂ ಹರ್‌ ಘರ್ ತಿರಂಗಾ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಆರ್‌ಎಸ್‌ಎಸ್‌ ಹಾಗು ಮಸೀದಿಗಳ ಮೇಲೆ ರಾಷ್ಟ್ರಧ್ವಜ ಹಾರಿಸಲ್ಲ ಎನ್ನುವ ಆರೋಪ ಇದೆ. ಇದನ್ನ ಕೆಲವರು ಬಹಿರಂಗವಾಗಿ ಚರ್ಚೆಗಳನ್ನ ಸಹ ಮಾಡಿದ್ದಾರೆ. ಕೆಲವರು ಏಕೆ ಆರ್‌ಎಸ್‌ಎಸ್‌ ರಾಷ್ಟ್ರಧ್ವಜ ತಮ್ಮ ಮುಖ್ಯ ಕಚೇರಿಯ ಮೇಲೆ ಹಾರಿಸಲ್ಲ ಅಂತ ಪ್ರಶ್ನಿಸಿದ್ರೆ, ಇನ್ನೂ ಕೆಲವರು ಏಕೆ ಮಸೀದಿ, ಮದರಸಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಇದೀಗ ಗೋಕಾಕ್‌ನ ಒಂದು ಮಸೀದಿಯಲ್ಲಿ ರಾಷ್ಟ್ರದ್ವಜ ರಾರಾಜಿಸಿದ್ದು, ಹಲವರ ಬಾಯಿ ಮುಚ್ಚಿಸಿದಂತಾಗಿದೆ.ಇದೇ ರೀತಿ ಎಲ್ಲಾ ಮಸೀದಿಗಳಲ್ಲಿ ಆಗಸ್ಟ್ 15ರಂದು ತ್ರಿವರ್ಣ ಧ್ವಜ ಹಾರಿಸಿದ್ರೆ ಒಳ್ಳೆಯದು ಎನ್ನುವ ಮಾತುಗಳು ಕೇಳಿಬಂದಿವೆ.

RSS ಪ್ರೊಫೈಲ್ ಫೋಟೋಗೆ ರಾಷ್ಟ್ರಧ್ವಜ
ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಕರೆಗೆ ಸ್ಪಂದಿಸಿದ ಆರ್‌ಎಸ್‌ಎಸ್ (RSS) ಶುಕ್ರವಾರ ತನ್ನ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಫೋಟೋಗೆ ರಾಷ್ಟ್ರಧ್ವಜವನ್ನು ಹಾಕಿಕೊಂಡಿದೆ. 52 ವರ್ಷಗಳಿಂದ ಭಾರತದ ರಾಷ್ಟ್ರಧ್ವಜವನ್ನು ವಿರೋಧಿಸಿದ್ದ ಆರ್​ಎಸ್​ಎಸ್​ ಪ್ರಧಾನಿ ಮೋದಿಯವರ ಕರೆಗೆ ಬದ್ಧವಾಗಿಲ್ಲ ಎಂದು ಕಾಂಗ್ರೆಸ್ ಆರ್‌ಎಸ್‌ಎಸ್ ಮೇಲೆ ವಾಗ್ದಾಳಿ ನಡೆಸಿತ್ತು. ಅದಾದ ನಂತರ ಆರ್‌ಎಸ್‌ಎಸ್ ತನ್ನ ಸಾಮಾಜಿಕ ಮಾಧ್ಯಮ ಫೋಟೋಗಳನ್ನು ಬದಲಾಯಿಸಿದೆ. ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂದು ‘ಹರ್ ಘರ್ ತಿರಂಗ’  ಘೋಷಣೆಗಳನ್ನು ಕೂಗುತ್ತಿರುವವರು 52 ವರ್ಷಗಳಿಂದ ತ್ರಿವರ್ಣ ಧ್ವಜವನ್ನು ಹಾರಿಸಲು ನಿರಾಕರಿಸಿದ ‘ದೇಶ ವಿರೋಧಿ’ ಸಂಘಟನೆಯಿಂದ ಬಂದವರು ಎಂದು ಹೇಳಿದ್ದರು.

click me!