ಭಾರತ ಅಮೃತ ಮಹೋತ್ಸವದ ಸಂಭ್ರದಲ್ಲಿರುವ ವಿದ್ಯಾಕಾಶಿ ಧಾರವಾಡ ಕಸದ ರಾಶಿಯಾಗಿದೆ. ಗಾಂಧೀಜಿಯ ಸುತ್ತಲೂ ಕಸ ಬಿದ್ದಿರುವುದು ವ್ಯವಸ್ಥೆಯನ್ನು ಅಣಕಿಸುವಂತಿದೆ
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಆ.13) : ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷದ ಸಂಭ್ರಮಕ್ಕೆ ದೇಶದ ಎಲ್ಲೆಡೆ ಸಂಭ್ರಮಾಚರಣೆಗೆ ತುದಿಗಾಲ ಮೇಲೆ ನಿಂತಿದ್ದಾರೆ.. ಆಗಷ್ಟ್- 15 ಕ್ಕೆ ಧ್ವಜಾರೋಹಣ ಮಾಡುವ ತವಕದಲ್ಲಿ ನಾವಿದ್ದೇವೆ, ಪ್ರಧಾನಿ ಮೋದಿ(Narendra Modi) ಅವರು ಹರ್ ಘರ್ ತಿರಂಗಾ(Har Ghar Tiranga) ಆಚರಣೆಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ದೇಶದ ಜನರು ಮನೆ ಮನೆಯ ಮೆಲೆ ಧ್ವಜಾರೋಹಣ ಮಾಡಿ ಭಾರತಮಾತೆಗೆ ಜೈಕಾರ ಹಾಕುತ್ತಿದ್ದಾರೆ. ಆದರೆ ಧಾರವಾಡದಲ್ಲಿ ಮಹಾತ್ಮ ಗಾಂಧಿಜಿಯ ಪುತ್ಥಳಿಗೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಬೇಜವಾಬ್ದಾರಿ, ಅಲಕ್ಷ್ಯ, ಅಸ್ವಚ್ಛತೆಯಿಂದಾಗಿ ಅವಮಾನ ಮಾಡಲಾಗಿದೆ. ಪುತ್ಥಳಿ ಸುತ್ತಲೂ ಕಸದ ರಾಶಿಯೇ ಬಿದ್ದಿದ್ದರೂ ಸ್ವಚ್ಛಮಾಡುವುದಕ್ಕೆ ಯಾರೂ ಮುಂದಾಗಿಲ್ಲದಿರುವುದು ನಾಚಿಕೆಗೇಡು. ಅದು ಸ್ವಾತಂತ್ರ್ಯ ಸಂಭ್ರಮದಲ್ಲಿರುವಾಗ ಇಷ್ಟೊಂದು ಅಲಕ್ಷ್ಯ !
ಅಬ್ಬಬ್ಬಾ..ಕಸ ಎಸೆಯೋ ಬ್ಯಾಗ್ ಇಷ್ಟೊಂದು ಕಾಸ್ಟ್ಲೀನಾ?
ವಿದ್ಯಾಕಾಶಿ ಧಾರವಾಡ(Dharwad)ದಲ್ಲಿ ವಿದ್ಯಾವಂತರ ಈ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರೆ ಇರುವ ಮಹಾತ್ಮ ಗಾಂಧೀಜಿ ಪುತ್ಥಳಿಯ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿರುವುದು ಕಂಡು ಬಂದಿದೆ..ಆದರೆ ಜಿಲ್ಲಾಡಳಿತ ಎದುರೆ ಇರುವ ಈ ಪುತ್ಥಳಿಗೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅವಮಾನ ಮಾಡಲಾಗಿದೆ.. ಹಲವು ಸಂಘಟನೆಗಳ ಹೋರಾಟಗಾರನು ಇಲ್ಲಿ ಹೋರಾಟ ಮಾಡುತ್ತಾರೆ. ಇದೇ ಪುತ್ಥಳಿಗೆ ಮಾಲಾರ್ಪಣೆ ಮಾಡುತ್ತಾರೆ ಆದರೆ ಸದ್ಯ ಈ ಪುತ್ಥಳಿಗೆ ಧಾರವಾಡ ವಿದ್ಯಾವಂತರೆಲ್ಲರೂ ಅವಮಾನ ಮಾಡಿದಂತಾಗಿದೆ. ಇನ್ನು ಗಾಂಧಿ ಪುತ್ಥಳಿಯ ಪಕ್ಕದಲ್ಲೇ ಇರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಪ್ರತಿನಿತ್ಯ ಮಾಧ್ಯಮ ಮಿತ್ರರು ಸೇರುತ್ತಾರೆ. ಆದರೆ ಅವರು ಸಾಮಾಜಿಕ ಕಳಕಳಿಯನ್ನ ನೋಡಿ ಜಿಲ್ಲಾಡಳಿತ ತಲೆ ತಗ್ಗಿಸುವಂತಾಗಿದೆ..!
ಹೌದು, ಧಾರವಾಡ ಪ್ರೆಸ್ ಕ್ಲಬ್ ಅಧ್ಯಕ್ಷರಾದ. ಮುಸ್ತಾಫ್ ಕುನ್ನಿಭಾವಿ ಅವರ ನೇತೃತ್ವದಲ್ಲಿ ಮಹಾತ್ಮ ಗಾಂಧಿ ಪುತ್ಥಳಿ ಮತ್ತು ಆವರಣವನ್ನು ಸ್ವಂತ ಖರ್ಚಿನಲ್ಲಿ ಎಲ್ಲ ಮಾಧ್ಯಮ ಪ್ರತಿನಿಧಿಗಳ ನೆತೃತ್ವದಲ್ಲಿ ಸ್ವಚ್ಛತೆಯನ್ನ ಮಾಡಲಾಗಿದೆ..ಇನ್ನು ಜಿಲ್ಲಾಡಳಿತ ಎಲ್ಲ ಸರಕಾರಿ ಕಚೇರಿಗಳಲ್ಲಿ, ಧ್ವಜಾರೋಹಣಕ್ಕೆ ಸ್ವಚ್ಛತೆ ಮಾಡಿಕ್ಕೊಳ್ಳುತ್ತಿದ್ದಾರೆ. ಈ ಗಾಂಧೀಜಿ ಪುತ್ಥಳಿಗೆ ಅವಮಾನ ಮಾಡಿದ್ದಾರೆ..ಇದನ್ನ ನೋಡಿದ ಧಾರವಾಡ ಮಾಧ್ಯಮ ಪ್ರತಿನಿಧಿಗಳು ಸ್ವಚ್ಛತೆ ಮಾಡಿ ಮಾನವೀಯತೆ ಮೆರೆದಿದ್ದಾರೆ..ಇನ್ನು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ನಾಚುವಂತೆ ಮುಂದೆ ನಿಂತು ಸ್ವಚ್ಛತೆಯನ್ನ ಮಾಡಿದ್ದಾರೆ.. ನಿಜಕ್ಕೂ ಇಂತಹ ಮನಸ್ಸಿನ ಪತ್ರಕರ್ತರು ಮಾಡಿರುವ ಕೆಲಸಕ್ಕೆ ನಮ್ಮದೊಂದು ಸಲಾಂ..ಒಂದೇ ಮಾತರಂ!
BIG 3: ಬೀಚ್ ಬದಿಯಲ್ಲಿ ಒಂದು ಟಾಯ್ಲೆಟ್ ಇಲ್ಲ, ಕಸದ ಕೊಂಪೆಯಾಗಿದೆ ಉಳ್ಳಾಲ ಬೀಚ್
ಇನ್ನು ಸ್ವಚ್ಛ ಮಾಡಿದ್ದನ್ನ ಧಾರವಾಡ ಮಾಧ್ಯಮ ಮಿತ್ರರಿಂದ ಧಾರವಾಡ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕ್ಕೊಳ್ಳುವುದೆನೆಂದರೆ ಈ ಪುತ್ಥಳಿಯ ಅನಾವರಣದ ಸುತ್ತಲೂ ಸ್ವಚ್ಛತೆಯನ್ನ ಕಾಪಾಡಿಕ್ಕೊಳ್ಳಲೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಈ ಉದ್ಯಾನವನಕ್ಕೆ ಕಾಯಕಲ್ಪ ಕೊಡ್ತಾರೆ ಎಂದು ನಂಬಲಾಗಿದೆ..ಯಾಕೆಂದ್ರೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಕೂಡಾ ಇದೆ ಧಾರವಾಡ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ..ಅವರು ಕೂಡಾ ಇದೇ ಉದ್ಯಾನವದಲ್ಲಿ ಓಡಾಡಿದವರು. ಇನ್ನಾದರೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಈ ಪುತ್ಥಳಿ ಮತ್ತು ಉದ್ಯಾನವನವನ್ನ ನವೀಕರಣಗೊಳಿಸಿ ಹೊಸ ಮೆರಗು ಕೊಡುತ್ತಾರೆಂಬದು ನಮ್ಮ ಆಶಯವಾಗಿದೆ.