Greater Bengaluru ಬೆಂಗಳೂರು ವಿಭಜಿಸುವ ವಿಧೇಯಕಕ್ಕೆ ಸಂಪುಟ ಅನುಮೋದನೆ

By Santosh Naik  |  First Published Jul 22, 2024, 9:42 PM IST


ರಾಜ್ಯ ರಾಜಧಾನಿ ಬೆಂಗಳೂರನ್ನ ಐದು ಜಿಲ್ಲೆಗಳಾಗಿ ವಿಭಜನೆ ಮಾಡುವ ಗ್ರೇಟರ್‌ ಬೆಂಗಳೂರು ಗವರ್ನೆನ್ಸ್‌ ಮಸೂದೆಗೆ ಸಂಪುಟ ಅನುಮೋದನೆ ನೀಡಲಿದೆ. ಗ್ರೇಟರ್‌ ಬೆಂಗಳೂರು ಅಥಾರಿಟಿ ಮಾಡುವ ಸಲಹೆಗೆ ಅನುಮೋದನೆ ಸಿಕ್ಕಿದೆ.
 


ಬೆಂಗಳೂರು (ಜು.22):  ಉದ್ಯಾನನಗರಿ ಬೆಂಗಳೂರನ್ನು ಐದು ಜಿಲ್ಲೆಗಳಾಗಿ ವಿಭಜಿಸುವ ವಿಧೇಯಕಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಬೆಂಗಳೂರನ್ನ 5 ವಿಭಾಗಗಳಾಗಿ ವಿಭಜಿಸುವ ವಿಧೇಯಕ ಇದಾಗಿದೆ. ಬೆಂಗಳೂರನ್ನು ವಿಭಜಿಸಿ, ಗ್ರೇಟರ್ ಬೆಂಗಳೂರು ಅಥಾರಿಟಿ ಮಾಡುವ ಸಲಹೆಗೆ ಅನುಮೋದನೆ ನೀಡಲಾಗಿದೆ. ನಾಳೆ ವಿಧಾನಸಭೆಯಲ್ಲಿ ಈ ವಿಧೇಯಕ ಮಂಡನೆಯಾಗಲಿದೆ.  ಈ ವರದಿ ಪ್ರಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆಗೆ ಪ್ರಸ್ತಾಪ ಮಾಡಲಾಗಿದೆ. GBAಗೆ ಯೋಜನೆ ಮತ್ತು ಹಣಕಾಸು ಅಧಿಕಾರ ನಿರ್ವಹಣೆಯ ಅಧಿಕಾರ ಇರಲಿದೆ. ಸುಮಾರು‌1400 Sq ಕಿ.ಲೋ ಮೀಟರ್ GBA ವ್ಯಾಪ್ತಿಗೆ ಬರಲಿದೆ. 1 ರಿಂದ 10 ಕಾರ್ಪೊರೇಷನ್ ಗಳು  GBA ವ್ಯಾಪ್ತಿಗೆ ಬರಲಿದೆ. 1-10 ಕಾರ್ಪೊರೇಷನ್ ಗಳು 950 Sq ಕಿ.ಲೋ ಮೀಟರ್ ವ್ಯಾಪ್ತಿ ಹೊಂದಲಿದೆ. ಸದ್ಯ ಇರುವ  708 Sq ಕಿ.ಲೋ ಮೀಟರ್ ಬಿಬಿಎಂಪಿ ರದ್ದಾಗಲಿದೆ ಎನ್ನುವ ವಿವರಗಳಿವೆ.

ಈ ಕರಡು ಮಸೂದೆಯಲ್ಲಿ ಸುಮಾರು 400 ವಾರ್ಡ್ ಗಳ ರಚನೆಗೆ ಪ್ರಸ್ತಾಪ ಮಾಡಲಾಗಿದೆ. ಈ ಕರಡು ಮಸೂದೆಯಂತೆ ಬಿಡಿಎ ಅದರ ಯೋಜನೆ ರೂಪಿಸುವ ಅಧಿಕಾರ ಕಳೆದುಕೊಳ್ಳಲಿದೆ. ಆದರೆ ಬೃಹತ್ ಮೂಲಸೌಕರ್ಯ ಯೋಜನೆಗಳ ಕಾಮಗಾರಿಯನ್ನ ಬಿಡಿಎ ಕೈಗೊಳ್ಳಲಿದೆ.

ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಿಎಂ ಅಧ್ಯಕ್ಷರಾಗಿರುತ್ತಾರೆ. 5-10 ಕಾರ್ಪೋರೇಷನ್ ಇರಲಿದೆ. ಒಂದೊಂದು ಕಾರ್ಪೋರೇಷನ್ ಗೆ ಒಬ್ಬ ಆಯುಕ್ತ ಇರಲಿದ್ದಾರೆ. ಜಲಮಂಡಳಿ, ಬಿಡಿಎ, ಬೆಸ್ಕಾಂ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬರಲಿದೆ. ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಕೇಂದ್ರ ಸೇರಿದಂತೆ ಇನ್ನಷ್ಟು ಬಿಬಿಎಂಪಿ ಆಗಿ ವಿಂಗಡಣೆ ಮಾಡಲಾಗುತ್ತದೆ.

Tap to resize

Latest Videos

ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ; ಡಿಕೆಶಿ ನಿಯೋಗದಿಂದ ಸಿಎಂಗೆ ಪತ್ರ

ಗ್ರೇಟರ್ ಬೆಂಗಳೂರು ವ್ಯಾಪ್ತಿ ಎಲ್ಲಿಯವರೆಗೆ?: ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ರಾಮನಗರ, ಕನಕಪುರ, ಆನೆಕಲ್, ಬೆಂಗಳೂರು ಗ್ರಾಮಾಂತರ ಪ್ರದೇಶಗಳು ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ಬರಲಿದ.ೆ ದಿ ಗ್ರೇಟರ್ ಬೆಂಗಳೂರು ಗೌವರ್ನೆನ್ಸ್ ಬಿಲ್ - 2024 ಗೆ ಕ್ಯಾಬಿನೆಟ್ ಅನುಮೋದನೆ ಸಿಕ್ಕಿದ್ದಯ, ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿ ವಿವಿಧ ಹಂತದಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡಲಾಗುತ್ತದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿ ಸಿಟಿ ಕಾರ್ಪೊರೇಷನ್ ಗಳು ಬರಲಿದೆ.

ಗ್ರೇಟರ್‌ ಬೆಂಗಳೂರಾಗಲಿರುವ ತುಮಕೂರು ಹೂಡಿಕೆದಾರರ ಆಕರ್ಷಣೆ ಕೇಂದ್ರವಾಗಬೇಕು: ಸಚಿವ ಪರಮೇಶ್ವರ್

click me!