ವಾಸ್ಕೋ-ಯಶವಂತಪುರ ಕೋವಿಡ್ ಸ್ಪೆಷಲ್ ಗಾಡಿಯನ್ನು ಬೆಂಗಳೂರುವರೆಗೆ ಮೆಜೆಸ್ಟಿಕ್‌ವರೆಗೆ ವಿಸ್ತರಿಸಿದಲ್ಲಿ ಜನತೆಗೆ ಸಾಕಷ್ಟು ಅನುಕೂಲವಾಗುವುದೆಂದು ಮನವಿ ಮಾಡಲಾಗಿದೆ.
ದಾವಣಗೆರೆ (ಮಾ.19): ವಾಸ್ಕೋ-ಯಶವಂತಪುರ ಕೋವಿಡ್ ಸ್ಪೆಷಲ್ ಗಾಡಿಯನ್ನು ಬೆಂಗಳೂರುವರೆಗೆ ಮೆಜೆಸ್ಟಿಕ್‌ವರೆಗೆ ವಿಸ್ತರಿಸಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಆಗಿ ಪರಿವರ್ತಿಸಿದರೆ ದಾವಣಗೆರೆ ಹಾಗೂ ಹರಿಹರದ ರೈಲು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ರೈಲ್ವೆ ಬೋರ್ಡ್ ಚೇರ್ಮನ್ ಅವರಿಗೆ ಮನವಿ ಮಾಡಿದ್ದಾರೆ.
ಗೋವಾಗೆ ಯಶವಂತಪುರದಿಂದ ಡೈರೆಕ್ಟ್ ಟ್ರೈನ್, ಇಲ್ಲಿವೆ ಫೋಟೋಸ್ ..
ಈಗ ಹಾಲಿಯಲ್ಲಿ ಬೆಂಗಳೂರು ನಿಲ್ದಾಣದಿಂದ ಪ್ರಸ್ತುತ ಕೇರಳ ಮೂಲದ ಕೆಲವು ರೈಲು ಗಾಡಿಗಳನ್ನು ಬಾಣಸವಾಡಿ ಹಾಗೂ ಬೈಯಪ್ಪನಹಳ್ಳಿಗೆ ವಿಸ್ತರಣೆ ಮಾಡಲಾಗಿದೆ.
ಹಾಗೆ ನಮ್ಮ ವಾಸ್ಕೋ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಗಾಡಿ ಬೆಂಗಳೂರುವರೆಗೆ ವಿಸ್ತರಣೆ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.