ಬಿಎಸ್‌ವೈ ಬದಲಾವಣೆ : ಸ್ವಾಮೀಜಿಗಳಿಂದ ಬಿಜೆಪಿ ಹೈ ಕಮಾಂಡ್‌ಗೆ ಖಡಕ್ ಸಂದೇಶ

Suvarna News   | Asianet News
Published : Jul 20, 2021, 11:12 AM IST
ಬಿಎಸ್‌ವೈ ಬದಲಾವಣೆ : ಸ್ವಾಮೀಜಿಗಳಿಂದ ಬಿಜೆಪಿ ಹೈ ಕಮಾಂಡ್‌ಗೆ ಖಡಕ್ ಸಂದೇಶ

ಸಾರಾಂಶ

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮುರುಘಾ ಶರಣರು ಬಿಎಸ್ ವೈ ಬೆನ್ನಿಗೆ ನಿಂತಿದ್ದಾರೆ. 

 ಚಿತ್ರದುರ್ಗ (ಜು.20): ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮುರುಘಾ ಶರಣರು ಬಿಎಸ್ ವೈ ಬೆನ್ನಿಗೆ ನಿಂತಿದ್ದಾರೆ. 

ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರು ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಬೆಂಬಲ ನೀಡಿದ್ದಾರೆ.  ಬಿಜೆಪಿ ಹೈಕಮಾಂಡ್ ಗೆ ಮುರುಘಾ ಶರಣರಿಂದ ಖಡಕ್ ಸಂದೇಶ ರವಾನಿಸಿದ್ದಾರೆ. 

ಸಿಎಂ ಬದಲಾವಣೆ ಕೂಗಿನ ನಡುವೆ ಮಿತ್ರ ಮಂಡಳಿ ಫುಲ್ ಅಲರ್ಟ್!

ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ ವ್ಯಕ್ತಿ ಬಿಎಸ್ ವೈ ದಕ್ಷಿಣ ಭಾರತದಲ್ಲಿ ಸರ್ಕಾರವನ್ನು ರಚಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೇರ ನುಡಿ, ಧೀರ ನಡೆಗೆ ಹೆಸರಾದವರು ಬಿ.ಎಸ್ ಯಡಿಯೂರಪ್ಪ.  ಪ್ರತೀ ಚುನಾವಣೆಯು ಅವರ ಮುಂದಾಳತ್ವದಲ್ಲಿ ನಡೆದಿದ್ದು ಪಕ್ಷಕ್ಕೆ ಅವರ ಶ್ರಮ ಅಪಾರವಾದುದು.  ರಾಜ್ಯಕ್ಕೆ ತಮ್ಮದೇ ಆದ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ ಎಂದಿದ್ದಾರೆ.

ಮೇಧಾವಿ-ಮುತ್ಸದ್ದಿಯನ್ನು ಅಲಕ್ಷಿಸುವುದರಿಂದ ಮುಂದೆ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ. ಅವರನ್ನು ಗೌರವದಿಂದ ನಡೆಸಿಕೊಳ್ಳುವುದು ಸೂಕ್ತ. ಇಂತಹ ಸಮಯದಲ್ಲಿ ನಾಯಕತ್ವ ಬದಲಾವಣೆ ಸಮಂಜಸವಲ್ಲ ಎಂದು ಬಿಜೆಪಿ ಹೈಕಮಾಂಡ್ ಗೆ ಖಡಕ್ ಸಂದೇಶ ರವಾನಿಸಿದ್ದಾರೆ. 

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ