ಕಲಬುರಗಿ (ಜು.20): ಭೀಕರ ಅಪಘಾತದಲ್ಲಿ ನಾಲ್ವರು ದುರ್ಮರಣಕ್ಕೀಡಾದ ಘಟನೆ ಕಲಬುರಗಿ ಜಿಲ್ಲೆಯಲ್ಲಿಂದು ನಡೆದಿದೆ.
ಕಲಬುರಗಿಯ ಹೊರವಲಯದ ಕೋಟನೂರ ಬಳಿ ಕಾರ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಕಾರ್ ನಲ್ಲಿದ್ದ ನಾಲ್ವರು ಸ್ನೇಹಿತರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ
.ಚಿಕ್ಕೋಡಿ: ಮೊಬೈಲ್ ಟವರ್‌ಗೆ ನೇಣು ಬಿಗಿದು ಆತ್ಮಹತ್ಯೆ
ಇಂದು ನಸುಕಿನ 1 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಕಲಬುರಗಿಯಿಂದ ಜೇವರ್ಗಿ ಕಡೆ ಹೊರಟಿದ್ದ ಲಾರಿ ಎದುರಿನಿಂದ ಬರುತ್ತಿದ್ದ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಉಲ್ಲಾಸ್ (28), ರಾಹುಲ್ (24), ಕಾಶಿಂ (26) ಮೃತ ದುರ್ದೈವಿಗಳು, ಇನ್ನೋರ್ವನ ಗುರುತು ಇನ್ನಷ್ಟೆ ಪತ್ತೆಯಾಗಬೇಕಿದೆ.
ಗಂಭೀರ ಗಾಯಗೊಂಡ ಯುವಕನನ್ನ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಲಬುರಗಿಯ ಸಂಚಾರಿ ಪೊಲೀಸ್ ಠಾಣೆ 2ರಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.