
ಬೆಂಗಳೂರು (ಆ.25): ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವ ಸರ್ಕಾರದ ನಿರ್ಧಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ರಾಜಕಾರಣಿಗಳು ಸರ್ಕಾರದ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ಆಗ್ರಹಿಸಿದ್ದಾರೆ. ಇದರ ನಡುವೆ ಕನ್ನಡ ಭುವನೇಶ್ವರಿ ಕುರಿತುವ ಅವರು ಆಡಿರುವ ಮಾತುಗಳು ವೈರಲ್ ಆಗುತ್ತಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಕೂಡ ಸರ್ಕಾರದ ನಿರ್ಧಾರವನ್ನು ಪ್ರಶ್ನೆ ಮಾಡಿದ್ದು, ಹೇಗಿದ್ದರೂ ಭಾನು ಮುಷ್ತಾಕ್ ಅವರು ಜಾತ್ಯಾತೀತರಲ್ಲವೆ. ತಲೆಗೆ ಹೂವು ಮುಡಿದು ಹಣೆಗೆ ಕುಂಕುಮ ಧರಿಸಿ ದಸರಾ ಕಾರ್ಯಕ್ರಮ ಉದ್ಘಾಟಿಸಲು ಎಂದು ಸವಾಲು ಎಸೆದಿದ್ದಾರೆ.
ಭಾನು ಮುಷ್ತಾಕ್ ಅವರು ನಮ್ಮ ನೆಲದ ಮಗಳು ಅದರ ಬಗ್ಗೆ ಅನುಮಾನವಿಲ್ಲ. ಆದರೆ, ದಸರಾ ಸಂಭ್ರಮವೇ ಬೇರೆ. ಭಾನು ಮುಷ್ತಾಕ್ ಹಣೆಗೆ ಕುಂಕುಮ ತಲೆಗೆ ಹೂವು ಮುಡಿದು ಉದ್ಘಾಟನೆ ಮಾಡಲಿ. ಹೇಗಿದ್ದರೂ ಜಾತ್ಯಾತೀತರಲ್ಲವೆ. ಹಿಂದು ಧರ್ಮದ ಹಬ್ಬ ಇದು. ಹೀಗಾಗಿ ಕುಂಕುಮ, ಹೂವು ಮುಡಿದು ಕಾರ್ಯಕ್ರಮ ಉದ್ಘಾಟಿಸಲು ಎಂದಿದ್ದಾರೆ.
ಧರ್ಮಸ್ಥಳದ ಮೇಲೆ ಷಡ್ಯಂತರ ಮಾಡ್ತಾ ಇರೋರೆಲ್ಲಾ ಸಮೀರ್‌ನ ಅಪ್ಪನ ಮಕ್ಕಳು. ಸಮೀರನ ಅಪ್ಪನ ಮಕ್ಕಳು ಧರ್ಮಸ್ಥಳವನ್ನು ಮೆಕ್ಕಾ ಮಾಡಲು ಪ್ಲಾನ್ ಮಾಡಿದ್ದರು. ವೀರೇಂದ್ರ ಹೆಗ್ಗಡೆ ಜೈನ್ ಅಂತಿರಲ್ಲ. ಅವರು ಸತ್ತಾಗಲೂ ಚಿತೆಯನ್ನೆ ಏರೋದು. ನಮ್ಮ ಹಿಂದುಗಳಲ್ಲಿ ಎರಡು ವಿಧ. ಒಂದು ಹೆಣ ಹೂಳೋದು ಇನ್ನೊಂದು ಚಿತೆ. ಹೀಗಾಗಿ ಹೆಗ್ಗಡೆಯವರು ಕೂಡ ನಮ್ಮ ಹಿಂದೂನೇ ಎಂದು ಹೇಳಿದ್ದಾರೆ.
ಸುಜಾತಾ ಭಟ್ ಒಳ್ಳೆಯ ಕಲಾವಿದೆ. ಅವರು ಮೊದಲೆ ಸಿಕ್ಕಿದ್ರೆ ಒಳ್ಳೆಯ ಪಾತ್ರ ನೀಡಬಹುದಿತ್ತು. ಅವರು ಬೆಸ್ಟ್ ಆಕ್ಟರ್. ನಾನು ಒಬ್ಬ ನಿರ್ಮಾಪಕನಾಗಿ ಹೇಳ್ತಿದ್ದೇನೆ. ಅವರು ಒಳ್ಳೆಯ ನಟಿ. ನಮ್ಮ ಸಿನಿಮಾದಲ್ಲಿ ಸಹ ಕಲಾವಿದರ ಕೊರತೆ ಇದೆ. ಸುಜಾತಾ ಭಟ್ ನೈಜವಾಗಿ ಆಕ್ಟ್ ಮಾಡ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಇದನ್ನು ಈಗ ಷಡ್ಯಂತರ ಎಂದು ಈಗ ಹೇಳ್ತಾರೆ. ಮೊದಲೆ ಯಾಕೆ ಇದನ್ನು ಹೇಳಿಲ್ಲ. ಯಾಕೆ ಅನಾಮಿಕನ ವಿಚಾರಣೆ ಮಾಡಿಲ್ಲ ಎಂದು ಮುನಿರತ್ನ ಪ್ರಶ್ನೆ ಮಾಡಿದ್ದಾರೆ.