Manhole Tragedy in Mysuru : ಉಸಿರುಗಟ್ಟಿ ಪೌರಕಾಮಿರ್ಕ ಸಾವು : ಪರಿಹಾರಕ್ಕೆ ಒತ್ತಾಯ

By Kannadaprabha News  |  First Published Dec 20, 2021, 2:36 PM IST
  • ಮ್ಯಾನ್ ಹೋಲ್ ಸ್ವಚ್ಛತೆಗೆ ಇಳಿದು ಅಸ್ವಸ್ಥನಾಗಿದ್ದ ಪೌರ ಕಾರ್ಮಿಕ ಸಾವು
  •  ಪಿರಿಯಾಪಟ್ಟಣದ ವಾರ್ಡ್ ನಂ.10ರಲ್ಲಿ ಮ್ಯಾನ್ ಹೋಲ್ ಸ್ವಚ್ಚತೆಗೆ ಇಳಿದಿದ್ದ  ಪೌರಕಾರ್ಮಿಕ

  ಮೈಸೂರು (ಡಿ.20):  ಮ್ಯಾನ್ ಹೋಲ್ (Manhole) ಸ್ವಚ್ಛತೆಗೆ ಇಳಿದು ಅಸ್ವಸ್ಥನಾಗಿದ್ದ ಪೌರ ಕಾರ್ಮಿಕ (Municipality Worker ಸಾವನ್ನಪ್ಪಿದ್ದು  ಪಿರಿಯಾ ಪಟ್ಟಣದ ವಾರ್ಡ್ ನಂ.10ರಲ್ಲಿ ಮ್ಯಾನ್ ಹೋಲ್ ಸ್ವಚ್ಚತೆಗೆ ಪೌರಕಾರ್ಮಿಕ ಇಳಿದಿದ್ದ ವೇಳೆ ಅಸ್ವಸ್ಥನಾಗಿದ್ದರು.   ಮ್ಯಾನ್ ಹೋಲ್ ನಲ್ಲಿ ಉಸಿರುಗಟ್ಟಿ ಅಸ್ವಸ್ಥರಾಗಿದ್ದ ಪೌರಕಾರ್ಮಿಕ ಮಧು(27)  ಅರವನ್ನು  ಮೈಸೂರಿನ ಖಾಸಗಿ ಆಸ್ಪತ್ರೆಗೆ (Hospital) ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ  ಮಧು ಇಂದು ಮೃತಪಟ್ಟಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಪೌರಕಾರ್ಮಿಕ ಮಧು ಅವರ ಮೃತ ದೇಹವನ್ನು  ಜಿಲ್ಲಾಧಿಕಾರಿ ಕಚೇರಿ (DC Office) ಮುಂದೆ ತಂದು ಪ್ರತಿಭಟನೆ (Protest) ನಡೆಸಲಾಗಿದೆ.  ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು,  ಬಲವಂತವಾಗಿ ಪೌರಕಾರ್ಮಿಕರನ್ನ ಮ್ಯಾನ್ ಹೋಲ್ ಗೆ ಇಳಿಸಲಾಗಿದೆ ಎಂದು ಆರೋಪಿಸಲಾಗಿದೆ. 

Tap to resize

Latest Videos

ಈ ರೀತಿ ಅಮಾನವೀಯವಾಗಿ ನಡೆದುಕೊಂಡ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.  ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಪೌರಕಾರ್ಮಿಕ ಸಾವನ್ನಪ್ಪಿದ್ದು,  ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಲಾಗಿದೆ.  ಆಂಬ್ಯುಲೆನ್ಸ್ ನಲ್ಲಿ ಶವ ತಂದು ತೀವ್ರ  ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. 

ಕರೆಂಟ್ ಶಾಕ್‌ಗೆ ಬಲಿ : 

ದಂಪತಿಗಳು ದಾರುಣ ಅಂತ್ಯ ಕಂಡಿದ್ದಾರೆ. ಆಕಸ್ಮಿಕವಾಗಿ ವಿದ್ಯುತ್ (Electrocution) ಶಾಕ್ ತಗುಲಿ   ಸಂಗಾರೆಡ್ಡಿ ಜಿಲ್ಲೆಯ ಫಾರ್ಮ್‌ಹೌಸ್‌ನಲ್ಲಿ ದಂಪತಿ (Couple) ಸಾವನ್ನಪ್ಪಿದ್ದಾರೆ. ಮೃತರನ್ನು ಆಂಧ್ರಪ್ರದೇಶ (Andhra Pradesh)ಮೂಲದ ಶ್ರೀನಿವಾಸ್ (46) ಮತ್ತು ದೇವಿ (38) ಎಂದು ಗುರುತಿಸಲಾಗಿದೆ.  ಕೃಷಿ (Agriculture) ಕೆಲಸ ಮಾಡಿಕೊಂಡಿದ್ದ ದಂಪತಿ ಸಾವು ಕಂಡಿದ್ದಾರೆ

ಶನಿವಾರ ಸಂಜೆ  ಶ್ರೀನಿವಾಸ್ ಕರೆಂಟ್ ಸ್ವಿಚ್ ಆನ್ ಮಾಡಲು ಮುಂದಾದಾಗ ಶಾಕ್ ತಗುಲಿದೆ.  ಗಂಡನ ಉಳಿಸಲು ಹೋದ ಪತ್ನಿ ಸಹ ದಾರುಣ ಅಂತ್ಯ ಕಂಡಿದ್ದಾರೆ.  ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು ಭಾನುವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ದಂಪತಿಗೆ ಮೂವರು ಮಕ್ಕಳಿದ್ದು ತಂದೆ-ತಾಯಿಯನ್ನು ಕಳೆದುಕೊಂಡಿದ್ದಾರೆ.

ಆತ್ಮಹತ್ಯೆ ಯತ್ನ : 

ಸುಂಕದಕಟ್ಟೆ ಸಮೀಪ ತಮ್ಮ ಕುಟುಂಬಕ್ಕೆ ಸೇರಿದ ನಿವೇಶನವನ್ನು ಅಕ್ರಮವಾಗಿ ಕಬಳಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಲೋಕಾಯುಕ್ತ(Lokayukta) ಕೇಂದ್ರ ಕಚೇರಿ ಪ್ರವೇಶದ್ವಾರದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ(Suicide) ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಜಾರ್ಪುರ ರಸ್ತೆಯ ಅರಸಪ್ಪ ಲೇಔಟ್‌ ನಿವಾಸಿ ಮಂಜುನಾಥ್‌(32) ಆತ್ಮಹತ್ಯೆ ಯತ್ನಿಸಿದ್ದು, ಗುರುವಾರ ಈ ದುರ್ಘಟನೆ ಸಂಭವಿಸಿದೆ. ಬೌರಿಂಗ್‌ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಮಂಜುನಾಥ್‌ ಚಿಕಿತ್ಸೆ(Treatment) ಪಡೆಯುತ್ತಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅರಸಪ್ಪ ಲೇಔಟ್‌ಲ್ಲಿ ತಮ್ಮ ತಾಯಿ ಮತ್ತು ಸೋದರಿ ಜತೆ ಮಂಜುನಾಥ್‌ ನೆಲೆಸಿದ್ದಾರೆ. ಹತ್ತು ವರ್ಷಗಳ ಹಿಂದೆ ಅವರ ತಂದೆ ಮೃತಪಟ್ಟಿದ್ದರು. ಆದರೆ ಅವರ ತಂದೆ ಸಾವಿನ ಬಳಿಕ ಸುಂಕದಕಟ್ಟೆಯಲ್ಲಿದ್ದ ನಿವೇಶನವನ್ನು(Site) ಕೇಶವ ಎಂಬಾತನಿಗೆ 50 ಸಾವಿರಕ್ಕೆ ಮಂಜುನಾಥ್‌ ತಂದೆ ಅಡಮಾನ ಮಾಡಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಮಂಜುನಾಥನ ತಂದೆ ಸಾವಿನ ವಿಷಯ ಗೊತ್ತಾಗಿ ಕೇಶವ, ಆ ನಿವೇಶನವನ್ನು ಸ್ವಾಧೀನಪಡಿಸಿಕೊಂಡಿದ್ದ. ಈ ಬೆಳವಣಿಗೆಯಿಂದ ಮಂಜುನಾಥ್‌ ಬೇಸರವಾಗಿತ್ತು ಎಂದು ಪೊಲೀಸರು(Police) ಹೇಳಿದ್ದಾರೆ.

Bengaluru Crime News : ಅಂಗವಿಕಲ ಮಗನ ಸಂಪಿಗೆ ಎಸೆದು ಕೊಂದು ತಂದೆ ಆತ್ಮಹತ್ಯೆ

ತಮ್ಮ ತಂದೆ ಯಾರ ಬಳಿಯೂ ಸಾಲ ಮಾಡಿಲ್ಲ. ಸುಳ್ಳು ದಾಖಲೆ(Duplicate Records) ಸೃಷ್ಟಿಸಿ ನಮ್ಮ ನಿವೇಶನ ಖರೀದಿಸಿದ್ದಾರೆ ಎಂದು ಮಂಜುನಾಥ್‌ ಆರೋಪಿಸಿದ್ದರು. ಈ ಸಂಬಂಧ ಲೋಕಾಯುಕ್ತರಿಗೆ ದೂರು ನೀಡುವ ಸಲುವಾಗಿ ಗುರುವಾರ ಬಂದಿದ್ದ. ಆದರೆ ಆ ವೇಳೆಗಾಗಲೇ ವಿಷ ಸೇವಿಸಿದ್ದ ಮಂಜುನಾಥ್‌, ಲೋಕಾಯುಕ್ತ ಕಚೇರಿಯ ಪ್ರವೇಶ ದ್ವಾರದಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆತನ ರಕ್ಷಣೆಗೆ ಧಾವಿಸಿದ ಭದ್ರತಾ ಸಿಬ್ಬಂದಿ, ಕೂಡಲೇ ಲೋಕಾಯುಕ್ತ ಕಚೇರಿಯ ವಾಹನದಲ್ಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಚಿಕಿತ್ಸೆಗೆ ಮಂಜುನಾಥ್‌ ಸ್ಪಂದಿಸುತ್ತಿದ್ದು, ಆತನ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿಧಾನಸೌಧ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

ಲೋಕಾಯುಕ್ತರಿಗೆ ದೂರು ಹಸ್ತಾಂತರ

ಪ್ರವೇಶ ದ್ವಾರದಲ್ಲೇ ಕುಸಿದು ಬಿದ್ದ ಮಂಜುನಾಥ್‌ ಕೈಯಲ್ಲಿದ್ದ ಲೋಕಾಯುಕ್ತರಿಗೆ ಉಲ್ಲೇಖಿಸಿ ಬರೆಯಲಾದ ದೂರನ್ನು ಪಡೆದ ಸಿಬ್ಬಂದಿ, ಬಳಿಕ ಆ ದೂರನ್ನು ಲೋಕಾಯುಕ್ತರಿಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ನಿವೇಶನ ವಿವಾದ ಸಂಬಂಧ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸುವ ಬರುವ ಮುನ್ನವೇ ಮಂಜುನಾಥ್‌ ವಿಷ ಸೇವಿಸಿದ್ದಾನೆ. ತಾನು ಮೃತಪಟ್ಟರೆ ನಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿರುವ ಕೇಶವನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆತ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳು ಹೇಳಿವೆ.

Religious Conversion in Mangalore: ಮತಾಂತರ ಭೀತಿಯಿಂದ ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ!

ಸ್ಯಾನಿಟೈಸರ್‌ ಸೇವನೆ?

ನಿವೇಶನ ವಿವಾದದಿಂದ ಜಿಗುಪ್ಸೆಗೊಂಡು ಸ್ಯಾನಿಟೈಸರ್‌(Sanitizer) ಸೇವಿಸಿ ಮಂಜುನಾಥ್‌ ಆತ್ಮಹತ್ಯೆ ಯತ್ನಿಸಿದ್ದಾನೆ. ಆತನ ತಪಾಸಣೆ ನಡೆಸಿದ ವೈದ್ಯರು, ಮಂಜುನಾಥ್‌ ಸ್ಯಾನಿಟೈಸರ್‌ ಸೇವಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬದುಕಿನ ಜಂಜಾಟದಿಂದ ಬೇಸತ್ತು ಕತ್ತು ಕೊಯ್ದುಕೊಂಡು ಆತ್ಮಹತ್ಯೆ

ಬೆಂಗಳೂರು(Bengaluru):  ಜೀವನದಲ್ಲಿ ಜಿಗುಪ್ಸೆಗೊಂಡ ಗಾರ್ಮೆಂಟ್ಸ್‌ ನೌಕರನೊಬ್ಬ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಡಿ.18 ರಂದು ಪೀಣ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಸಿದ್ಧಾರ್ಥ ನಗರದ ನಿವಾಸಿ ಮೋಹನ್‌ ಕುಮಾರ್‌ (29) ಮೃತ ದುರ್ದೈವಿ. ಸಿದ್ಧಾರ್ಥ ನಗರದ ಸಮೀಪ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಮೃತದೇಹ(Deadbody) ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲಿಸಿದಾಗ ಮೃತನ ಗುರುತು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

click me!