ಕಾಮಗಾರಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಶರ್ಟ್ ಹರಿದ ಪೌರಾಯುಕ್ತ: ಆರೋಪ

Published : Feb 12, 2023, 06:16 AM IST
ಕಾಮಗಾರಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಶರ್ಟ್ ಹರಿದ ಪೌರಾಯುಕ್ತ: ಆರೋಪ

ಸಾರಾಂಶ

ಇಲ್ಲಿನ ಕಡವಾಡದಲ್ಲಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಗರಸಭೆಯಿಂದ ಜೆಸಿಬಿ ಮೂಲಕ ಕಾಮಗಾರಿ ನಡೆಸುತ್ತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ತಮ್ಮ ಮೊಬೈಲ್‌ ಕಸಿದುಕೊಂಡ ಪೌರಾಯುಕ್ತ ಆರ್‌.ಪಿ.ನಾಯ್ಕ ಶರ್ಚ್‌ ಹರಿದಿದ್ದಾರೆ ಎಂದು ಕಡವಾಡ ಗ್ರಾಮಸ್ಥ ಪ್ರಸಾದ ಭೋವಿ ದೂರಿದರು.

ಕಾರವಾರ (ಫೆ.12) : ಇಲ್ಲಿನ ಕಡವಾಡದಲ್ಲಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಗರಸಭೆಯಿಂದ ಜೆಸಿಬಿ ಮೂಲಕ ಕಾಮಗಾರಿ ನಡೆಸುತ್ತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ತಮ್ಮ ಮೊಬೈಲ್‌ ಕಸಿದುಕೊಂಡ ಪೌರಾಯುಕ್ತ ಆರ್‌.ಪಿ.ನಾಯ್ಕ ಶರ್ಚ್‌ ಹರಿದಿದ್ದಾರೆ ಎಂದು ಕಡವಾಡ ಗ್ರಾಮಸ್ಥ ಪ್ರಸಾದ ಭೋವಿ(Prasad bhovi) ದೂರಿದರು.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡವಾಡ(Kadwad)ದ ಕಾಳಿ ನದಿಯಂಚಿನ ಒಂದು ಎಕರೆ ಪ್ರದೇಶÜ ಪರಿಸರ ಸೂಕ್ಷ್ಮವಾಗಿದೆ. ಅಲ್ಲಿ ಯಾವುದೇ ರೀತಿ ಕೆಲಸ ಮಾಡಬಾರದೆಂದು ತಾಲೂಕು ಆಡಳಿತ ತಿಳಿಸಿತ್ತು. ಆದರೆ ಸ್ವಚ್ಛತೆ ನೆಪದಲ್ಲಿ ಜೆಸಿಬಿ ತಂದು ನಗರಸಭೆಯಿಂದ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಪೌರಾಯುಕ್ತರಿಗೆ ಪ್ರಶ್ನಿಸಿದ್ದಕ್ಕೆ ತಮ್ಮ ಮೊಬೈಲ್‌ ಕಸಿದು, ಅಂಗಿ ಹಿಡಿದು ಎಳೆದಾಡಿ ಹರಿದಿದ್ದಾರೆ. ಈ ಬಗ್ಗೆ ಪೊಲೀಸ್‌ ದೂರು ನೀಡಲಾಗಿದೆ ಎಂದರು.

ಮೈಮೇಲೆ ಉಗಿದಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವತಿಯ ಮುಖಕ್ಕೆ ಚಾಕುವಿನಿಂದ ಇರಿದ ಪಾಪಿ

ಈ ಪ್ರದೇಶದಲ್ಲಿ ಸ್ವಚ್ಛತೆ ಮಾಡುತ್ತಿದ್ದೇವೆಂದು ಪೌರಾಯುಕ್ತರು ಹೇಳಿದ್ದಾರೆ. ಆದರೆ ಸ್ವಚ್ಛತೆಗೆ ಜೆಸಿಬಿ ತರುವಂಥ ಅವಶ್ಯಕತೆ ಇರಲಿಲ್ಲ. ಕಾರ್ಮಿಕರನ್ನು ಕರೆಸಿ ಸ್ವಚ್ಛತೆ ಮಾಡಬಹುದಿತ್ತು ಎಂದರು.

ಕೆಆರ್‌ಎಸ್‌ ಪಕ್ಷದ ಜಿಲ್ಲಾ ಸಂಚಾಲಕ ವಿನಾಯಕ ನಾಯ್ಕ ಮಾತನಾಡಿ, ಪ್ರಸಾದ ಭೋವಿ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಅಧಿಕಾರಿ ಮೊಬೈಲ್‌ ಕಸಿದು ಹಲ್ಲೆ ಮಾಡಲು ಮುಂದಾಗಿದ್ದಾರೆ. ಆ ಅಧಿಕಾರಿ ಕರ್ತವ್ಯದ ಸಮಯದಲ್ಲಿ ಗುರುತಿನ ಚೀಟಿ ಧರಿಸಿರಲಿಲ್ಲ. ಸಾರ್ವಜನಿಕರ ಮೇಲೆ ಹಲ್ಲೆ ಮಾಡುವ ಮನಸ್ಥಿತಿ ಖಂಡನೀಯ. ಘಟನೆ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುತ್ತೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಿತ್ಯಾನಂದ ಉಳ್ವೇಕರ್‌, ಅನಿತಾ ಹರಿಕಂತ್ರ ಇದ್ದರು.

ನಗರಸಭೆ ಪೌರಾಯುಕ್ತರ ಸ್ಪಷ್ಟನೆ

ಕಡವಾಡದ ಒಂದು ಎಕರೆ ಪ್ರದೇಶ ಪರಿಸರ ಸೂಕ್ಷ್ಮ ವಲಯ ಆಗಿರಬಹುದು. ಆದರೆ ನಾವು ಕಾಮಗಾರಿ ಮಾಡಲು ಹೋಗಿಲ್ಲ. ಸ್ವಚ್ಛತೆ ಮಾಡಲು ಹೋಗಲಾಗಿತ್ತು ಎಂದು ನಗರಸಭೆ ಪೌರಾಯುಕ್ತ ಆರ್‌.ಪಿ.ನಾಯ್ಕ ಸ್ಪಷ್ಟಪಡಿಸಿದ್ದಾರೆ.

ಓವರ್‌ ಟೇಕ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕಾರು ಹತ್ತಿಸಿದ ತಂದೆ-ಮಗ

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಪ್ರಸಾದ ವಿಡಿಯೋ ಮಾಡುತ್ತಲೇ ತಮ್ಮನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸೇತುವೆ ಬಳಿ ಇರುವ ಕಲ್ಲು, ಮಣ್ಣು ಸ್ಥಳಾಂತರ ಮಾಡುತ್ತಿದ್ದೇವೆ ಎಂದು ಹೇಳಿದ್ದೇವೆ. ನಿಲ್ಲಿಸಲು ಅವರಿಗೆ ಯಾರು ಅಧಿಕಾರ ನೀಡಿದ್ದಾರೆ? ಪರಿಸರ ಇಲಾಖೆಗೆ ದೂರು ನೀಡಬಹುದಲ್ಲವೇ? ಮಾಹಿತಿ ನೀಡಿದ ಬಳಿಕವೂ ಸರ್ಕಾರಿ ಕೆಲಸಕ್ಕೆ ತೊಂದರೆ ನೀಡಿದ್ದಾರೆ. ತಮ್ಮ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಅದರ ಅವಶ್ಯಕತೆ ಏನಿದೆ? ಇದಕ್ಕಾಗಿ ಮೊಬೈಲ್‌ ಕಿತ್ತುಕೊಂಡು ವಾಪಸ್‌ ನೀಡಿದ್ದೇವೆ. ಹಲ್ಲೆ ಮಾಡಿಲ್ಲ. ಪೊಲೀಸ್‌ ದೂರು ಕೂಡ ತಾವು ನೀಡಿದ್ದು, ಸ್ವಚ್ಛತೆ ಮಾಡುತ್ತಿದ್ದ ಪ್ರದೇಶ ನಗರಸಭಾ ವ್ಯಾಪ್ತಿಯಲ್ಲಿದೆ ಎಂದು ಸ್ಪಷ್ಟಪಡಿಸಿದರು.

PREV
Read more Articles on
click me!

Recommended Stories

ಬೆಂಗಳೂರು : ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ
ನಗರ ವಿವಿ ಎಡವಟ್ಟು: 400 ಎಂಕಾಂ ಸ್ಟೂಡೆಂಟ್ಸ್ ಫೇಲ್‌!