ಪಾವಗಡದ ಕೆ.ರಾಮಪುರ ನಿಲ್ದಾಣಕ್ಕೆ ಪ್ಯಾಸೆಂಜರ್‌ ರೈಲು

By Kannadaprabha News  |  First Published Feb 12, 2023, 6:01 AM IST

ತುಮಕೂರು-ರಾಯದುರ್ಗ ರೈಲ್ವೆ ಮಾರ್ಗ ಪಾವಗಡದವರೆಗೆ ಪೂರ್ಣಗೊಂಡ ಹಿನ್ನಲೆಯಲ್ಲಿ ಶನಿವಾರ ತಾಲೂಕಿನ ಕೆ.ರಾಮಪುರ ನಿಲ್ದಾಣಕ್ಕೆ ಪ್ಯಾಸೆಂಜರ್‌ ರೈಲು ಆಗಮಿಸಿದ್ದು, ಸುತ್ತಮುತ್ತ ಗ್ರಾಮಗಳ ಸಾರ್ವಜನಿಕರಲ್ಲಿ ಸಂತಸ, ಸಂಭ್ರಮ ವ್ಯಕ್ತವಾಗಿದೆ.


  ಪಾವಗಡ :  ತುಮಕೂರು-ರಾಯದುರ್ಗ ರೈಲ್ವೆ ಮಾರ್ಗ ಪಾವಗಡದವರೆಗೆ ಪೂರ್ಣಗೊಂಡ ಹಿನ್ನಲೆಯಲ್ಲಿ ಶನಿವಾರ ತಾಲೂಕಿನ ಕೆ.ರಾಮಪುರ ನಿಲ್ದಾಣಕ್ಕೆ ಪ್ಯಾಸೆಂಜರ್‌ ರೈಲು ಆಗಮಿಸಿದ್ದು, ಸುತ್ತಮುತ್ತ ಗ್ರಾಮಗಳ ಸಾರ್ವಜನಿಕರಲ್ಲಿ ಸಂತಸ, ಸಂಭ್ರಮ ವ್ಯಕ್ತವಾಗಿದೆ.

ಬಹು ನಿರೀಕ್ಷೆಯ ತುಮಕೂರು ಹಾಗೂ ಆಂಧ್ರದ ರಾಯದುರ್ಗ ಮಾರ್ಗ ಪ್ರಗತಿಯಲ್ಲಿದ್ದು ಪಾವಗಡ ತಾಲೂಕು ವ್ಯಾಪ್ತಿಯ ಮಾರ್ಗ ಪೂರ್ಣಗೊಂಡ ಪ್ರಯುಕ್ತ, 10 ಬೋಗಿಯುಳ್ಳ ಹುಬ್ಬಳಿ ವಿಭಾಗದ ಪ್ಯಾಸೆಂಜರ್‌ ರೈಲು ದೊಡ್ಡಹಳ್ಳಿ ಮೂಲಕ ಪಾವಗಡದ ಕೆ.ರಾಮಪುರ ಹನುಮನಬೆಟ್ಟನಿಲ್ದಾಣಕ್ಕೆ ಬರುತ್ತಿದ್ದಂತೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.

Tap to resize

Latest Videos

ಹುಬ್ಬಳಿ ನಿಲ್ದಾಣದಿಂದ ಕಲ್ಯಾಣದುರ್ಗದ ಮೂಲಕ ಬೆಳಗ್ಗೆ 10 ಗಂಟೆಗೆ ಆಂಧ್ರದ ಕದಿರಿದ್ಯಾವರಪಲ್ಲಿಗೆ ಆಗಮಿಸಿ, ಬಳಿಕ ಕಂಬದೂರಿನಿಂದ ತಾಲೂಕಿನ ದೊಡ್ಡಹಳ್ಳಿ ಮೂಲಕ 11 ಗಂಟೆಗೆ ತಾಲೂಕಿನ ಕೆ. ರಾಮಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿತ್ತು. ನಿಯಮನುಸಾರ ಆಧುನಿಕ ದೊಂದಿಗೆæ ಸುಮಾರು 50ಕ್ಕಿಂತ ಹೆಚ್ಚು ಅಧಿಕಾರಿಗಳು ವಿವಿಧ ಹಂತದಲ್ಲಿ ಪಾವಗಡ ರೈಲ್ವೆ ಮಾರ್ಗದ ಹಳಿಗಳ ಪರಿಶೀಲನೆ ನಡೆಸಿದರು.

ಮಧ್ಯಾಹ್ನ ಊಟದ ಬಳಿಕ 3 ಗಂಟೆಗೆ ರೈಲು ಹುಬ್ಬಳಿ ಕಡೆ ವಾಪಸ್ಸಾಗಿದ್ದು, ರೈಲ್ವೆ ಕಾಮಗಾರಿ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ನಾಮಫಲಕಕ್ಕೆ ವಿರೋಧ:

ಈ ವೇಳೆ ಕೆ.ರಾಮಪುರ ನಿಲ್ದಾಣದಲ್ಲಿ ದೊಡ್ಡಹಳ್ಳಿ ರೈಲ್ವೆ ನಿಲ್ದಾಣ ಎಂದು ನಾಮಫಲಕ ಬರೆಯಲು ಅಧಿಕಾರಿಗಳು ಮುಂದಾಗುತ್ತಿದ್ದಂತೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು, ದೊಡ್ಡಹಳ್ಳಿ ಬದಲಿಗೆ ಕೆ.ರಾಮಪುರ ರೈಲ್ವೆ ನಿಲ್ದಾಣ ಎಂದು ನಾಮಫಲಕ ಹಾಕಿ ಎಂದು ಒತ್ತಾಯಿಸಿದರು. ತಾಲೂಕಿನ ಕೆ.ರಾಮಪುರ ಸರ್ವೆ ನಂ ಹನುಮನಬೆಟ್ಟದ ಬಳಿ ರೈಲ್ವೆ ನಿಲ್ದಾಣ ನಿರ್ಮಿಸಿದ್ದು ಕಂದಾಯ ಇಲಾಖೆ ಪ್ರಕಾರ ನಮ್ಮ ಗ್ರಾಮದ ಸರ್ವೆ ನಂಬರಿನಲ್ಲಿ ದೊಡ್ಡಹಳ್ಳಿ ರೈಲ್ವೆ ನಿಲ್ದಾಣ ಎಂದು ನಾಮಕರಣಗೊಳಿಸಲು ನಾವು ಅವಕಾಶ ನೀಡುವುದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ರೈಲ್ವೆ ಇಲಾಖೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‌ರವರಿಗೆ ಅರ್ಜಿ ಸಲ್ಲಿಸಿದ್ದೇವೆ. ಹೀಗಾಗಿ ಕೆ.ರಾಮಪುರ ರೈಲ್ವೆ ನಿಲ್ದಾಣ ಎಂದು ನಾಮಕರಣ ಗೊಳಿಸಿ ಬೋರ್ಡ್‌ ಹಾಕುವಂತೆ ಸ್ಥಳೀಯ ಮುಖಂಡರಾದ ಆನಂದ್‌, ರಾಮಾಂಜಿನಮ್ಮ, ಗೋಪಿ, ಮಾಜಿ ಗ್ರಾಪಂ ಸದಸ್ಯ ರಮೇಶ್‌, ಬಿ.ರಮೇಶ್‌ ಹಾಗೂ ಹಲವರು ಒತ್ತಾಯಿಸಿದರು.

ಈ ವೇಳೆ ಹುಬ್ಬಳಿ ರೈಲ್ವೆ ವಿಭಾಗದ ಸಿಆರ್‌ಎಸ್‌ ಇನ್ಸ್‌ಪೆಕ್ಟರ್‌ ಕೆ.ಜಿ.ಅಭಯ…, ಗುಪ್ತರಾಯ…, ಸಿಇಒ ಹರ್ಷ, ಡಿಆರ್‌ ಎಂ ಪ್ರದೀಪ್‌ ಕುಮಾರ್‌, ಜಗದೀಶ್‌ ಸಾಯಿ ಹಾಗೂ 50ಕ್ಕೂ ಹೆಚ್ಚು ರೈಲ್ವೆ ವಿಭಾಗದ ಅಧಿಕಾರಿಗಳು ಹಾಗೂ ಸ್ಥಳೀಯ ಕೆ.ರಾಮಪುರ ಗ್ರಾಮದವರಾದ ಗ್ರಾಪಂ ಅಧ್ಯಕ್ಷ ದೇವೇಂದ್ರಪ್ಪ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

ರೈಲು ಸಂಚರಿಸಲು ಅಡ್ಡಿಯಿಲ್ಲ. ನಿಯಮಾನುಸಾರ ಕಾಮಗಾರಿ ನಿರ್ವಹಿಸಿದ್ದು ಮಾರ್ಗದ ಹಳಿಗಳು ಭದ್ರತೆಯಿಂದ ಕೂಡಿದೆ. ಸಮಸ್ಯೆ ಇರುವ ಕಡೆ ಪರಿಶೀಲಿಸಲಿದ್ದು, ಫೆಬ್ರವರಿ ಕೊನೆ ಹಾಗೂ ಮಾಚ್‌ರ್‍ ಮೊದಲನೇ ವಾರ ಗಣ್ಯರು ಹಾಗೂ ಇಲಾಖೆ ಹೆಚ್ಚುವರಿ ಅಧಿಕಾರಿಗಳಿಂದ ಹುಬ್ಬಳಿ ವಿಭಾಗದ ಪ್ಯಾಸೆಂಜರ್‌ ರೈಲು ಸಂಚಾರಕ್ಕೆ ಅಧಿಕೃತ ಚಾಲನೆ ನೀಡಲಾಗುವುದು.

ರೈಲ್ವೆ ಇಲಾಖೆ ಅಧಿಕಾರಿಗಳು

click me!