ಸದಾ ಕ್ಷೇತ್ರದ ಅಭಿವೃದ್ಧಿ, ಜನ ಸೇವೆಗೆ ಆದ್ಯತೆ : ಸಾ.ರಾ. ಮಹೇಶ್‌

By Kannadaprabha News  |  First Published Feb 12, 2023, 6:10 AM IST

ನನ್ನ ರಾಜಕೀಯ ಜೀವನದ ಅವಧಿಯಲ್ಲಿ ಸದಾ ಕ್ಷೇತ್ರದ ಅಭಿವೃದ್ಧಿ ಮತ್ತು ಜನ ಸೇವೆಗೆ ಆದ್ಯತೆ ನೀಡಿದ್ದು, ಇದನ್ನು ಅರಿತಿರುವ ಮತದಾರರು ನಿರಂತರವಾಗಿ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.


 ಕೆ.ಆರ್‌. ನಗರ : ನನ್ನ ರಾಜಕೀಯ ಜೀವನದ ಅವಧಿಯಲ್ಲಿ ಸದಾ ಕ್ಷೇತ್ರದ ಅಭಿವೃದ್ಧಿ ಮತ್ತು ಜನ ಸೇವೆಗೆ ಆದ್ಯತೆ ನೀಡಿದ್ದು, ಇದನ್ನು ಅರಿತಿರುವ ಮತದಾರರು ನಿರಂತರವಾಗಿ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು. ತಾಲೂಕಿನ ಹಂಪಾಪುರ ಗ್ರಾಮದಲ್ಲಿ ಸಾ.ರಾ. ಸ್ನೇಹ ಬಳಗ ವತಿಯಿಂದ ಕೊಡ ಮಾಡುತ್ತಿರುವ ಸಂಕ್ರಾಂತಿ ಹಬ್ಬದ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿರುವ ನನಗೆ ಈ ವಿಚಾರದಲ್ಲಿ ಸಂತೃಪ್ತಿ ಇದೆ ಎಂದರು.

15 ವರ್ಷಗಳ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಸಾವಿರಾರು ಕೋಟಿ ರು. ಅನುದಾನ ತಂದಿದ್ದು, ಆ ಹಣವನ್ನು ಸಮರ್ಪಕವಾಗಿ ವಿನಿಯೋಗ ಮಾಡಿರುವುದರ ಜತೆಗೆ ವೈಯಕ್ತಿಕವಾಗಿಯೂ ಕೋಟ್ಯಾಂತರ ರು. ಗಳನ್ನು ವೆಚ್ಚ ಮಾಡಿ ನಿರಂತರವಾಗಿ ಜನಸೇವೆ ಮಾಡಿದ್ದೇನೆ ಎಂದವರು ನುಡಿದರು.

Latest Videos

undefined

ನಂತರ ತಮ್ಮ ಪತ್ನಿ ಅನಿತಾ ಸಾ.ರಾ. ಮಹೇಶ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ಎಚ್‌.ಸಿ. ಕುಮಾರ್‌, ಯುವ ಜೆಡಿಎಸ್‌ ಉಪಾಧ್ಯಕ್ಷರಾದ ಯೋಗಾನಂದ, ಮನೋಹರ, ಮುಂಜನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಅನೀಪ್‌ಗೌಡ ಮತ್ತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಡನೆ ಹಂಪಾಪುರ ಗ್ರಾಮದ ಮನೆ ಮನೆಗೆ ತೆರಳಿ ಸಂಕ್ರಾಂತಿ ಹಬ್ಬದ ಕಿಟ್‌ ನೀಡಿ ಶುಭಾಶಯ ಕೋರಿದರು. ಗ್ರಾಪಂ ಸದಸ್ಯರಾದ ಪಾರ್ಥನಾಯಕ, ಕಲಾವತಿ, ರಾಮಣ್ಣ, ರಮೇಶ, ಸವಿತಾ, ಮುಖಂಡರಾದ ಹರೀಶ ನಾಯಕ, ಲೋಕೇಶ್‌ನಾಯಕ, ಕುಮಾರ್‌, ಚೆಲುವೇಗೌಡ, ಮಂಜು, ರಾಮಚಂದ್ರ ನಾಯಕ, ಭಾಸ್ಕರ್‌ ಇದ್ದರು.

ಜೆಡಿಎಸ್ ಸಾಧನೆಯನ್ನು ಜನರಿಗೆ ತಿಳಿಸಿ ಮತಯಾಚಿಸಿ

ಕೆ.ಆರ್‌. ನಗರ (ಫೆ.5) : ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಜೆಡಿಎಸ್‌ ಸಾಧನೆಗಳನ್ನು ಜನರಿಗೆ ತಿಳಿಸಿ ಮತ ಯಾಚಿಸಬೇಕು ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ತಾಲೂಕು ಯುವ ಜೆಡಿಎಸ್‌ ಕಾರ್ಯದರ್ಶಿಗಳಾಗಿ ನೇಮಕಗೊಂಡ ಹಂಪಾಪುರ ಗ್ರಾಮದ ಯೋಗಾನಂದ ಮತ್ತು ಮನೋಹರ ಅವರಿಂದ ಕೆ.ಆರ್‌. ನಗರ ಪಟ್ಟಣದ ಮುಸ್ಲಿಂ ಬಡಾವಣೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

Union Budget: ಕೇಂದ್ರ ಬಜೆಟ್‌ನಲ್ಲಿ ಅಕ್ಷರ, ಆರೋಗ್ಯ, ಅನ್ನ ಕಡೆಗಣನೆ: ಎಚ್‌. ವಿಶ್ವನಾಥ್‌ ಕಿಡಿ

ನಾನು ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ನಂಂತರ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಇದ್ದು ಮುಂದಿನ ದಿನಗಳಲ್ಲಿ ಮತ್ತಷ್ಟುಅಭಿವೃದ್ಧಿ ಮಾಡಲು ಕಂಕಣ ಬದಲಾಗಿ ಕೆಲಸ ಮಾಡಲಿದ್ದು ಇದಕ್ಕೆ ಎಲ್ಲರೂ ತಮ್ಮ ಸಹಾಯ ಮತ್ತು ಸಹಕಾರ ನೀಡಬೇಕು ಎಂದು ಅವರು ಕೋರಿದರು. ಜನರು ನಮಗೆ ಅಧಿಕಾರ ನೀಡುವುದು ಅವರ ಸೇವೆ ಮಾಡಬೇಕು ಎಂಬ ಸದುದ್ದೇಶದಿಂದ ಹಾಗಾಗಿ ಅದನ್ನು ಅರಿತಿರುವ ನಾನು ಸಮಾಜ ಮುಖಿ ಕೆಲಸ ಮಾಡುತ್ತಿದ್ದು ಮತದಾರರು ನಮ್ಮನ್ನು ನಿರಂತರವಾಗಿ ಬೆಂಬಲಿಸಿ ಆಶೀರ್ವಾದ ಮಾಡಲಿದ್ದಾರೆ ಎಂದವರು ನುಡಿದರು. ತಾಲೂಕು ಜೆಡಿಎಸ್‌ ಅಧ್ಯಕ್ಷ ಎಚ್‌.ಸಿ. ಕುಮಾರ್‌, ಯುುವ ಜೆಡಿಎಸ್‌ ಮುಖಂಡ ಎಚ್‌.ಕೆ. ಕೀರ್ತಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ನಾಗೇಶ್‌ ಮೊದಲಾದವರು ಇದ್ದರು.

ಸಾ.ರಾ. ಮಹೇಶ್‌ರ ಅಭಿವೃದ್ಧಿ ಕಾರ್ಯವೇ ಅವರನ್ನು ಗೆಲ್ಲಿಸಲಿದೆ:

ಕಳೆದ 15 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಸಾ.ರಾ. ಮಹೇಶ್‌ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ನೀಡಿರುವ ಕೊಡುಗೆಗಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಗೆಲುವಿನ ದಡ ಸೇರಿಸಲಿದೆ ಎಂದು ತಾಲೂಕು ಜೆಡಿಎಸ್‌ ವಕ್ತಾರ ಕೆ.ಎಲ…. ರಮೇಶ್‌ ಹೇಳಿದರು.

ಪಟ್ಟಣದ ಮುಸ್ಲಿಂ ಬಡಾವಣೆಯಲ್ಲಿ ಶನಿವಾರ ಸಾ.ರಾ. ಮಹೇಶ್‌ ಅವರು ವೈಯಕ್ತಿಕವಾಗಿ ಕೊಡಮಾಡುವ ಸಂಕ್ರಾಂತಿ ಹಬ್ಬದ ಕೊಡುಗೆಯ ಕಿಟ್‌ಗಳನ್ನು ಶಾಸಕರ ಪತ್ನಿ ಅನಿತಾ ಸಾ.ರಾ. ಮಹೇಶ್‌ ಅವರು ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ತಮ್ಮ ರಾಜಕೀಯ ಜೀವನದುದ್ದಕ್ಕೂ ಜನಸೇವೆ ಮಾಡುವುದನ್ನು ರೂಢಿಸಿಕೊಂಡಿರುವ ಶಾಸಕರು ಸರ್ಕಾರದ ಅನುದಾನದ ಜೊತೆಗೆ ಸ್ವಂತ ಹಣವನ್ನು ವಿನಿಯೋಗ ಮಾಡುತ್ತಿದ್ದು ಇದನ್ನು ಅರಿತಿರುವ ಎಲ್ಲರೂ ಅವರ ಬೆಂಬಲಕ್ಕೆ ನಿಂತಿದ್ದು ಈ ಬಾರಿ ಅವರ ಗೆಲುವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

click me!