ಕೊರೋನಾ ಕಾಟಕ್ಕೆ ಹುಬ್ಬಳ್ಳಿ- ಮುಂಬೈ ವಿಮಾನಯಾನ ರದ್ದು

By Kannadaprabha NewsFirst Published Mar 23, 2020, 7:24 AM IST
Highlights

ಕೊರೋನಾ ಭೀತಿ ಆರಂಭವಾದ ದಿನಗಳಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ|ಏಪ್ರಿಲ್‌ 10ರ ತನಕ ಹುಬ್ಬಳ್ಳಿ-ಹೈದರಾಬಾದ್‌ ನಡುವೆ ವಿಮಾನಯಾನ ರದ್ದು|ಶೇ. 40ರಷ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ|

ಹುಬ್ಬಳ್ಳಿ[ಮಾ.23]: ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆ ಉಂಟಾಗಿರುವ ಕಾರಣ ಇಲ್ಲಿನ ವಿಮಾನ ನಿಲ್ದಾಣದಿಂದ ಸಂಚರಿಸುತ್ತಿದ್ದ ಏರ್‌ ಇಂಡಿಯಾದ ಮುಂಬೈ ಸಂಚಾರ ಮಾ. 31 ಮತ್ತು ಹೈದ್ರಾಬಾದ್‌ಗೆ ಸಂಚರಿಸುತ್ತಿದ್ದ ವಿಮಾನ ಏ.10ರವರೆಗೆ ರದ್ದಾಗಿದೆ.

ಕೊರೋನಾ ಭೀತಿ ಆರಂಭವಾದ ದಿನಗಳಿಂದ ಶೇ. 40ರಷ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಏರ್‌ ಇಂಡಿಯಾದಿಂದ ಹುಬ್ಬಳ್ಳಿಯಿಂದ ಬೆಂಗಳೂರು, ಮುಂಬೈ, ಹೈದ್ರಾಬಾದ್‌, ಕೇರಳ, ಕಣ್ಣೂರು, ಚೆನ್ನೈ, ಕೊಚ್ಚಿ ಗೋವಾಕ್ಕೆ ವಿಮಾನಯಾನ ಸೌಲಭ್ಯ ಕಲ್ಪಿಸಿದೆ. ಇವೆಲ್ಲ ವಿಮಾನಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. 

ಕೊರೋನಾ ಸೋಂಕಿತನ ಬೇಜವಾಬ್ದಾರಿ: ಧಾರವಾಡಿಗರಿಗೆ ತಂದಿಟ್ಟ ಪಜೀತಿ!

ಹೀಗಾಗಿ ಹುಬ್ಬಳ್ಳಿ-ಮುಂಬೈ ನಡುವೆ ವಿಮಾನ ಸಂಚಾರ ಬಂದ್‌ ಮಾಡಲಾಗಿದ್ದು, ಇದು ಮಾರ್ಚ್ 31ರ ತನಕ ಮುಂದುವರಿಯಲಿದೆ. ಏಪ್ರಿಲ್‌ 10ರ ತನಕ ಹುಬ್ಬಳ್ಳಿ-ಹೈದರಾಬಾದ್‌ ನಡುವೆ ವಿಮಾನಯಾನ ರದ್ದಾಗಿದೆ.

ಮುಂಬೈ ಮತ್ತು ಹೈದರಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊರೋನಾ ಹರಡಬಹುದು ಎಂಬ ಭೀತಿಯ ಕಾರಣದಿಂದ ಏರ್‌ ಇಂಡಿಯಾ ವಿಮಾನಯಾನವನ್ನು ರದ್ದುಗೊಳಿಸಿದೆ. ವಿಮಾನಗಳು ಹುಬ್ಬಳ್ಳಿ-ಮುಂಬೈ ನಡುವೆ ಎರಡು ಸಂಚರಿಸುತ್ತಿದ್ದು, ಒಂದನ್ನು ಮಾತ್ರ ರದ್ದುಪಡಿಸಿದೆ.

ಹಳ್ಳಿಗೆ ಹೋಗದಿರಿ, ಕೊರೋನಾ ಸೋಂಕು ಹಬ್ಬಿಸದಿರಿ: ಸಿಎಂ ಮನವಿ!

ಇಂಡಿಗೊ ವಿಮಾನ ಸಂಸ್ಥೆಯ ಮಾ. 29ರಿಂದ ಹುಬ್ಬಳ್ಳಿ-ಮಂಗಳೂರು ನೇರ ವಿಮಾನಯಾನ ಆರಂಭಿಸಲಿದೆ. ಇದು ಸಂಜೆ 5.15ಕ್ಕೆ ಹುಬ್ಬಳ್ಳಿಯಿಂದ ಹೊರಟು 6.25ಕ್ಕೆ ಮಂಗಳೂರು ತಲುಪುತ್ತದೆ. ಮಂಗಳೂರಿನಿಂದ ಸಂಜೆ 6.45ಕ್ಕೆ ಹೊರಟು ರಾತ್ರಿ 7.55ಕ್ಕೆ ವಾಣಿಜ್ಯ ನಗರಿಗೆ ಬರಲಿದೆ. ಇದರಲ್ಲಿ ಯಾವುದೆ ವ್ಯತ್ಯಾಸ ಆಗಲಾರದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
 

click me!