ಕೂರೋನಾ ನಡುವೆ ಬೆಂಗ್ಳೂರಲ್ಲಿ ಹುಟ್ಟಿಕೊಂಡ ದೇಶ ವಿರೋಧಿ ಆರ್ದ್ರಾ ಪರ ವೈರಸ್‌ಗಳು

By Suvarna NewsFirst Published Mar 22, 2020, 9:45 PM IST
Highlights

ಇಡೀ ದೇಶವೇ ಕೂರೋನಾ ವೈರಸ್ ಬಗ್ಗೆ ಹೋರಾಟ ನಡೆಸುತ್ತಿದ್ದರೆ, ಕೆಲವೊಂದಿಷ್ಟು ಮಂದಿಯ ಕೆಲಸವೇ ಬೇರೆಯದ್ದಾಗಿದೆ. ಏನಾಗಿದೆ? ಈ ಕೆಳಗಿನಂತಿದೆ ನೋಡಿ.

ಬೆಂಗಳೂರು, (ಮಾ.22): ಕರ್ನಾಟಕದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಅಲ್ಲದೇ ಸರ್ಕಾರಕ್ಕೆ ಜನರು ಸಹ ಸಾಥ್ ಕೊಡುತ್ತಿದ್ದಾರೆ.

ಈ ಕೊರೋನಾ ವೈರಸ್ ಮಧ್ಯೆ ಆರ್ದ್ರಾಅಭಿಮಾನಿಗಳು ಸದ್ದು ಮಾಡಿದ್ದಾರೆ. ಇಂದು (ಭಾನುವಾರ) ಜನತಾ ಕರ್ಫ್ಯೂ ಆಚರಿಸುತ್ತಿದ್ರೆ, ಮತ್ತೊಂದೆಡೆ ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಫ್ರೀ ಆರ್ದ್ರಾ ಎಂದು ಬರಹ ಬರೆದಿದ್ದಾರೆ.

ಸಿಬಿಐ ಕಚೇರಿ ಬಳಿ ಇರುವ ಅಂಡರ್ ಪಾಸ್ ಬಳಿ ಕಿಡಿಕೇಡಿಗಳು ಫ್ರೀ ಆರ್ದ್ರಾ  ಎಂದು ಆದ್ರಾ ಪರವಾಗಿ ಗೋಡೆ ಬರಹ ಬರೆದು ಉದ್ಘಟನತನ ಮೆರೆದಿದ್ದಾರೆ.

ಅಮೂಲ್ಯ, ಆರ್ದ್ರಾ 'ಡೇಟಿಂಗ್‌ ಆ್ಯಪ್‌' ಸೀಕ್ರೆಟ್ ಔಟ್!

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಗೋಡೆ ಮೇಲೆ ಇರವ ಬರಹವನ್ನ ಅಳಿಸಿದ್ದು, ಕಿಡಿಗೇಡಿಗಳು ಹುಡುಕಾಟಕ್ಕೆ ಬಲೆ ಬೀಸಿದ್ದಾರೆ. 

ಇಡೀ ದೇಶವೇ ಮನೆಯಲ್ಲಿರುವ ಮೂಲಕ ಪ್ರಧಾನಿ ಮೋದಿ ಕರೆ ಕೊಟ್ಟ ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿದ್ದಾರೆ. ಆದ್ರೆ, ಇವರು ಮನೆಯಲ್ಲಿ ಇರಲಾರದೇ ರಸ್ತೆಗೆ ಬಂದು ಈ ಕಿತಾಪತಿ ಮಾಡಿದ್ದಾರೆ.

ಇನ್ನು ಆದ್ರಾ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಬಹಿರಂಗ ವೇದಿಕೆ ಮೇಲೆ ನಿಂತು ಪಾಕ್ ಪರ ಘೋಷಣೆ ಕೂಗಿ ಜೈಲು ವಾಸ ಅನುಭವಿಸುತ್ತಿರುವ ಅಮೂಲ್ಯ  ಪರ ಪ್ರತಿಭಟಿಸಿದ್ದ ಆರ್ದ್ರಾ ಕೂಡ ಜೈಲಿನಲ್ಲಿಯೇ ಇದ್ದಾಳೆ.

click me!