ಸ್ಮಾರ್ಟ್ ಸಿಟಿ ಯೋಜನೆಯಡಿ 10 ಸಾವಿರ ಚದರಡಿ ವ್ಯಾಪ್ತಿಯಲ್ಲಿ ನಿರ್ಮಾಗೊಂಡಿರುವ ಕಟ್ಟಡ, 80 ಬೈಕು, 172 ಕಾರ್ ನಿಲ್ಲಿಸಲು ಅವಕಾಶ, ಒಂದೇ ಅಳತೆಯುಳ್ಳ 118 ಮಳಿಗೆಗಳೂ ಇಲ್ಲಿವೆ, ಬೈಕು, ಕಾರುಗಳು ಕಟ್ಟಡದೊಳಗೆ ಬರಲು, ಹೊರಗೆ ಹೋಗಲು ಪ್ರತ್ಯೇಕ ಮಾರ್ಗ ವ್ಯವಸ್ಥೆ.
ಶಿವಮೊಗ್ಗ(ಜೂ.25): ನಗರದ ಟ್ರಾಫಿಕ್ಸ್ ಸಮಸ್ಯೆ ನಿವಾರಣೆಗೆ ಶಿವಪ್ಪ ನಾಯಕ ವೃತ್ತದ ಬಳಿ ನಿರ್ಮಾಣ ಆಗುತ್ತಿರುವ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧಗೊಳ್ಳುತ್ತಿದೆ.
ಬೆಂಗಳೂರಿನಂಥ ದೊಡ್ಡ ನಗರಗಳಲ್ಲಿ ಕಾಣಸಿಗುವ ಮಲ್ಟಿಲೆವೆಲ್ ಕಾರು ಪಾರ್ಕಿಂಗ್ ವ್ಯವಸ್ಥೆ ಈಗ ಶಿವಮೊಗ್ಗ ನಗರದಲ್ಲೂ ಲಭ್ಯವಿದ್ದು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 10 ಸಾವಿರ ಚದರ ಅಡಿ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡದಲ್ಲಿ 118 ಮಳಿಗೆಗಳು ಸಹ ಇವೆ. ಹೂವಿನ ಮಾರುಕಟ್ಟೆ, ಕಾರು-ಬೈಕ್ ಪಾರ್ಕಿಂಗ್, ಮಳೆನೀರು ಕೊಯ್ಲಿನ ವ್ಯವಸ್ಥೆ ಇದೆ. ಇದರಿಂದ ಬಿ.ಎಚ್.ರಸ್ತೆ, ಗಾಂಧಿ ಬಜಾರ್, ನೆಹರು ರಸ್ತೆಯಲ್ಲಿ ಕಾರು, ಬೈಕ್ಗಳ ಪಾರ್ಕಿಂಗ್ ಸಮಸ್ಯೆ ನೀಗಲಿದೆ. ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ಬೇಸ್ಮೆಂಟ್ ಮತ್ತು ನಾಲ್ಕು ಅಂತಸ್ತು ಹೊಂದಿದೆ. ಈ ಪೈಕಿ ನಾಲ್ಕು ಅಂತಸ್ತಿನಲ್ಲಿ ಮಾತ್ರ ಪಾರ್ಕಿಂಗ್‌ಗೆ ಅವಕಾಶವಿದೆ ಎಂದರು.
ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕೂ ಮೊದಲು ಇಲ್ಲಿ ಹೂವು, ಹಣ್ಣು, ತರಕಾರಿ ಸೇರಿದಂತೆ ವಿವಿಧ ವ್ಯಾಪಾರ ಮಳಿಗೆಗಳಿದ್ದವು. ಕಟ್ಟಡ ನಿರ್ಮಾಣಕ್ಕಾಗಿ ಅವರನ್ನು ತಾತ್ಕಾಲಿಕವಾಗಿ ಖಾಸಗಿ ಬಸ್ ನಿಲ್ದಾಣದ ಬಳಿ ಶಿಫ್ಟ್ ಮಾಡಲಾಗಿತ್ತು. ಈ ಮೊದಲೇ ಭರವಸೆ ನೀಡಿದಂತೆ ಆ ವ್ಯಾಪಾರಿಗಳಿಗೆ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡದಲ್ಲಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಒಂದೇ ಅಳತೆಯ 118 ಮಳಿಗೆ ನಿರ್ಮಿಸಲಾಗಿದೆ. ಮಳಿಗೆಗಳು ಪ್ರತ್ಯೇಕವಾಗಿದ್ದು, ರೋಲಿಂಗ್ ಶಟರ್‌ಗಳನ್ನು ಹೊಂದಿವೆ. ಗ್ರಾಹಕರು ಬಂದು ಹೋಗಲು ಸೂಕ್ತ ಸ್ಥಳಾವಕಾಶ, ಗಾಳಿ, ಬೆಳಕಿನ ವ್ಯವಸ್ಥೆ ಇದೆ.
ಶಿವಮೊಗ್ಗ: ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ದಾಳಿ: ಏಳು ಮಹಿಳೆಯರ ರಕ್ಷಣೆ
ಬೇಸ್ಮೆಂಟ್‌ನಲ್ಲಿ ಬೈಕ್ ಪಾರ್ಕಿಂಗ್:
ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಬೈಕ್ ಪಾರ್ಕಿಂಗ್‌ಗೆ ಪ್ರತ್ಯೇಕ ಸ್ಥಳವಿದೆ. ಕಟ್ಟಡದ ಬೇಸ್ಮೆಂಟ್‌ನಲ್ಲಿ ಸುಮಾರು 80 ಬೈಕ್ ನಿಲ್ಲಿಸಲು ಅವಕಾಶವಿದೆ. ಬೈಕುಗಳು ಪಾರ್ಕಿಂಗ್ ಸ್ಥಳದ ಒಳಗೆ ಹೋಗಲು ಮತ್ತು ಹೊರಬರಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಕಾರ್ ಪಾರ್ಕಿಂಗ್:
ಕಟ್ಟಡದ ಮೊದಲ ಮಹಡಿಯಿಂದ ಮೂರನೇ ಮಹಡಿವರೆಗೆ ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 172 ಕಾರುಗಳನ್ನು ಇಲ್ಲಿ ನಿಲ್ಲಿಸಬಹುದಾಗಿದೆ. ಪ್ರತಿ ಕಾರಿಗೂ ನಿರ್ದಿಷ್ಟಸ್ಥಳ ನಿಗದಿ ಮಾಡಲಾಗುತ್ತದೆ. ಕಾರುಗಳು ಕಟ್ಟಡದೊಳಗೆ ಬರಲು ಮತ್ತು ಹೊರಗೆ ಹೋಗಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡದಲ್ಲಿ ಅಗತ್ಯ ಸುರಕ್ಷಿತ ಕ್ರಮ ಕೈಗೊಳ್ಳಲಾಗಿದೆ. ಎಲೆಕ್ಟ್ರಿಕ್ ಸಬ್ ಸ್ಟೇಷನ್ ನಿರ್ಮಿಸಲಾಗುತ್ತಿದೆ. ಎಲೆಕ್ಟ್ರಿಕ್ ಸೇಫ್ಟಿವ್ಯವಸ್ಥೆ ಮಾಡಲಾಗಿದೆ. ಇನ್ನು ತುರ್ತು ಸಂದರ್ಭ ಸ್ವಯಂ ಚಾಲಿತ ಸೆನ್ಸರ್ ಆಧಾರಿತ ಫೈರ್ ಸೇಫ್ಟಿಇದೆ. ಇವುಗಳ ಪರೀಕ್ಷೆ ಮಾಡಲಾಗಿದೆ.
ಮತ್ತೆ ಹಳೇ ಜಾಗಕ್ಕೆ ಬರಲಿದೆ ಹೂವಿನ ಮಾರುಕಟ್ಟೆ
ದಶಕದ ಹಿಂದೆ ನಗರದ ಹೃದಯ ಭಾಗದಲ್ಲಿ ನಿರ್ಮಾಣ ಆಗಿರುವ ಸಿಟಿ ಸೆಂಟರ್ ಮಾಲ್‌ಗಾಗಿ ಸ್ಥಳಾಂತರ ಮಾಡಲಾಗಿದ್ದ ಹೂವಿನ ಮಾರುಕಟ್ಟೆಗೆ ಇನ್ನೂ ಶಾಶ್ವತ ನೆಲೆ ದೊರಕಿಸಲು ಮಹಾನಗರ ಪಾಲಿಕೆಗೆ ಸಾಧ್ಯವಾಗಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎಂದು ಸ್ಥಳಾಂತರ ಆಗುತ್ತಿರುವ ಹೂವಿನ ವ್ಯಾಪಾರಿಗಳಿಗೆ ಬಹು ಅಂತಸ್ತಿನ ಪಾರ್ಕಿಂಗ್ ಕಟ್ಟಡ ನಿರ್ಮಾಣದ ಸ್ಥಳದಲ್ಲೇ ಮಳಿಗೆಗಳನ್ನು ನೀಡಬೇಕು ಎಂಬ ಪಟ್ಟಿಗೆ ಕೊನೆಗೂ ಪಾಲಿಕೆ ಮಣಿದಿದೆ.
ಕೇಂದ್ರ ಸರ್ಕಾರದಿಂದ 25 ಟವರ್ ಮಂಜೂರು: ಸಂಸದ ಬಿವೈ ರಾಘವೇಂದ್ರ
2008ರಲ್ಲಿ ಸಿಟಿ ಸೆಂಟರ್ ಮಾಲ್ ನಿರ್ಮಾಣಕ್ಕಾಗಿ ಹೂವಿನ ಮಾರುಕಟ್ಟೆಯ ಹಳೇ ಕಟ್ಟಡ ಕೆಡವಲಾಗಿತ್ತು. ಆಗ ಅಲ್ಲಿದ್ದ ಹೂವಿನ ಮಾರುಕಟ್ಟೆಯನ್ನು ಶಿವಪ್ಪ ನಾಯಕ ಪ್ರತಿಮೆ ಬಳಿಯ ಜಾಗಕ್ಕೆ ಸ್ಥಳಾಂತರ ಮಾಡಲಾಗಿತ್ತು. ನೂತನ ಕಟ್ಟಡ ನಿರ್ಮಾಣದ ಬಳಿಕ ಎಲ್ಲ ಹೂವಿನ ವ್ಯಾಪಾರಸ್ಥರಿಗೂ ನೂತನ ಕಟ್ಟಡದಲ್ಲಿ ಜಾಗ ನೀಡುವ ಭರವಸೆ ನೀಡಲಾಗಿತ್ತು.
ಆದರೆ, ನಂತರ ನಿರ್ಧಾರ ಬದಲಿಸಿದ ಪಾಲಿಕೆ ಗಾರ್ಡನ್ ಏರಿಯಾದಲ್ಲಿ ಜಾಗ ಕೊಡುವ ಭರವಸೆ ನೀಡಿತ್ತು. ಅಲ್ಲಿ ಮೊದಲ ಮಹಡಿಯಲ್ಲಿ ಮಾರುಕಟ್ಟೆಗೆ ಸೂಚಿಸಿತು. ಇದಕ್ಕೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದರು. ಈಗ ಬಹು ಅಂತಸ್ತಿನ ಪಾರ್ಕಿಂಗ್ ಕಟ್ಟಡ ನಿರ್ಮಾಣದ ಸ್ಥಳದಲ್ಲೇ ಎಲ್ಲ ಹೂವಿನ ವ್ಯಾಪಾರಿಗಳಿಗೂ ಮಳಿಗೆಗಳನ್ನು ನೀಡಬೇಕು ಎಂಬ ಪಟ್ಟಿಗೆ ಕೊನೆಗೂ ಪಾಲಿಕೆ ಮಣಿದಿದ್ದು, ಶಿವಪ್ಪ ನಾಯಕ ಪ್ರತಿಮೆ ಬಳಿ ಜಾಗದಲ್ಲಿ ನಿರ್ಮಾಣ ಆಗುತ್ತಿರುವ ಬಹು ಅಂತಸ್ತಿನ ಪಾರ್ಕಿಂಗ್‌ನ ಒಂದು ಅಂತಸ್ತಿನ ಕಟ್ಟಡದಲ್ಲಿ ಹೂವಿನ ವ್ಯಾಪಾರಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.