ಬೆಂಗಳೂರು-ಬೀದರ್‌ ಹೆದ್ದಾರೀಲಿ ಗುಂಡಿಗಳದ್ದೇ ದರ್ಬಾರ್‌..!

By Kannadaprabha News  |  First Published Jun 25, 2023, 10:30 PM IST

ವೆಂಕಟಾಪುರದ ಹತ್ತಿರ ಸುಮಾರು 3 ಅಡಿ ಆಳ, 30 ಅಡಿ ಉದ್ದ ಗುಂಡಿ ಬಿದ್ದಿದೆ. ಕೃಷಿ ಸಂಶೋಧನಾ ಕೇಂದ್ರದ ಮುಂಭಾಗದ ರಸ್ತೆ ಸಂಪೂರ್ಣವಾಗಿ 20 ಅಡಿ ಕಿತ್ತು ಹೋಗಿ ಹಳೆಯ ರಸ್ತೆ ಕಾಣಿಸುತ್ತಿದೆ. ಕೊಂಗುಂಡಿ ರಸ್ತೆಯ ಮೇಲೆ 1 ಇಂಚಿನ ಗೀರಿನ ಗೆರೆಗಳು ಬಿದ್ದಿದ್ದು ವಾಹನಗಳು ತೇಲಾಡುತ್ತವೆ.


ನಾಗರಾಜ್‌ ನ್ಯಾಮತಿ

ಸುರಪುರ(ಜೂ.25):  ತಾಲೂಕಿನಲ್ಲಿ ಹಾದುಹೋಗಿರುವ ಬೆಂಗಳೂರು-ಬೀದರ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ತಗ್ಗು ಗುಂಡಿಗಳದ್ದೇ ದರ್ಬಾರ್‌. ತಾಲೂಕಿನ ಗಡಿ ಪ್ರದೇಶ ತಿಂಥಣಿ ಬ್ರಿಜ್‌ನಿಂದ ಆರಂಭವಾಗಿ ಹತ್ತಿಗೂಡೂರಿನ ಕ್ರಾಸ್‌ವರೆಗಿ​ನ 45 ಕಿ.ಮೀ ಹೆದ್ದಾ​ರಿ 12.50 ಕೋಟಿ ರು. ವೆಚ್ಚದಲ್ಲಿ 2021-22ರಲ್ಲಿ ಸೊಲ್ಲಾಪುರದ ಪಾಟೀಲ್‌ ಆ್ಯಂಡ್‌ ಕಂಪನಿ ದುರಸ್ತಿಗೊಳಿಸಿತ್ತು. ಆದ​ರೆ ಒಂದೇ ವರ್ಷ​ದ​ಲ್ಲಿ ಇದು ಗುಂಡಿ ಹೆದ್ದಾ​ರಿ​ಯಾಗಿ ಮಾರ್ಪ​ಟ್ಟಿದೆ.

Tap to resize

Latest Videos

undefined

ವೆಂಕಟಾಪುರದ ಹತ್ತಿರ ಸುಮಾರು 3 ಅಡಿ ಆಳ, 30 ಅಡಿ ಉದ್ದ ಗುಂಡಿ ಬಿದ್ದಿದೆ. ಕೃಷಿ ಸಂಶೋಧನಾ ಕೇಂದ್ರದ ಮುಂಭಾಗದ ರಸ್ತೆ ಸಂಪೂರ್ಣವಾಗಿ 20 ಅಡಿ ಕಿತ್ತು ಹೋಗಿ ಹಳೆಯ ರಸ್ತೆ ಕಾಣಿಸುತ್ತಿದೆ. ಕೊಂಗುಂಡಿ ರಸ್ತೆಯ ಮೇಲೆ 1 ಇಂಚಿನ ಗೀರಿನ ಗೆರೆಗಳು ಬಿದ್ದಿದ್ದು ವಾಹನಗಳು ತೇಲಾಡುತ್ತವೆ. ವೇಗದಲ್ಲಿ ಚಲಿಸುವ ವಾಹನಗಳ ಚಾಲಕರು, ಸವಾರರು ಕೊಂಚ ಎಚ್ಚರ ತಪ್ಪಿದರೂ ಜವರಾಯನ ಮನೆ ಸೇರೋದು ಗ್ಯಾರಂಟಿ. ಅ​ದ​ರಲ್ಲೂ ರಾತ್ರಿ ವೇಳೆ ಇಲ್ಲಿ ಸಂಚಾರ ಕಷ್ಟ​ವೇ ಎನ್ನು​ತ್ತಾ​ರೆ ದಲಿತ ಮುಖಂಡ ಮಲ್ಲಿಕಾರ್ಜುನ ಕ್ರಾಂತಿ.

ಆಧಾರ್‌ - ಗೃಹ​ಜ್ಯೋ​ತಿ ಸಮ​ಸ್ಯೆಗೆ ಜನ ಹೈರಾಣ..!

ನಿರ್ವಹಣೆ ಮಾಯ:

ನಿರ್ಮಾಣ ಮಾಡಿದ ಗುತ್ತಿ​ಗೆ​ದಾ​ರ​ರು ಮೂರು ವರ್ಷದ ನಿರ್ವಹಣೆ ಜವಾಬ್ದಾರಿ ಪಡೆದಿರುತ್ತಾರೆ. ಮೇಲುಸ್ತುವಾರಿ ಜವಾಬ್ದಾರಿ ಹೆದ್ದಾರಿ ಪ್ರಾಧಿಕಾರದ್ದು. ವರ್ಷವಾದರೂ ಒಂದು ಗುಂಡಿ​ಯನ್ನೂ ಮುಚ್ಚಿ​ಲ್ಲ. ಸಣ್ಣ ಗುಂಡಿಗಳೇ ಇಂದು ಬಾಯ್ದೆ​ರೆದು ನಿಂತಿವೆ.

ಕೇಂದ್ರ ಮತ್ತು ರಾಜ್ಯ ಸರಕಾರ ರಸ್ತೆ ದುರಸ್ತಿಗೆ 12.50 ಕೋಟಿ ರು. ಅನುದಾನ ನೀಡಿವೆ. ಗುಣಮಟ್ಟದ ಕಾಮಗಾರಿ ಮಾಡದೆ ಇರುವ ಕಾರ​ಣ ಒಂದೇ ವರ್ಷ​ದಲ್ಲಿ ಕಿತ್ತು ಹೋಗಿ​ದೆ. ಗ್ರಿಪ್‌ ಮಾಡಿ ಡಾಂಬರ್‌ ಹಾಕಬೇಕಿತ್ತು. ಹೀಗಾ​ಗದ ಕಾರ​ಣ ರಸ್ತೆ ಕಿತ್ತು ಹೋಗುತ್ತಿದೆ ಎನ್ನುತ್ತಾ​ರೆ ನಿವೃತ್ತ ಪಿಡಬ್ಲು ್ಯಡಿ ಎಎಇ .

ಆಕ್ರೋಶ:

ಚಿಕ್ಕ ಗುಂಡಿಗಳು ಬಿದ್ದಾಗಲೇ ದುರಸ್ತಿಗೆ ಹೆದ್ದಾರಿ ಅಧಿಕಾರಿಗಳು ಮುಂದಾಗಬೇಕು. ಆದರೆ, ಜನರು ಜೀವ ಕಳೆದುಕೊಳ್ಳುವವರಿಗೂ ಹಾಗೆ ಬಿಡುತ್ತಾರೆ. ಕೂಡಲೇ ರಸ್ತೆ ದುರ​ಸ್ತಿಗೆ ಅಧಿ​ಕಾ​ರಿ​ಗಳು ಮುಂದಾ​ಗ​ಬೇಕು ಎಂದು ಸಾರ್ವ​ಜ​ನಿ​ಕರು ಒತ್ತಾ​ಯಿ​ಸಿ​ದ್ದಾರೆ.

ಗ್ಯಾರಂಟಿ ಈಡೇರಿಸದೇ ಕಾಂಗ್ರೆಸ್ ವಂಚನೆ: ನಳಿನ್‌ ಕುಮಾರ್‌ ಕಟೀಲ್

ಸಂಚಾರದಲ್ಲೇ ಸ್ವಲ್ಪ ಅಲಕ್ಷ್ಯತನ ತೋರಿದರೂ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಸಾವಿರಾರು ಜನರು ಇದೇ ಹೆದ್ದಾರಿಯಲ್ಲಿ ಸಂಚರಿಸುತ್ತಾರೆ. ಕೂಡಲೇ ರಸ್ತೆ ದುರಸ್ತಿ ಮಾಡದಿ​ದ್ದ​ರೆ ಹೋರಾಟ ಮಾಡಬೇಕಾಗುತ್ತದೆ ಅಂತ ಸುರಪುರ ನಿವಾಸಿ ವೆಂಕಟೇಶ ತಿಳಿಸಿದ್ದಾರೆ. 

ಸೊಲ್ಲಾಪುರದ ಪಾಟೀಲ್‌ ಆ್ಯಂಡ್‌ ಕಂಪನಿ ಹೆದ್ದಾರಿ ಕಾಮಗಾರಿಯನ್ನು ಮಾಡಿದೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ದುರಸ್ತಿ ಪಡಿಸುವಂತೆ ಪತ್ರ ಬರೆಯಲಾಗಿದೆ. ದುರಸ್ತಿ ಮಾಡದಿದ್ದರೆ ಶೀಘ್ರದಲ್ಲೇ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಅಂತ ಯಾದಗಿರಿ ಎನ್‌.ಎಚ್‌. ಎಇಇ ಸುನೀಲ್‌ ತಿಳಿಸಿದ್ದಾರೆ. 

click me!