ಎರಡೇ ತಿಂಗಳಲ್ಲಿ ಸಿದ್ಧವಾಗಲಿದೆ ಕೊರೋನಾ ಆಸ್ಪತ್ರೆ..! ಟಾಟಾ ಗ್ರೂಪ್‌ನಿಂದ ಕೆಲಸ ಸ್ಟಾರ್ಟ್

By Kannadaprabha News  |  First Published Apr 12, 2020, 7:33 AM IST

ಗಡಿನಾಡು ಕಾಸರಗೋಡಿನಲ್ಲಿ ಈಗ ದಿಢೀರನೆ ಕೊರೋನಾ ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆ ನಿರ್ಮಾಣ ಆರಂಭಿಸಿದೆ. ಕಾಸರಗೋಡಿನ ತೆಕ್ಕಿಲ್‌ನಲ್ಲಿ ಟಾಟಾ ಗ್ರೂಫ್‌ ವತಿಯಿಂದ ಆಸ್ಪತ್ರೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಆದೇಶ ಪ್ರಕಾರ ಟಾಟಾ ಸಂಸ್ಥೆಯು ಚೆಮ್ನಾಡ್‌ ಗ್ರಾಮ ಪಂಚಾಯತ್‌ನ ತೆಕ್ಕಿಲ್‌ನಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಿದೆ.


ಮಂಗಳೂರು(ಏ.12): ಕೊರೋನಾ ಸಂದರ್ಭದಲ್ಲಿ ಕೇರಳ ರೋಗಿಗಳಿಗೆ ದ.ಕ. ಜಿಲ್ಲೆ ಮೂಲಕ ಕರ್ನಾಟಕ ಪ್ರವೇಶಕ್ಕೆ ಪದೇ ಪದೇ ವಿರೋಧ ವ್ಯಕ್ತವಾಗಿರುವುದರಿಂದ ರೋಸಿ ಹೋಗಿರುವ ಕೇರಳ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದೆ. ಗಡಿನಾಡು ಕಾಸರಗೋಡಿನಲ್ಲಿ ಈಗ ದಿಢೀರನೆ ಕೊರೋನಾ ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆ ನಿರ್ಮಾಣ ಆರಂಭಿಸಿದೆ.

ಕಾಸರಗೋಡಿನ ತೆಕ್ಕಿಲ್‌ನಲ್ಲಿ ಟಾಟಾ ಗ್ರೂಫ್‌ ವತಿಯಿಂದ ಆಸ್ಪತ್ರೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಆದೇಶ ಪ್ರಕಾರ ಟಾಟಾ ಸಂಸ್ಥೆಯು ಚೆಮ್ನಾಡ್‌ ಗ್ರಾಮ ಪಂಚಾಯತ್‌ನ ತೆಕ್ಕಿಲ್‌ನಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಿದೆ.

Latest Videos

undefined

ಆ್ಯಂಬುಲೆನ್ಸ್‌ನಲ್ಲಿ ಬಂದ ಓರ್ವ ರೋಗಿ ಕೇರಳಕ್ಕೆ ವಾಪಸ್‌..!

ಮುಂದಿನ ಎರಡು ತಿಂಗಳೊಳಗೆ 450 ಮಂದಿಗೆ ಕ್ವಾರೆಂಟ್‌ ಸೌಲಭ್ಯ ಹಾಗೂ 540 ಮಂದಿಗೆ ಐಸೊಲೇಷನ್‌ ಹಾಸಿಗೆಗಳನ್ನು ಹೊಂದಿರುವ ಚಿಕಿತ್ಸಾ ಸೌಲಭ್ಯದ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕಾಮಗಾರಿ ಭರದಿಂದ ಸಾಗುತ್ತಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾ​ಧಿಕಾರಿ ಡಾ. ಸಜಿತ್‌ ಬಾಬು ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಣಿತ ಎಂಜಿನಿಯರ್‌ಗಳ ನೇತೃತ್ವದಲ್ಲಿ ಭರದಿಂದ ಕಾಮಗಾರಿ ನಡೆಯುತ್ತಿದೆ.

ಇನ್ನೂ ಎರಡು ಆಸ್ಪತ್ರೆ ನಿರ್ಮಾಣ?-

ಈಗಾಗಲೇ ತೆಕ್ಕಿಲ್‌ನಲ್ಲಿ ತ್ವರಿತಗತಿಯಲ್ಲಿ ಆಸ್ಪತ್ರೆ ಕಾಮಗಾರಿ ನಡೆಯುತ್ತಿದ್ದರೆ, ಇನ್ನೂ ಎರಡು ಕಡೆಗಳಲ್ಲಿ ಆಸ್ಪತ್ರೆ ನಿರ್ಮಿಸಲು ಖಾಸಗಿ ಮಂದಿ ಮುಂದೆ ಬಂದಿದ್ದಾರೆ. ವಿನ್‌ ಟೆಚ್‌ ಗ್ರೂಪ್‌ನವರು ಕಾಸರಗೋಡಿನಲ್ಲಿ ಹಾಗೂ ನಾಯನ್ಮಾರ್‌ ಮೂಲೆ ಬಳಿ ಪಿ.ಬಿ.ಅಶ್ರಫ್‌ ಎಂಬ ಉದ್ಯಮಿಯೊಬ್ಬರು ಆಸ್ಪತ್ರೆ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಕೋರಿ ಕೇರಳ ಸರ್ಕಾರದ ಕದ ತಟ್ಟಿದ್ದಾರೆ ಎಂದ ಮಾಹಿತಿ ಲಭಿಸಿದೆ.

ಕೊರೋನಾ ಸೋಂಕಿತರಿಗೆ ಕೇರಳದಲ್ಲಿ ಪ್ಲಾಸ್ಮಾ ಚಿಕಿತ್ಸೆ, 3-7 ದಿನದಲ್ಲಿ ಗುಣಮುಖ

ಇದಕ್ಕೆ ಅನುಮತಿ ಸಿಕ್ಕಿದರೆ, ಕಾಸರಗೋಡು ಪರಿಸರದಲ್ಲಿ ಮೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾದಂತಾಗಲಿದೆ. ಬಳಿಕ ಕಾಸರಗೋಡಿನ ರೋಗಿಗಳಿಗೆ ಗಡಿ ದಾಟಿ ಮಂಗಳೂರು ಪ್ರವೇಶ ತಪ್ಪಲಿದೆ.

click me!