ಉಡುಪಿಯ ಶ್ರೀ ಕೃಷ್ಣನಿಗೆ ಮಹಾಭಿಷೇಕ, ಜು.10ರಂದು ಮುದ್ರಾ ಧಾರಣೆ

By Suvarna News  |  First Published Jul 9, 2022, 6:37 PM IST

* ಶ್ರೀ ಕೃಷ್ಣ ದೇವರಿಗೆ ಮಹಾಭಿಷೇಕ
* ಅಷ್ಟಮಠಗಳಲ್ಲೂ ಅಭಿಷೇಕ ವಿಶೇಷ
* ಭಾನುವಾರ ಮುದ್ರಾ ಧಾರಣೆ


ಉಡುಪಿ, (ಜುಲೈ.09): ಉಡುಪಿಯ ಕೃಷ್ಣ ಮಠ ವಿವಿಧ ಆಚರಣೆಗಳ ಮೂಲಕ ಗಮನ ಸೆಳೆಯುವ ಒಂದು ಶ್ರದ್ಧಾ ಕೇಂದ್ರ . ಶತಮಾನಗಳಿಂದಲೂ ಹಳೆ ಪರಂಪರೆ ಆಚರಣೆಗಳು, ಕೃಷ್ಣಮಠದಲ್ಲಿ ಇವತ್ತಿಗೂ ಜೀವಂತವಾಗಿವೆ . ಮಠಾಧೀಶರು ಭಕ್ತರ ಜೊತೆ ಸೇರಿ ನಡೆಸುವ ಮಹಾಭಿಷೇಕ ಇಂತಹಾ ಒಂದು ಅಪರೂಪದ ಆಚರಣೆ .

ಮೊದಲ ಏಕಾದಶಿಗೆ ಹಿಂದಿನ ದಿನ ಉಡುಪಿ ಕೃಷ್ಣನಿಗೆ ಮಹಾ ಅಭೀಷೇಕ ಮಾಡುವುದು ಸಂಪ್ರದಾಯ.ಇಂದು ಕೃಷ್ಣ ಮಠದಲ್ಲಿ ಕಡೆಗೋಲು ಕೃಷ್ಣನಿಗೆ ಮಹಾ ಅಭೀಷೇಕ ನಡೆಸುವ ಮೂಲಕ ಭಕ್ತಿಯ ಆರಾಧನೆ ನಡೆಯಿತು.ನೂರಾರು ಭಕ್ತರು  ದೇವರ ಭವ್ಯ ಮೂರ್ತಿಯನ್ನು ಕಣ್ಣುತುಂಬಿಕೊಂಡ್ರು. ಇದೇ ವೇಳೆ ಅಷ್ಟ ಮಠಾಧೀಶರು ತಮ್ಮ ತಮ್ಮ ಮಠಗಳಲ್ಲಿ, ಅಭಿಷೇಕ ನಡೆಸಿಕೊಟ್ಟರು.

Latest Videos

undefined

ಶ್ರೀಕೃಷ್ಣ ಮಠದಲ್ಲಿ ಧನ್ವಂತರಿ ಯಾಗ ಹಾಗೂ ವಾಯುಸ್ತುತಿ ಪುರಶ್ಚರಣಾ ಹೋಮದ ಫೋಟೋಗಳಿವು..!

ದಶಮಿ ದಿನವಾದ ಇಂದು  ಪಡುವಿಗೋಡೆಯ ಕೃಷ್ಣನ ಮಠದಲ್ಲಿ ಶ್ರೀ ಕೃಷ್ಣನ ಬಿಂಬಕ್ಕೆ ಮಹಾ ಬೀಷೇಕ ನಡೆಯಿತು. ಇದೆ ವೇಳೆ ಅಷ್ಟಮಠಾಧೀಶರು ತಮ್ಮ ಮಠ ಮತ್ತು ಮೂಲ ಮಠಗಳಲ್ಲಿ ಅಭಿಷೇಕದ ಸಂಪ್ರದಾಯ ನಡೆಸಿದರು .

ಗುರುವಾದಿರಾಜ ಕಾಲದಿಂದ ಅಂದ್ರೆ ಸುಮಾರು 4 ದಶಕಗಳಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ.ಪರ್ಯಾಯ  ಮಠಾಧೀಶರ ನೇತೃತ್ವದಲ್ಲಿ ಕೃಷ್ಣಮಠದಲ್ಲಿ ಅಭಿಷೇಕ ನಡೆದರೆ ಉಳಿದಂತೆ ವಿವಿಧ ಮಠಗಳಲ್ಲಿ ಅಷ್ಡಮಠಾಧೀಶರು, ಶಿಷ್ಯರೊಗೂಡಿ ಈ ಸಂಪ್ರದಾಯ ನಡೆಸಿಕೊಟ್ಟರು.

ದಶಮಿಯ ಎರಡು ದಿನಗಳ ಮುಂಚೆ ಕೃಷ್ಣನ ಬಿಂಬಕ್ಕೆ ತೆಂಗಿನ ಗರಿಯಲ್ಲಿ ಹೊಂದಿಕೆಯೊಳಗೆ  ಮುಚ್ಚಿಡುವುದು ಪದ್ಧತಿ. ಮಠಾಧೀಶರು ಸೇರಿಕೊಂಡು ಕೃಷ್ಣ ಮೂರ್ತಿಯನ್ನು ಸ್ವಚ್ಚಗೊಳ್ಳಿಸುವ ಆಚರಣೆಯು ಇಲ್ಲಿದೆ. ಕೃಷ್ಣನಿಗೆ ಜಲಾಭೀಷೇಕ ದ ಜೊತೆಗೆ ಪಂಚಾಮೃತ ಅಭೀಷೇಕ ಕೂಡ ನಡೆದಿತ್ತು. ಎಲ್ಲಾ ಅಷ್ಟಮಠಾಧೀಶರು ಸೇರಿ ನಡೆಸುವ ಈ ಗರ್ಭಗುಡಿಯ ಸ್ವಚ್ಛತಾ ಕಾರ್ಯಕ್ರಮ ನಿಜಕ್ಕೂ ಒಂದು ಅಪರೂಪದ ಸಂಪ್ರದಾಯ . ಯತಿಗಳು ಇಲ್ಲಿ ಸ್ವಚ್ಛತಾ ಸೇನಾನಿಗಳಂತೆ , ದೇವರ ಸೇವೆ ನಡೆಸುವುದೇಒಂದು ಅದ್ಭುತ ದೃಶ್ಯ !

ದೇವಳದಲ್ಲಿ ದೇವರ ಬಿಂಬಕ್ಕೆ  ದೇವಕಳೆ ಹೆಚ್ಚುವಂತೆ ಮಾಡುವ ಜೊತೆ ವರ್ಷವಿಡಿ ನಡೆಯುವ ಪೂಜೆಯ ವೇಳೆ ಉಂಟಾದ ದೋಷ ನಿವಾರಣೆಯಾಲಿ. ಲೋಕ ಕಲ್ಯಾಣವಾಗಲಿ ಎಂದು  ಪ್ರಾರ್ಥನೆ ಸಲ್ಲಿಸು ಸಲ್ಲುವಾಗಿ ಈ ಅಭೀಷೇಕ ನಡೆಯುತ್ತದೆ.

ಪುತ್ತಿಗೆ- ಕಾಣಿಯೂರು ಮಠದಲ್ಲಿ ಮಹಾಭಿಷೇಕ

ಉಡುಪಿಯ ಅಷ್ಟ ಮಠಗಳೊಂದಾದ ಪುತ್ತಿಗೆ ಮಠದಲ್ಲೂ ಈ ಅಭಿಷೇಕ ಸಂಪನ್ನಗೊಂಡಿತು .ಹಿರಿಯಡ್ಕ ಸಮೀಪದ ಶ್ರೀ ಪುತ್ತಿಗೆ ಮಠದ ಮೂಲ ಮಠದಲ್ಲಿ   ವಾರ್ಷಿಕ ಮಹಾ ಅಭಿಷೇಕದ ಪ್ರಯುಕ್ತ ದೇವರಿಗೆ ಪಂಚಾಮೃತ ಅಭಿಷೇಕವನ್ನು ಪುತ್ತಿಗೆ ಶ್ರೀಗಳಾದ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಪುತ್ತಿಗೆ ಕಿರಿಯ  ಶ್ರೀಪಾದರಾದ ಸುಶ್ರೀಂದ್ರತೀರ್ಥ ಶ್ರೀ ಪಾದರು ನೆರವೇರಿಸಿದರು.

ಉಡುಪಿಯ ಶ್ರೀ ಕಾಣಿಯೂರು ಮಠದಲ್ಲಿ ವರ್ಷಂ ಪ್ರತಿ ನಡೆಯುವ ಉದ್ವರ್ತನೆ ಸಹಿತ ಮಹಾಭಿಷೇಕ ದ ಪ್ರಯುಕ್ತ ಶ್ರೀ ಕಾಣಿಯೂರು ಮಠಾಧಿಪತಿಗಳಾದ  ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಆಷಾಢ ಶುದ್ಧ ನವಮೀ ಶುಕ್ರವಾರದಂದು ತಮ್ಮ ಚಿಕ್ಕ ಪಟ್ಟದ ದೇವರ ಸಹಿತ ಸಂಸ್ಥಾನದ ಎಲ್ಲಾ ಪ್ರತೀಕಗಳಿಗೆ ಸಿಯಾಳ (ಎಳನೀರು) ಸಹಿತ ಪಂಚಾಮೃತ ಅಭಿಷೇಕ, ವಿಶೇಷ ಕಲಶಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಿದರು.

ಭಾನುವಾರ ಮುದ್ರಾ ಧಾರಣೆ
ಮಾಧ್ವಸಂಪ್ರದಾಯದ ಅಪರೂಪದ ಆಚರಣೆ ಯಾದ ಮುದ್ರಾದಾರಣೆ ಭಾನುವಾರ ನಡೆಯಲಿದೆ. ಮಠಾಧೀಶರಿಂದ ಮುದ್ರಾ ಧಾರಣೆ ಮಾಡಿಸಿಕೊಳ್ಳುವ ತವಕದಲ್ಲಿರುವ ಸಾವಿರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.

click me!